Niveditha Gowda: ಸಾಯುವ ಭಯದ ಬಗ್ಗೆ ಮಾತನಾಡಿ ಅಮೆರಿಕಾಕ್ಕೆ ಹೋದ ನಟಿ ನಿವೇದಿತಾ ಗೌಡ.

ಸಾಯುವ ಭಯದಲ್ಲಿದ್ದ ಬಗ್ಗೆ ಹೇಳಿಕೊಂಡ ನಟಿ ನಿವೇದಿತಾ ಗೌಡ.

Actress Niveditha Gowda In America: ಕಿರುತೆರೆಯ ಖ್ಯಾತ ನಟಿ ನಿವೇದಿತಾ ಗೌಡ (Niveditha Gowda) ಇದೀಗ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಶೋ ಮೂಲಕ ಪರಿಚಿತರಾದ ನಟಿ ನಿವೇದಿತಾ ಗೌಡ ನಂತರ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ನಟಿ ನಿವೇದಿತಾ ಗೌಡ ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರುತ್ತಾರೆ. ಇನ್ನು ಹೆಚ್ಚು ಫೋಟೋ ಶೂಟ್ ಹಾಗು ರೀಲ್ಸ್ ಮಾಡುವ ಮೂಲಕ ಜನರ ಮನ ಗೆದ್ದಿದ್ದಾರೆ.

ನಟಿ ನಿವೇದಿತಾ ಗೌಡ
ನಟಿ ನಿವೇದಿತಾ ಗೌಡ ರೀಲ್ಸ್ ಮಾಡುವುದರಿಂದ ಟ್ರೊಲ್ ಆಗುವುದು ಇದೆ. ಇದೀಗ ನಟಿ ನಿವೇದಿತಾ ಗೌಡ ಹೇಳಿರುವ ಹೇಳಿಕೆ ಒಂದು ವೈರಲ್ ಆಗುತ್ತಿದೆ.

Actress Niveditha Gowda talks about her fear of dying.
Image Credit: News18

ಕೆಲವು ದಿನಗಳ ಹಿಂದೆ ನಟಿ ನಿವೇದಿತಾ ಗೌಡ ಶಾಕಿಂಗ್ ಹೇಳಿಕೆ ಒಂದನ್ನು ನೀಡಿದ್ದರು, ಡಿಫರೆಂಟ್ ಕಾಟನ್ ಕ್ಯಾಂಡಿ ಸೇವಿಸಬೇಕು ಎಂದು ಕೊರಮಂಗಲದಲ್ಲಿರುವ ಕ್ಯಾಂಡಿ ಅಂಗಡಿಗೆ ಭೇಟಿ ನೀಡಿ ಇಡೀ ದಿನ ಎಂಜಾಯ್ ಮಾಡಿ ವಿಡಿಯೋ ಮಾಡಿದ್ದ ನಿವೇದಿತಾ ಅವರು ತಮ್ಮ ಕೆಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಮೈಸೂರಿನಲ್ಲಿ ನಡೆದ ಘಟನೆಯನ್ನು ನೆನೆದು ಅವರು ಸಾವಿನ ಹಾದಿಯಲ್ಲಿ ಇದ್ದಿದ್ದನ್ನು ಹೇಳಿದ್ದಾರೆ.

ಸಾಯುವ ಭಯದ ಬಗ್ಗೆ ಮಾತನಾಡಿದ ನಟಿ ನಿವೇದಿತಾ ಗೌಡ
ಮೈಸೂರಿನಲ್ಲಿ ಒಮ್ಮೆ ನಾನು ಮ್ಯಾಜಿಕ್ ಪಾಪ್ ಸೇವಿಸಿದೆ. ಆಗ ಅದರ ಬಗ್ಗೆ ಹೆಚ್ಚಿಗೆ ಗೊತ್ತಿರಲಿಲ್ಲ. ನನ್ನ ಬ್ರೈನ್ ಪಾಪ್ ಆಗುತ್ತಿದೆ ಅಂದುಕೊಂಡು ಫುಲ್ ಹೆದರಿಕೊಂಡು ಸತ್ತು ಹೋಗುವೆ ಅಂದುಕೊಂಡಿದ್ದೆ.

ಮ್ಯಾಜಿಕ್ ಪಾಪ್ ಬಗ್ಗೆ ಅವರಿಗೆ ಹೇಳಿರಲಿಲ್ಲ. ಆದರೆ ಅಂದು ನನ್ನ ಲಾಸ್ಟ್‌ ದಿನ ಎಂದು ಎಂಜಾಯ್ ಮಾಡಿಕೊಂಡು ಖುಷಿಯಾಗಿದ್ದೆ. ಎರಡು ದಿನಗಳ ನಂತರ ಅದು ಚಾಕೋಲೇಟ್ ಎಂದು ತಿಳಿಯಿತ್ತು ಎಂದು ನಿವೇದಿತಾ ಹೇಳಿದ್ದರು. ಹೀಗೆ ತಾವು ಸಾಯುವ ಭಯದಲ್ಲಿದ್ದ ಬಗ್ಗೆ ಹೇಳಿದ್ದರು.

Join Nadunudi News WhatsApp Group

Actress Niveditha Gowda talks about her fear of dying.
Image Credit: Instagram

ಅಮೆರಿಕಾದಲ್ಲಿ ನಟಿ ನಿವೇದಿತಾ ಗೌಡ
ನಟಿ ನಿವೇದಿತಾ ಗೌಡ ಈ ಹೇಳಿಕೆಯನ್ನು ನೀಡಿದ ಬೆನ್ನಲ್ಲೇ ಈಗ ಅಮೆರಿಕಾಕ್ಕೆ ಹೋಗಿದ್ದಾರೆ. ನಿವೇದಿತಾ ಅವರು ಅಮೆರಿಕಾದಲ್ಲಿರುವ ಸೆಂಟ್ ಮೇರಿ ಚರ್ಚ್ ಗೆ ಭೇಟಿ ಕೊಟ್ಟಿದ್ದು ಅದರ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

Join Nadunudi News WhatsApp Group