7th Pay: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, 7 ನೇ ವೇತನದ ಬಗ್ಗೆ ಸಿದ್ದರಾಮಯ್ಯ ಮಹತ್ವದ ಆದೇಶ

ನೌಕರರ 7 ನೇ ವೇತನ ಆಯೋಗ ರಚನೆಗೆ ಸಿಎಂ ಗ್ರೀನ್ ಸಿಗ್ನಲ್.

7th Pay Latest News: ಸದ್ಯ ಕೇಂದ್ರ ಸರ್ಕಾರ ಸರ್ಕಾರೀ ನೌಕರರಿಗೆ 7 ನೇ ವೇತನದಡಿ ಸಂಬಳವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಈ ಘೋಷಣೆಯ ನಂತರ ರಾಜ್ಯ ಸರ್ಕಾರೀ ನೌಕರರು ತಮ್ಮ ವೇತನ ಹೆಚ್ಚಳದ ಘೋಷಣೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಸಾಕಷ್ಟು ಬಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಘೋಷಣೆ ಹೊರಡಿಸುವುದಾಗಿ ಹೇಳಿತ್ತು.

ಆದರೆ ವೇತನ ಹೆಚ್ಚಳದ ಬಗ್ಗೆ ಈವರೆಗೆ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ನೌಕರರು ಹಲವು ಸಮಯದಿಂದ ವೇತನ ಹೆಚ್ಚಳದ ಘೋಷಣೆಗಾಗಿ ಕಾಯುತ್ತಿದ್ದಾರೆ. ಸದ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೌಕರರ 7 ನೇ ವೇತನ ಹೆಚ್ಚಳದ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

State Govt employees
Image Credit: Original Source

ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್
ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಭರವಸೆ ನೀಡಿದ್ದರು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 1 ವರ್ಷ ಕಳೆದರೂ 7ನೇ ವೇತನ ಆಯೋಗದ ಭರವಸೆ ಈಡೇರಿಲ್ಲ. ಇದೇ ವೇಳೆ ಸರ್ಕಾರಿ ನೌಕರರು ಸಿಎಂ ಸಿದ್ದರಾಮಯ್ಯ ಅವರ ಬಳಿ ಮತ್ತೊಮ್ಮೆ ಮನವಿ ಸಲ್ಲಿಸುತ್ತಿದ್ದಾರೆ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಇದೀಗ ನೌಕರರ 7 ನೇ ವೇತನ ಆಯೋಗ ರಚನೆಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ನೌಕರರ 7 ನೇ ವೇತನ ಆಯೋಗ ರಚನೆಗೆ ಸಿಎಂ ಗ್ರೀನ್ ಸಿಗ್ನಲ್
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃತ್ವದ ನಿಯೋಗ ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಯೋಗದ ವರದಿ ಸಲ್ಲಿಕೆಯಾಗಿ ಎರಡು ತಿಂಗಳು ಕಳೆದರೂ ಶಿಫಾರಸುಗಳು ಜಾರಿಯಾಗಿಲ್ಲ. ಇದರಿಂದ ನೌಕರರ ಬದುಕು ದುಸ್ತರವಾಗಿದ್ದು, ಆದಷ್ಟು ಬೇಗ ವರದಿ ಜಾರಿಗೊಳಿಸಬೇಕು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಮನವಿ ಮಾಡಲಾಗಿದೆ.

ನೌಕರರ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಮ್ಮ ಸರ್ಕಾರ ಸರ್ಕಾರಿ ನೌಕರರ ಪರವಾಗಿದೆ. 7ನೇ ವೇತನ ಆಯೋಗದ ವರದಿ ಜಾರಿ ವಿಚಾರ ಈಗಾಗಲೇ ಸಚಿವ ಸಂಪುಟದಲ್ಲಿ ಪ್ರಸ್ತಾಪವಾಗಿದ್ದು, ನಿಯೋಗಕ್ಕೆ ಸ್ಪಷ್ಟ ಭರವಸೆ ನೀಡಿದ್ದಾರೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ವೇತನ ಭತ್ಯೆಗಳನ್ನು ಚರ್ಚಿಸಿ ಪರಿಷ್ಕರಿಸಲು ನಿಯೋಗಕ್ಕೆ ಭರವಸೆಯನ್ನು ನೀಡಿದ್ದಾರೆ.

Join Nadunudi News WhatsApp Group

7th Pay Commission Updates
Image Credit: Informalnewz

Join Nadunudi News WhatsApp Group