ಖ್ಯಾತ ನಟಿ ಮಾನ್ಯ ಜೀವನದಲ್ಲಿ ಆಟವಾಡಿದ ದೇವರು, ನಟಿ ಮಾನ್ಯ ಪರಿಸ್ಥಿತಿ ಈಗ ಏನಾಗಿದೆ ಗೊತ್ತಾ, ಕಣ್ಣೀರು ಬರುತ್ತದೆ ನೋಡಿ.

ನಟಿ ಮಾನ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿದ ನಟಿ ಅಂದರೆ ಅದೂ ಮಾನ್ಯ ಎಂದು ಹೇಳಿದರೆ ತಪ್ಪಾಗಲ್ಲ. ಕನ್ನಡದ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟಿ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಈಗಲೂ ಕೂಡ ಹೊಂದಿದ್ದಾರೆ ಎಂದು ಹೇಳಬಹುದು. ದರ್ಶನ್ ಅವರ ಶಾಸ್ತ್ರಿ ಚಿತ್ರದಲ್ಲಿ ಬಹಳ ಒಳ್ಳೆಯ ನಟನೆಯನ್ನ ಮಾಡಿದ ನಟಿ ಮಾನ್ಯ ಅವರು ಈ ಚಿತ್ರದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿದರು ಎಂದು ಹೇಳಿದರು ಎಂದು ತಪ್ಪಾಗಲ್ಲ.

ಅನಿವಾರ್ಯ ಕಾರಣದಿಂದ ಚಿತ್ರರಂಗಕ್ಕೆ ಗುಡ್ ವ್ಯೆ ಹೇಳಿದ ನಟಿ ಮಾನ್ಯ ಅವರು ಈಗ ಈಗ ಮದುವೆಯಾಗಿದ್ದು ತಮ್ಮ ಗಂಡನ ಜೊತೆ ವಿದೇಶದಲ್ಲಿ ಜೀವನವನ್ನ ಮಾಡುತ್ತಿದ್ದಾರೆ. ಹೌದು ನಟನೆಯಿಂದ ಬಹಳ ದೂರ ಉಳಿದಿರುವ ನಟಿ ಮಾನ್ಯ ಅವರು ತಮ್ಮ ಗಂಡ ಮತ್ತು ಮಕ್ಕಳ ಜೊತೆ ನ್ಯೂಯಾರ್ಕ್ ನಲ್ಲಿ ನೆಲೆಸಿದ್ದಾರೆ. MBA ಮಾಡಿರುವ ನಟಿ ಮಾನ್ಯ ಅವರು ನ್ಯೂಯಾರ್ಕ್ ನಲ್ಲಿ ಬಹಳ ಒಳ್ಳೆಯ ಹುದ್ದೆಯಲ್ಲಿ ಇದ್ದು ಯಾವ ನಟಿಗೂ ಕಡಿಮೆ ಇಲ್ಲ ಅನ್ನುವ ಹಾಗೆ ಸಂಬಳವನ್ನ ಕೂಡ ಪಡೆದುಕೊಳ್ಳುತ್ತಿದ್ದಾರೆ.

Actress manya news

ಇನ್ನು ಈಗ ವಿಷಯಕ್ಕೆ ಬರುವುದಾದರೆ ನಟಿ ಮಾನ್ಯ ಅವರು ಈಗ ಬಹಳ ನೋವಿನಲ್ಲಿ ಅವರ ಜೀವನದಲ್ಲಿ ದೇವರು ಆಟವಾಡಿದ್ದಾನೆ ಎಂದು ಹೇಳಬಹುದು. ಇನ್ನು ಈ ವಿಷಯಯವನ್ನ ನಟಿ ಮಾನ್ಯ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು ಅಭಿಮಾನಿಗಳು ಕೂಡ ನಟಿ ಮಾನ್ಯ ಅವರಿಗೆ ಸಾಂತ್ವನದ ಮಾತನ್ನ ಹೇಳಿದ್ದಾರೆ ಎಂದು ಹೇಳಬಹುದು. ಹಾಗಾದರೆ ನಟಿ ಮಾನ್ಯ ಅವರಿಗೆ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪುಟಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ತೆರೆ ಮೇಲೆ ಮಿಂಚಿದ್ದ ಸ್ಯಾಂಡಲ್‍ವುಡ್‍ನ ಖ್ಯಾತ ನಟಿ ಮಾನ್ಯಾ ನಾಯ್ಡು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ.

ಇನ್ನು ಇದರ ಕುರಿತು ಮಾಹಿತಿ ಹಂಚಿಕೊಂಡಿರುವ ಮಾನ್ಯ ಅವರು “ಮೂರು ವಾರಗಳ ಹಿಂದಿನಿಂದ ಬೆನ್ನುರಿ ಸಮಸ್ಯೆ ಆಯ್ತು, ನನ್ನ ಎಡ ಕಾಲು ಬಹುತೇಕ ಸ್ವಾಧೀನ ಕಳೆದುಕೊಳ್ಳುವಂತಿತ್ತು, ನನಗೆ ಪಾರ್ಶ್ವವಾಯುವಾಗಿದೆ, ನನ್ನ ಬೆನ್ನುಮೂಳೆಗೆ ಇಂಜಕ್ಷನ್ ಮಾಡಲಾಯ್ತು ಮತ್ತು ಆ ಸಮಯದಲ್ಲಿ ನಾನು ತುಂಬ ಹೆದರಿದ್ದೇನು, ಕೊರೊನಾ ವೈರಸ್ ಇರೋದರಿಂದ ನಾನು ಏಕಾಂಗಿಯಾಗಿದ್ದೆ ಮತ್ತು ನಾನು ಬಹುಬೇಗ ಗುಣಮುಖಳಾಗುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದೆನೆ” ಎಂದು ಹೇಳಿದ್ದಾರೆ ಮಾನ್ಯ ಅವರು.

Join Nadunudi News WhatsApp Group

Actress manya news

ಬಹಳ ನೋವನ್ನ ಅನುಭವಿಸುತ್ತಿರುವ ಮಾನ್ಯ ಅವರಿಗೆ ಕುಳಲು, ಏಳಲು, ನಿಂತುಕೊಳ್ಳಲು ಮತ್ತು ಮಲಗಲು ಬಹಳ ಕಷ್ಟವಾಗುತ್ತಿದೆ. ಹುಷಾರಾಗಲು ಪ್ರಯತ್ನ ಮಾಡುತ್ತಿರುವ ನಟಿ ಮಾನ್ಯ ಅವರು ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು, ನನಗಾಗಿ ಪ್ರಾರ್ಥನೆ ಸಲ್ಲಿಸಿದವರೆಲ್ಲರಿಗೂ ಧನ್ಯವಾದವನ್ನ ಹೇಳಿದ್ದಾರೆ. ಜೀವನ ಸುಲಭವಲ್ಲ ಅನ್ನೋದನ್ನು ನೆನಪಿಡಿ. ಆದರೆ ಎಂದಿಗೂ ಹಿಂದೆ ಸರಿಯಬೇಡಿ ಎಂದು ತನಗಾಗಿರುವ ನೋವನ್ನು ಮಾನ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ವೈದ್ಯರು ಭರವಸೆಯನ್ನ ನೀಡಿದ್ದು ಮಾನ್ಯ ಅವರು ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂದು ಹೇಳಿದ್ದಾರೆ. ಸ್ನೇಹಿತರೆ ನಟಿ ಮಾನ್ಯ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group