ಆಧಾರ್ ಕಾರ್ಡ್ ಹೊಂದಿದವರಿಗೆ ಬಂಪರ್ ಗುಡ್ ನ್ಯೂಸ್, ಕೇಂದ್ರದಿಂದ ಜಾರಿಗೆ ಬಂದಿದೆ ಹೊಸ ಯೋಜನೆ.

ದೇಶದಲ್ಲಿ ನಿಮಗೆಲ್ಲ ತಿಳಿದಿರುವ ಹಾಗೆ ಆಧಾರ್ ಕಾರ್ಡ್ ಎಷ್ಟು ಪ್ರಾಮುಖ್ಯತೆಯನ್ನ ಹೊಂದಿದೆ ಅನ್ನುವುದರ ಅರಿವು ಸಾಮಾನ್ಯವಾಗಿ ಎಲ್ಲರಿಗೂ ಇದೆ ಎಂದು ಹೇಳಬಹುದು. ಚಿಕ್ಕ ಮಕ್ಕಳಿಂದ ಹಿಡಿದು ಹಳೆ ಮುದುಕರ ತನಕ ಆಧಾರ್ ಕಾರ್ಡ್ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಆಧಾರ್ ಕಾರ್ಡ್ ದೇಶದ ಬಹುತೇಕ ಕೆಲಸಗಳಿಗೆ ಬೇಕಾಗಿದ್ದು ಆಧಾರ್ ಕಾರ್ಡ್ ಇಲ್ಲದೆ ಕೆಲವು ಕೆಲಸಗಳನ್ನ ಮಾಡುವುದು ಅಸಾಧ್ಯ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಇನ್ನು ಕೂಡ ಆಧಾರ್ ಕಾರ್ಡ್ ಗೆ ಕುರಿತಂತೆ ಹಲವು ಸಮಸ್ಯೆಗಳು ಜನರಿಗೆ ಕಾಡುತ್ತಿದ್ದು ಈ ಸಮಸ್ಯೆಗಳನ್ನ ಪರಿಹಾರ ಮಾಡಿಕೊಳ್ಳಲು ಜನರು ನಾನಾ ರೀತಿಯಲ್ಲಿ ಕಷ್ಟಪಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಬಹುದು.

ಇನ್ನು ಈಗ ಆಧಾರ್ ಕಾರ್ಡ್ ಗೆ ಸಮಬಂಧಿಸಿದಂತೆ ಸಮಸ್ಯೆ ಅನುಭವಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಬಂಪರ್ ಗುಡ್ ನ್ಯೂಸ್ ನೀಡಿದ್ದು ಒಂದು ಕರೆಯ ಮೂಲಕ ನಿಮ್ಮ ಎಲ್ಲಾ ಸಮಸ್ಯೆಯನ್ನ ಬಗೆಹರಿಸಿಕೊಳ್ಳಬಹುದಾಗಿದೆ. ಹಾಗಾದರೆ ಏನದು ಬಂಪರ್ ಗುಡ್ ನ್ಯೂಸ್ ಮತ್ತು ದೇಶದಲ್ಲಿ ಜಾರಿಗೆ ಬಂದಿರುವ ಹೊಸ ಯೋಜನೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನ ಪರಿಹಾರ ಮಾಡಿಕೊಳ್ಳಲು ಜನರು ಆಧಾರ್ ಕೇಂದ್ರ ಮತ್ತು ಇತರೆ ಕಚೇರಿಗಳಿಗೆ ಅಲೆದಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಬಹುದು.

