ಉಸಿರಾಟದ ಸಮಸ್ಯೆಗೆ ದೇಶದ ಖ್ಯಾತ ನಟಿ ಇನ್ನಿಲ್ಲ, ಕರೋನದಿಂದ ಚಿತ್ರರಂಗಕ್ಕೆ ಇನ್ನೊಂದು ಆಘಾತ.

ದೇಶದಲ್ಲಿ ದಿನದಿಂದ ದಿನಕ್ಕೆ ಕರೋನ ಸೋಂಕಿತರ ಸಂಖ್ಯೆ ಯಾವ ಮಟ್ಟದಲ್ಲಿ ಏರುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ಲಕ್ಷ ಲಕ್ಷ ಜನರು ಕರೋನ ಮಹಾಮಾರಿಗೆ ತಮ್ಮ ಜೀವವನ್ನ ಕಳೆದುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸಾಮಾನ್ಯ ಜನರು ಮಾತ್ರವಲ್ಲದೆ ದೇಶದ ಚಿತ್ರರಂಗದ ಕೆಲವು ಖ್ಯಾತ ನಟ ನಟಿಯರು ಕೂಡ ಕರೋನ ಮಹಾಮಾರಿಗೆ ತಮ್ಮ ಜೀವವನ್ನ ಕಳೆದುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ದೇಶದಲ್ಲಿ ಕರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಬಹಳ ಹೆಚ್ಚಳ ಆಗುತ್ತಿದ್ದು ಜನರು ಬಹಳ ಆತಂಕದಲ್ಲಿ ಇದ್ದಾರೆ ಎಂದು ಹೇಳಬಹುದು.

ಇನ್ನು ಈಗ ದೇಶದ ಖ್ಯಾತ ನಟಿಯೊಬ್ಬರಿಗೆ ಕರೋನ ಸೋಂಕು ಕಾಣಿಸಿಕೊಂಡಿದ್ದು ಅವರು ಉಸಿರಾಟದ ಸಮಸ್ಯೆಯಿಂದ ವಿಧಿವಶರಾಗಿದ್ದಾರೆ. ಹಾಗಾದರೆ ಆ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸುಶಾಂತ್ ಸಿಂಗ್ ರಾಜಪುತ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಾಲಿವುಡ್ ಚಿತ್ರರಂಗದ ಖ್ಯಾತ ನಟರಲ್ಲಿ ಸುಶಾಂತ್ ಸಿಂಗ್ ರಾಜಪುತ್ ಅವರು ಕೂಡ ಒಬ್ಬರು ಎಂದು ಹೇಳಬಹುದು, ಆದರೆ ಈಗ ಅವರು ನಮ್ಮಜೊತೆ ಇಲ್ಲ ಅನ್ನುವುದು ಬಹಳ ನೋವಿನ ಸಂಗತಿ ಆಗಿದೆ.

Abhilasha patil

ಇನ್ನು ಸುಶಾಂತ್ ಸಿಂಗ್ ರಾಜಪುತ್ ಅಭಿನಯದ ಚಿಚೋರ್ ನಲ್ಲಿ ನಟಿಸಿದ್ದ ಅಭಿಲಾಶಾ ಪಾಟೀಲ್ ಕೊರೊನಾಕ್ಕೆ ಬಲಿಯಾಗಿದ್ದಾರೆ. ಅಭಿಲಾಶಾ ಪಾಟೀಲ್, ವಾರಣಾಸಿಯಲ್ಲಿ ಸಿನಿಮಾ ಶೂಟಿಂಗ್ ಮಾಡ್ತಿದ್ದರು. ಶೂಟಿಂಗ್ ಮುಗಿಸಿ ಮುಂಬೈಗೆ ವಾಪಸ್ ಆದವರಿಗೆ ಕೊರೊನಾ ಕಾಣಿಸಿಕೊಂಡಿದೆ. ಆರಂಭಿಕ ರೋಗಲಕ್ಷಣ ಕಾಣಿಸಿಕೊಂಡ ನಂತರ ಪರೀಕ್ಷೆ ಮಾಡಲಾಗಿತ್ತು. ಮನೆಯಲ್ಲಿಯೇ ನಟಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿನಿಂದ ಪಾರಾಗಲು ವೈದ್ಯರ ಸಲಹೆಯ ಮೇರೆಗೆ ಅಭಿಲಾಶಾ ಪಾಟೀಲ್ ಅವರು ಮನೆಯಲ್ಲಿಯೇ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದರು, ಆದರೆ ಕೆಲವು ದಿನಗಳ ಹಿಂದೆ ಅವರಿಗೆ ಉಸಿರಾಟದ ಸಮಸ್ಯೆ ಕೂಡ ಕಾಣಿಸಿಕೊಂಡಿತ್ತು.

ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅಭಿಲಾಶಾ ಪಾಟೀಲ್ ಅವರ ಆಸ್ಪತ್ರೆಗೆ ದಾಖಲು ಕೂಡ ಮಾಡಲಾಗಿತ್ತು, ಆದರೆ ಚಿಕೆತ್ಸೆ ಫಲಕಾರಿಯಾಗದೆ ಅಭಿಲಾಶಾ ಪಾಟೀಲ್ ಅವರು ವಿಧಿವಶರಾಗಿದ್ದಾರೆ. ಬದ್ರಿನಾಥ್ ಕಿ ದುಲ್ಹಾನಿಯಾ, ಗುಡ್ ನ್ಯೂಸ್, ಮಲಾಲ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿಲಾಷಾ ನಟಿಸಿದ್ದರು. ಭಿಲಾಶಾ ಪಾಟೀಲ್ ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Abhilasha patil

Join Nadunudi News WhatsApp Group