Namratha Gowda YouTube Channel: ಭಯವಾಗುತ್ತಿದೆ ಅಂದ ನಾಗಿಣಿ, ರಸ್ತೆ ಅಪಘಾತದ ಬಗ್ಗೆ ಭಯ ಹೊರಹಾಕಿದ ನಮ್ರತಾ ಗೌಡ.

Actress Namratha Gowda YouTube Channel Viodes: ನಾಗಿಣಿ ಧಾರಾವಾಹಿ ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ನಮ್ರತಾ ಗೌಡ ಮೊದಲು ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಮಿಂಚಿರುವ ನಟಿ ನಂತರ ನಾಗಿಣಿ ಧಾರಾವಾಹಿ ಮೂಲಕ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡರು.

ನಟಿ ನಮ್ರತಾ ಗೌಡ ತಮ್ಮ ಬಿಡುವಿನ ವೇಳೆಯಲ್ಲಿ ಅಭಿಮಾನಿಗಳ ಜೊತೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ತಮ್ಮ ಯೂಟ್ಯೂಬ್ ಚಾನಲ್ ಅಲ್ಲಿ ಗೊತ್ತಿರದ ವಿಚಾರಗಳನ್ನು ಅವರು ಅಭಿಮಾನಿಗಳೊಂದಿಗೆ ಹೇಳಿಕೊಂಡಿದ್ದಾರೆ.

Nagini says she is scared, and Namrata Gowda expressed her fear about the accident
Image Credit: instagram

ತಮ್ಮ ಭಯವನ್ನು ಹೇಳಿಕೊಂಡ ನಟಿ ನಮ್ರತಾ ಗೌಡ
ನಟಿ ನಮ್ರತಾ ಗೌಡ ತಮ್ಮ ಯೂಟ್ಯೂಬ್ ಖಾತೆಯಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಸಾಲು ಸಾಲಾಗಿ ಉತ್ತರಿಸಿದ್ದಾರೆ. ಎಂದು ಹೇಳಿಕೊಂಡಿರದ ವಿಚಾರವನ್ನು ಅವರು ಈ ಭಾರಿ ತಮ್ಮ ಯೂಟ್ಯೂಬ್ ಚಾನಲ್ ಅಲ್ಲಿ ಹೇಳಿಕೊಂಡಿದ್ದಾರೆ.

ಅಭಿಮಾನಿಗಳು ನೀವು ಹೆಚ್ಚು ಭಯ ಪಡುವುದು ಯಾವಾಗ ಎಂದು ಕೇಳಿದ್ದಾರೆ ಅದಕ್ಕೆ ನಮ್ರತಾ ಗೌಡ ನಾನು ಎಲ್ಲಿಯೂ ಹೇಳಿಕೊಂಡಿರಲಿಲ್ಲ ಆದರೆ ನನಗೆ ಆಕ್ಸಿಡೆಂಟ್ ಮತ್ತು ಸ್ಪೀಡ್ ಆಗಿ ಹೋಗುವುದು ಅಂದರೆ ತುಂಬಾನೆ ಭಯ ಆಗುತ್ತದೆ ಎಂದು ಹೇಳಿದ್ದಾರೆ.

Namratha Gowda answered the question asked by the fans about the accident
Image Credit: instagram

ರಸ್ತೆಯಲ್ಲಿ ದೂರ ಪ್ರಯಾಣ ಮಾಡಲು ಭಯ ಎಂದು ಹೇಳಿಕೊಂಡ ನಮ್ರತಾ ಗೌಡ
ರಸ್ತೆಯಲ್ಲಿ ದೂರ ಪ್ರಯಾಣ ಮಾಡುವಾಗ ಅಥವಾ ನನ್ನ ಆಪ್ತರು ರಸ್ತೆಯಲ್ಲಿ ಪ್ರಯಾಣ ಮಾಡುತ್ತಾರೆ ಎಂದು ಗೊತ್ತಾಗುತ್ತಿದಂತೆ ಒಂದು ರೀತಿ ಭಯ ಶುರುವಾಗುತ್ತದೆ.

Join Nadunudi News WhatsApp Group

Actress Namrata Gowda spoke about road accidents
Image Credit: instagram

ನನ್ನ ತಲೆಯಲ್ಲಿ ಇಮ್ಯಾಜಿನೇಷನ್ ಕ್ರಿಯೇಟ್ ಮಾಡಿಕೊಂಡು ಭಯ ಪಡುತ್ತೇನೆ. ಎಷ್ಟೇ ಪಾಸಿಟಿವ್ ಆಗಿ ಯೋಚನೆ ಮಾಡಿದರು ನನಗೆ ಭಯ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ನಟಿ ನಮ್ರತಾ ಗೌಡ ಹೆಚ್ಚು ವಿಚಾರಗಳನ್ನು ತಮ್ಮ ಯೂಟ್ಯೂಬ್ ಚಾನಲ್ ಅಲ್ಲಿ ಹೇಳಿಕೊಂಡಿದ್ದಾರೆ.

Join Nadunudi News WhatsApp Group