Dhruva Sarja: ಸಿಹಿಸುದ್ದಿ ಹಂಚಿಕೊಂಡ ಧ್ರುವ ಸರ್ಜಾ ಪತ್ನಿ ಪ್ರೇರಣಾ.

ಕನ್ನಡ ಚಿತ್ರರಂಗದ ಆಕ್ಷನ್ ಫ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ ಧ್ರುವ ಸರ್ಜಾ ಹಾಗೂ ಅವರ ಪ್ರೀತಿಯಾ ಮಡದಿ ಆಗಿರುವ ಪ್ರೇರಣಾ ಶಂಕರ್ ಅವರ ಸದ್ಯ ಇದೀಗ ಬ್ಯೂಟಿ ಸ್ಟುಡಿಯೋವೊಂದರ ಜಾಹಿರಾತಿನಲ್ಲಿ ಮೇಘನಾರಾಜ್ ಮತ್ತೆ ನಟಿಸಲಿದ್ದಾರೆ ಎಂದು ತಿಳಿಸಿದ್ದು ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಜೊತೆ ಮೇಘನ ನಟಿಸಲಿದ್ದಾರೆ ಎನ್ನಲಾಗಿದೆ. ಹೌದು ಪ್ರೇರಣಾ ಅವರು ವೃತ್ತಿಪರ ನಟಿ ಅಲ್ಲದಿದ್ದರೂ ಕೂಡ ನಟನೆ ಮಾಡಲಿದ್ದಾರೆ ಎಂಬ ಕೂತುಹಲ ಬಹಳಷ್ಟು ಜನರಿಗೆ ಇದ್ದು ಮೇಘನಾ ರಾಜ್ ಅವರಿಗೆ ಪ್ರೇರಣಾ ಶಂಕರ್ ಅವರು ಸಾಥ್ ಕೊಡಲಿದ್ದಾರೆ ಎಂಬುವಂತಹ ವಿಷಗಳು ಇದೀಗ ಕೆಲ ಮಾಧ್ಯಮ ಮೂಲಗಳಿಂದ ತಿಳಿದು ಬಂದಿದೆ.

ಹೌದು ಸುಮಾರು ಮೂರು ವರುಷಗಳಿಂದ ನಟಿ ಮೇಘನಾ ರಾಜ್ ರವರ ಬಣ್ಣದ ಬದುಕಿನಿಂದ ದೂರ ಉಳಿದಿದ್ದು ಇದೀಗ ಸಣ್ಣ ಪಾತ್ರವೊಂದನ್ನು ಮಾಡುವುದರ ಮೂಲಕ ಮತ್ತೆ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ ಎಂಬ ಸ್ಪೋಟಕ ಮಾಹಿತಿ ಇದೀಗ ಹೊರ ಬಂದಿದೆ. ಈಗಾಗಲೇ ಹಲವಾರು ಜಾಹೀರಾತುಗಳನ್ನು ನೀಡುವುದರ ಮೂಲಕ ಮತ್ತೆ ತಮ್ಮ ಕೆಲಸಕ್ಕೆ ಹಿಂದಿರುವುದನ್ನು ನಾವೆಲ್ಲರೂ ನೋಡಿದ್ದೇವೆ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಕೆಲವೊಂದು ಬ್ರಾಂಡ್ ಗೆ ಮೇಘನಾ ಅಂಬಾಸಿಡರ್ ಆಗಿರುವುದು ವಿಶೇಷ.

ಸದ್ಯ ಇದೀಗ ನಟಿ ಮೇಘನಾ ರಾಜ್ ಅವರ ಜೊತೆ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್ ಕೂಡ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದ್ದು ಈ ವಿಚಾರವನ್ನು ತಿಳಿಯುತ್ತಿದ್ದಂತೆ ಅಭಿಮಾನಿಗಳು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.  ಹೌದು ಬಲ್ಲ ಮೂಲಗಳ ಪ್ರಕಾರ ಇದೀಗ ಪ್ರೇರಣ ಶಂಕರ್ ಅವರು ಕೂಡ ಮೇಘನಾ ರಾಜ್ ಅವರ ಒಟ್ಟಿಗೆ ಸೇರಿ ನಟನೆಯನ್ನು ಮಾಡಲಿದ್ದಾರೆ.

