Vinod Raj Family:ಈ ಒಂದು ಕಾರಣಕ್ಕೆ ಹೆಂಡತಿ ಮತ್ತು ಮಗನನ್ನ ಇಷ್ಟು ವರ್ಷ ದೂರ ಇಟ್ಟರಂತೆ ವಿನೋದ್ ರಾಜ್, ನಿಜಕ್ಕೂ ಗ್ರೇಟ್
ಈ ಒಂದು ಕಾರಣಕ್ಕೆ ಹೆಂಡತಿ ಮತ್ತು ಮಗನನ್ನ ದೂರ ಇಟ್ಟ ವಿನೋದ್ ರಾಜ್
Actor Vinod Raj Latest News: ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಲೀಲಾವತಿ (Leelavathi) ಅವರು ವಯೋಸಹಜ ಕಾಯಿಲೆಯಿಂದ ಡಿಸೆಂಬರ್ 8 ರಂದು ಮೃತ ಪಟ್ಟರು. ನಟಿ ಲೀಲಾವತಿ ಅವರು ಹಲವು ದಿನಗಳಿಂದ ಹಾಸಿಗೆ ಹಿಡಿದ್ದಿದ್ದು, ಶುಕ್ರವಾರ ಡಿಸೆಂಬರ್ 08 ರಂದು ಮಧ್ಯಾಹ್ನ ಸಮಯದಲ್ಲಿ ಲೋ ಬಿಪಿ ಸಮಸ್ಯೆ ಶುರುವಾಗಿ, ತಕ್ಷಣವೇ ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಯಿತು.
ಚಿಕಿತ್ಯೆ ಫಲಕಾರಿ ಆಗದೆ ನಟಿ ಲೀಲಾವತಿ ಅಮ್ಮನವರು ಮೃತ ಪಟ್ಟರು. ತನ್ನ ತಾಯಿಯ ಅಗಲಿಕೆಯಿಂದ ನಟ ವಿನೋದ್ ರಾಜ್ (Vinod Raj) ಅವರು ಬಹಳ ದುಃಖಿತರಾಗಿದ್ದಾರೆ.ವಿನೋದ್ ರಾಜ್ ಅವರು ತನ್ನ ಸರ್ವಸ್ವವನ್ನು ಮುಡಿಪಿಟ್ಟು ತಾಯಿಯನ್ನು ತುಂಬಾ ಚೆನ್ನಾಗಿ ಆರೈಕೆ ಮಾಡಿದ್ದಾರೆ. ವಿನೋದ್ ರಾಜ್ ಅವರು ತಾಯಿಯನ್ನು ಕಳೆದುಕೊಂಡು ತುಂಬಾ ದುಃಖದಲ್ಲಿ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ನಟಿ ಲೀಲಾವತಿ ಅವರ ದರ್ಶನ ಪಡೆದ ಸೊಸೆ ಮತ್ತು ಮೊಮ್ಮಗ
ನಟಿ ಲೀಲಾವತಿ ಅವರ ಮರಣ ನಂತರ ವಿನೋದ ರಾಜ್ ಅವರ ಪತ್ನಿ ಅನು ಹಾಗು ಮಗ ಯುವರಾಜ್ ಅವರು ಲೀಲಾವತಿ ಅವರ ದರ್ಶನ ಮಾಡಲು ಚೆನ್ನೈನಿಂದ ಬಂದಿದ್ದರು. ಖಾಸಗಿವಾಹಿನಿ ಜತೆ ಮಾತನಾಡಿದ ನಟ ವಿನೋದ್ ರಾಜ್ ತಮ್ಮ ಪತ್ನಿ ಹಾಗೂ ಪುತ್ರನ ಬಗ್ಗೆ ಮಾತನಾಡಿದ್ದಾರೆ. ನನ್ನ ತಾಯಿ ಹೇಗೆ ನನ್ನನ್ನು ತಿದ್ದಿ ಪಾಠ ಹೇಳಿದ್ದಾರೋ ಅದೇ ರೀತಿ ಯುವರಾಜ್ ಅನ್ನು ಕೂಡ ತಮ್ಮ ಪತ್ನಿ ಬೆಳೆಸಿದ್ದಾರೆ.
ಚೆನ್ನೈಯಲ್ಲಿ ವಾಸವಾಗಿದ್ದರೂ ಕೂಡ ಕನ್ನಡ ಚೆನ್ನಾಗಿಯೇ ಮಾತನಾಡುತ್ತಾರೆ. ಮಗ ಪತ್ನಿಯ ಬಗ್ಗೆ ಏನೇನೋ ಮಾತು ಬರೋದು ಬೇಡ ಅಂತ ನನ್ನಮ್ಮ ಮದ್ರಾಸ್ನಲ್ಲಿಟ್ಟರು. ಮಗನ ವಿದ್ಯಾಭ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟೇವು. ಅವನು ಚೆನ್ನಾಗಿ ಓದಬೇಕು ಎಂಬ ಆಸೆಯಿತ್ತು. ಅದರಂತೆ ಇಂದು ಮಗ ಚೆನ್ನಾಗಿ ಓದಿ ಕೆಲಸದಲ್ಲಿದ್ದಾರೆ. ತಿಂಗಳಿಗೆ 50 ಸಾವಿರ ಸಂಬಳ ಬರುತ್ತದೆ ಎಂದು ವಿನೋದ್ ರಾಜ್ ಹೇಳಿದ್ದಾರೆ.
ಸರ್ಕಾರಿ ಗೌರವದೊಂದಿಗೆ ನಟಿ ಲೀಲಾವತಿ ಅಂತ್ಯಕ್ರಿಯೆ
ನಟಿ ಲೀಲಾವತಿ ಅಮ್ಮನವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಹಲವು ನಟ ನಟಿಯರು, ಅಭಿಮಾನಿಗಳು ಹಾಜರಿದ್ದರು. ನಟಿ ಲೀಲಾವತಿ ಅವರು ಸಾಕಷ್ಟು ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾವು ಆಶಿಸೋಣ.