aadhar card toll free number

ಇನ್ನು ಈಗ ಈ ಸಮಸ್ಯೆಯನ್ನ ಪರಿಹಾರ ಮಾಡಲು ಕೇಂದ್ರ ಸರ್ಕಾರ ಈಗ ದೂರವಾಣಿ ಕರೆಯನ್ನ ಜಾರಿಗೆ ಬಂದಿದ್ದು ಈ ದೂರವಾಣಿಗೆ ಕರೆ ಮಾಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಬಹುತೇಕ ಸಮಸ್ಯೆಯನ್ನ ನೀವು ಬಗೆಹರಿಸಿಕೊಳ್ಳಬಹುದಾಗಿದೆ. ಹೌದು ಆಧಾರ್ ಕಾರ್ಡ್ ಹೊಂದಿರುವವರು ಆಧಾರ್‌ʼಗೆ ಸಂಬಂಧಿಸಿದ ಹಲವು ರೀತಿಯ ಸಮಸ್ಯೆಗಳಿಗೆ ನೀವು 1947 ಸಂಖ್ಯೆಗೆ ಕರೆ ಮಾಡುವ ಮೂಲಕ ನಿಮ್ಮ ಎಲ್ಲಾ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಬಹುದು. ಯುಐಡಿಎಐ ಟ್ವೀಟ್ ಮೂಲಕ ಇದರ ಬಗ್ಗೆ ಮಾಹಿತಿಯನ್ನ ನೀಡಿದ್ದು ಈ ದೂರವಾಣಿ ಸಂಖ್ಯೆ 12 ಭಾಷೆಗಳಲ್ಲಿ ನಿಮಗೆ ಸಹಾಯ ಮಾಡುತ್ತದೆ ಎಂದಿದೆ.

ಜನರು ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಯನ್ನ ನೀವು ದೂರವಾಣಿ ಸಂಖ್ಯೆಗೆ ಕರೆ ಮಾಡುವುದರ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಯುಐಡಿಎಐ ಟ್ವೀಟ್ ಮಾಡಿದೆ. ಹಿಂದಿ, ಇಂಗ್ಲಿಷ್, ತೆಲುಗು, ಕನ್ನಡ, ತಮಿಳು, ಮಲಯಾಳಂ, ಪಂಜಾಬಿ, ಗುಜರಾತಿ, ಮರಾಠಿ, ಒರಿಯಾ, ಬಂಗಾಳಿ, ಅಸ್ಸಾಮೀಸ್ ಮತ್ತು ಉರ್ದು ಸೇರಿ 12 ಭಾಷೆಗಳಲ್ಲಿ ಆಧಾರ್ ಸಹಾಯವಾಣಿ 1947 ಲಭ್ಯವಿದೆ ಎಂದು ಟ್ವೀಟ್ʼನಲ್ಲಿ ತಿಳಿಸಲಾಗಿದೆ.

Join Nadunudi News WhatsApp Group

aadhar card toll free number

ಇನ್ನು ಈ 1947 ಅನ್ನುವುದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ವರ್ಷವಾದ ಕಾರಣ ಜನರು ಈ ಸಂಖ್ಯೆಯನ್ನ ಬಹಳ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾಗಿದೆ. ಈ ಸಂಖ್ಯೆ ಟೋಲ್ ಫ್ರೀ ಸಂಖ್ಯೆಯಾಗಿದ್ದು ಬೆಳಿಗ್ಗೆ 7 ಘಂಟೆಯಿಂದ ರಾತ್ರಿ 11 ಘಂಟೆ ತನಕ ಈ ಸಂಖ್ಯೆ ಚಾಲ್ತಿಯಲ್ಲಿ ಇರುತ್ತದೆ ಮತ್ತು ಭಾನುವಾರ ಬೆಳಿಗ್ಗೆ 8 ಘಂಟೆಯಿಂದ ಸಂಜೆ 5 ಘಂಟೆ ತನಕ ಚಾಲ್ತಿಯಲ್ಲಿ ಇರುತ್ತದೆ. ಸ್ನೇಹಿತರೆ ಈ ಮಾಹಿತಿಯನ್ನ ಆಧಾರ್ ಕಾರ್ಡ್ ಹೊಂದಿರುವ ಎಲ್ಲರಿಗೂ ತಲುಪಿಸಿ.

Join Nadunudi News WhatsApp Group