Dhruva Sarja: ಅಭಿಮಾನಿಗೆ ಸರ್ಪ್ರೈಸ್ ಕೊಟ್ಟ ಧ್ರುವ ಸರ್ಜಾ ನಿಜಕ್ಕೂ ಆಶ್ಚರ್ಯ

Actor Dhruva Sarja surprises fans: ಕನ್ನಡ ಚಿತ್ರ ರಂಗದ ಖ್ಯಾತ ನಟ ದ್ರುವ ಸರ್ಜಾ (Dhruva Sarja). ಅದ್ದೂರಿ ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಕಾಲಿಡುತ್ತಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ ದ್ರುವ ಸರ್ಜಾ ಅವರು ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿರುತ್ತಾರೆ. ಇದೀಗ ದ್ರುವ ಸರ್ಜಾ ಅಭಿಮಾನಿ ಒಬ್ಬರ ಮನೆಗೆ ಭೇಟಿ ನೀಡಿದ್ದಾರೆ. ತಮ್ಮ ಮೊದಲ ಸಿನಿಮಾ ಅದ್ದೂರಿ ಮೂಲಕ ಹಲವಾರು ಅಭಿಮಾನಿ ಬಳಗವನ್ನು ಗಳಿಸಿಕೊಂಡವರು ನಟ ದ್ರುವ ಸರ್ಜಾ.

ಅಭಿಮಾನಿ ಒಬ್ಬರ ಮನೆಯಲ್ಲಿ ನಟ ದ್ರುವ ಸರ್ಜಾ
ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ(Action Prince Dhruva Sarja) ಅಭಿಮಾನಿ ಒಬ್ಬರ ಮನೆಗೆ ಭೇಟಿ ನೀಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲ ತಾಣ (Social Media)ದಲ್ಲಿ ವೈರಲ್ ಆಗಿದ್ದು ಈ ವಿಚಾರ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮಕ್ಕೆ ನಿನ್ನೆ ರಾತ್ರಿ ಚಿತ್ರ ನಟ ದ್ರುವ ಸರ್ಜಾ ಭೇಟಿ ನೀಡಿದ್ದು ಮನೆಯವರೆಲ್ಲರಿಗೂ ಅಚ್ಚರಿ ಮೂಡಿಸಿತು.

dhruva sarja surprises a fan nadunudi kannada
Image Credit: Tv9

ಗ್ರಾಮದ ದರ್ಶನ ಮಾದರ (Darshana Madara) ಎನ್ನುವ ಯುವಕ ನಟ ದ್ರುವ ಸರ್ಜಾ ಅವರ ದೊಡ್ಡ ಅಭಿಮಾನಿ. ನಿನ್ನೆ ರಾತ್ರಿ ದ್ರುವ ಸರ್ಜಾ ಅವರು ದರ್ಶನ ಅವರ ಮನೆಗೆ ಭೇಟಿ ನೀಡಿ ತಮ್ಮ ದೊಡ್ಡ ಅಭಿಮಾನಿಯ ಆನಂದಕ್ಕೆ ಕಾರಣವಾದರು. ದರ್ಶನ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸೆಲ್ಫಿ ತೆಗೆದುಕೊಂಡು ಅವರೊಂದಿಗೆ ಸಮಯ ಕಳೆದು ಬಂದಿದ್ದಾರೆ ನಟ ದ್ರುವ ಸರ್ಜಾ.

dhruva sarja surprises a fan- nadunudi kannada
Image Credit: Tv9

ಜನರ ಮೆಚ್ಚುಗೆಗೆ ಪಾತ್ರರಾದ ನಟ ದ್ರುವ ಸರ್ಜಾ
ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಆ ಪುಟ್ಟ ಗ್ರಾಮಕ್ಕೆ ಬಂದಿದ್ದರಿಂದ ಅಲ್ಲಿನ ಯುವಕರು ಸರ್ಜಾ ಜೊತೆ ಫೋಟೋ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಇನ್ನು ದರ್ಶನ ಮಾದರ ಅವರು ಇಳಿಕಲ್ ಗ್ರಾಮದಲ್ಲಿ ದ್ರುವ ಸರ್ಜಾ ಅವರ ಹೆಸರಿನಲ್ಲೇ ಜಿಮ್ ಆರಂಭಿಸಿದ್ದಾನೆ.

ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಮಾಜಿ ಶಾಸಕ ದೊಡ್ಡನ ಗೌಡ ಪಾಟೀಲ ಅವರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ ತಾ ದ್ರುವ ಸರ್ಜಾ, ಕುಷ್ಟಗಿಗೆ ಸಮೀಪದಲ್ಲಿರುವ ಬಾಗಲಕೋಟೆ ಜಿಲ್ಲೆ ಇಳಿಕಲ್ ತಾಲೂಕಿನ ಹಿರೇಕೊಡಲಿಗೆ ಬಂದು ತಮ್ಮ ನೆಚ್ಚಿನ ಅಭಿಮಾನಿ ಮನೆಗೆ ಭೇಟಿ ನೀಡಿ ಹೋಗಿದ್ದಾರೆ. ನಟ ದ್ರುವ ಸರ್ಜಾ ಅವರ ನಡೆ ನುಡಿಗೆ ಸಾರ್ಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

Join Nadunudi News WhatsApp Group

 

View this post on Instagram

 

A post shared by Dhruva Sarja (@dhruva_sarjaa)

Join Nadunudi News WhatsApp Group