ಇದಕ್ಕೆ ದೃವಸರ್ಜಾವರು ಬೆನ್ನೆಲುಬಾಗಿ ನಿಂತಿದ್ದಾರೆ ಎಂಬ ವಿಚಾರ ತಿಳಿದು ಬಂದಿದ್ದು ನಟಿ ಮೇಘನರಾಜ್ ರವರು ಕಳೆದ ಎರಡು ವರ್ಷಗಳಿಂದಲೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಹೌದು ಅವರ ಸದ್ಯ ಜೀವನವನ್ನು ಒಮ್ಮೆ ನೆನೆಸಿಕೊಂಡರೆ ನಿಜಕ್ಕೂ ಎಂತಹವರ ಹೃದಯ ಕೂಡ ಒಂದು ಕ್ಷಣ ಕಲಕುತ್ತದೆ. ಏಕೆಂದರೆ ಹತ್ತು ವರ್ಷದ ಪ್ರೀತಿಗೆ ಹಾಗೂ ಮೂರು ವರ್ಷದ ದಾಂಪತ್ಯ ಜೀವನಕ್ಕೆ ಅವರ ಪತಿ ಚಿರಂಜೀವಿ ಸರ್ಜಾ ಎಳ್ಳು ನೀರು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

ಹೌದು ಇದು ಪ್ರತಿಯೊಬ್ಬ ಕನ್ನಡಿಗನಿಗೂ ಕೂಡ ತಿಳಿಸಿರುವಂತಹ ವಿಚಾರವಾಗಿದ್ದು ನಟಿ ಮೇಘನರಾಜ್ ಹಾಗೂ ಚಿರಂಜೀವಿ ಸರ್ಜಾ ರವರು ಒಬ್ಬರನ್ನೊಬ್ಬರು ಬಹಳ ಇಷ್ಟಪಟ್ಟು ಮನೆಯವರ ಒಪ್ಪಿಗೆ ಮೇರಿಗೆ ವಿವಾಹ ಮಾಡಿಕೊಂಡಿದ್ದು ಆದರೆ ಈ ವಿವಾಹದ ಬಳಿಕ ಕೇವಲ ಮೂರೇ ವರ್ಷದೊಳಗೆ ಪತಿ ಚಿರಂಜೀವಿ ಸರ್ಜಾ ರವರು ಮೇಘನ ಅವರನ್ನು ಒಂಬಟ್ಟಿಯನ್ನಾಗಿ ಮಾಡಿ ಇಹಲೋಕದತ್ತ ಪ್ರಯಾಣ ನಡೆಸಿ ಬಿಟ್ಟಿದ್ದಾರೆ.

Join Nadunudi News WhatsApp Group

ಇನ್ನು ಚಿರಂಜೀವಿ ಸರ್ಜಾ ಅವರು ಅಗಲಿದಾಗ ನಟಿ ಮೇಘನರಾಜ್ ಅವರು 4 ತಿಂಗಳ ಗ’ರ್ಭಿಣಿಯಾಗಿದ್ದು ಚಿರಂಜೀವಿ ಸರ್ಜಾ ಅವರು ಅಗಲಿದ ನಂತರ ಇವರ ಬದುಕಿನಲ್ಲಿ ಭರವಸೆಯಾಗಿ ನಿಂತಿದ್ದು ಅವರ ಮಗು ರಾಯನ್ ರಾಜ್ ಸರ್ಜಾ ಅಂತಾನೆ ಹೇಳಬಹುದು. ಹೌದು ಮಗುವಿನ ಮುಖವನ್ನು ನೋಡಿಕೊಂಡು ಅವರು ತಮ್ಮ ಎಲ್ಲಾ ನೋವನ್ನು ಕೂಡ ಮರೆಯುವುದಕ್ಕೆ ಪ್ರಾರಂಭ ಮಾಡಿದ್ದಾರೆ.

ಸದ್ಯ ರಾಯನ್ ರಾಜ್ ಸರ್ಜಾ ಜನಿಸಿದ ಬಳಿಕ ನಟಿ ಮೇಘನ ರಾಜ್ ಕುಟುಂಬದಲ್ಲಿ ಮತ್ತು ಚಿರಂಜೀವಿ ಸರ್ಜಾ ಕುಟುಂಬದಲ್ಲಿ ಸಂತಸ ವಾತಾವರಣ ಮನೆ ಮಾಡಿದ್ದು ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನೋವನ್ನು ಆ ಮಗುವಿನ ಮುಖವನ್ನು ನೋಡಿ ಎರಡು ಕುಟುಂಬಸ್ಥರು ಕೂಡ ಮರೆಯುತ್ತಾರೆ ಎನ್ನಬಹುದು.

ಈಗಾಗಲೇ ಚಿರಂಜೀವಿ ಸರ್ಜಾ ಅವರ ಮಗನಿಗೆ 11 ತಿಂಗಳು ತುಂಬಿದ್ದು ಸುಮಾರು ಒಂದು ವರ್ಷಗಳ ಕಾಲ ಮಗುವಿನ ಆರೈಕೆಯಲ್ಲಿ ತೊಡಗಿದ್ದ ಮೇಘನ ರಾಜ್ ರವರು ಇದೀಗ ತಮ್ಮ ಕಾರ್ಯ ವೃತ್ತಿಗೆ ಹಿಂತಿರುಗುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Join Nadunudi News WhatsApp Group