ಶೀಘ್ರದಲ್ಲೇ ಯಶ್ ಹಾಗು ರಾಧಿಕಾ ಕಡೆಯಿಂದ ಸಿಹಿಸುದ್ದಿ, ಅಭಿಮಾನಿಗಳು ಸಂಭ್ರಮದಲ್ಲಿ

ಸದ್ಯ ನಮ್ಮ ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ ನಟಿ ರಾಧಿಕಾ ಪಂಡಿತ್ ರಾಜ್ಯಾದ್ಯಂತ ಅಭಿಮಾನಿ ಬಳವನ್ನು ಸಂಪಾದಿಸಿಕೊಂಡಿದ್ದು ಇನ್ನು ನಟ ಯಶ್ ಜೊತೆಗೆ ನಟಿ ರಾಧಿಕಾ ಪಂಡಿತ್ ಮದುವೆಯಾದ ನಂತರ ಸಿನಿಮಾರಂಗದಿಂದ ಕೊಂಚ ದೂರ ಉಳಿದು ಬಿಟ್ಟಿದ್ದಾರೆ. ಹೌದು ಆದರೆ ನಟಿ ರಾಧಿಕಾ ಯಾವಾಗ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಕಾತುರರಾಗಿದ್ದು ಇದೆ ವೇಳೆ ನಟಿ ರಾಧಿಕಾ ಪಂಡಿತ್ ತಮ್ಮ ಸಿನಿಮಾದ ಕಮ್ ಬ್ಯಾಕ್ ಬಗ್ಗೆ ಮಾತನಾಡಿದ್ದು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ ಏನಿದು ವಿಚಾರ? ನಟಿ ರಾಧಿಕಾ ಪಂಡಿತ್ ಅವರ ಹೊಸ ಸಿನಿಮಾ ಯಾವುದು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೆವೆ. ಈ ಲೇಖನಿಯನ್ನು ಸಂಪೂರ್ಣವಾಗಿ ಓದಿ.

ನಟಿ ರಾಧಿಕಾ ಪಂಡಿತ್ ರವರು ಸ್ಯಾಂಡಲ್ವುಡ್ ನ ಉತ್ತಮ ನಟಿಯರಲ್ಲಿ ಒಬ್ಬರಾಗಿದ್ದು ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಹಲವು ವರ್ಷಗಳ ಕಾಲ ಪ್ರೀತಿಸಿ ನಂತರ ತಮ್ಮ ಕುಟುಂಬದವರನ್ನು ಒಪ್ಪಿಸಿ ಮದುವೆಯಾದರು. ಹೌದು ಇನ್ನು ಮದುವೆಯ ಬಳಿಕ ನಟಿ ರಾಧಿಕಾ ಪಂಡಿತ್ ಸಿನಿಮಾರಂಗದಿಂದ ಕೊಂಚ ದೂರ ಉಳಿದು ಬಿಟ್ಟಿದ್ದು ಇನ್ನು ನಟಿ ರಾಧಿಕಾ ತಮ್ಮ ಮಕ್ಕಳಾದ ಐರಾ ಮತ್ತು ಯಥರ್ವ್ ಲಾಲನೆ ಪಾಲನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದಾರೆ. ಇನ್ನು ನಟಿ ತಮ್ಮ ಮಕ್ಕಳ ಪೋಷಣೆಯಲ್ಲಿ ಬಹಳಾನೇ ಬ್ಯುಸಿಯಾಗಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ನಟಿ ರಾಧಿಕಾ ಪಂಡಿತ್ ರವರು ಆಗಾಗ ತಮ್ಮ ಹಾಗೂ ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಬಯಸುತ್ತಾರೆ. ಇನ್ನು ನಟಿ ರಾಧಿಕಾ ಅವರು ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಲಿ ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿದ್ದು ಇನ್ನು ನಟಿಯ ಸಿನಿಮಾರಂಗದ ಕಮ್ ಬ್ಯಾಕ್ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಲ್ಲಿ ವದಂತಿಗಳು ಕೇಳಿಬರುತ್ತಿರುತ್ತದೆ.

ಸದ್ಯ ಇದೀಗ ಇತ್ತೀಚೆಗೆ ನೀಡಿದ ಸಂದರ್ಶನ ಒಂದರಲ್ಲಿ ನಟಿ ರಾಧಿಕಾ ಹಾಗೂ ಯಶ್ ಮತ್ತೆ ಒಂದಾಗಿ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದು ನಾನು ಮತ್ತು ಯಶ್ ಮತ್ತೆ ಒಂದಾಗಿ ನಟಿಸುತ್ತೇವೆ. ಒಳ್ಳೆಯ ಕಥೆ ಸಿಕ್ಕರೆ ಆ ಕಥೆಗೆ ನಮ್ಮ ಅವಶ್ಯಕತೆ ಇದ್ದರೆ ಖಂಡಿತವಾಗಿಯೂ ಆ ಸಿನಿಮಾವನ್ನು ನಾವು ಒಪ್ಪಿಕೊಂಡು ಮತ್ತೆ ಒಟ್ಟಾಗಿ ನಟಿಸುತ್ತೇವೆ ಎಂದಿದ್ದು ರಾಧಿಕಾ ಅವರ ಈ ಹೇಳಿಕೆ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಹೌದು ಆದಷ್ಟೂ ಬೇಗ ಈ ಜೋಡಿ ಒಂದಾಗಿ ಸಿನಿಮಾ ಮಾಡಲಿ ಎನ್ನುವುದು ಅಭಿಮಾನಿಗಳ ಕೋರಿಕೆಯಾಗಿದ್ದು ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Join Nadunudi News WhatsApp Group

Join Nadunudi News WhatsApp Group