ಚಿತ್ರರಂಗದ ಖ್ಯಾತ ಹಾಸ್ಯ ನಟ ಇನ್ನಿಲ್ಲ, ಕಣ್ಣೀರಿನಲ್ಲಿ ಇಡೀ ಭಾರತದ ಚಿತ್ರರಂಗ.

ಯಾಕೋ ಚಿತ್ರರಂಗದ ಸಮಯ ಸ್ವಲ್ಪಾನು ಸರಿ ಇಲ್ಲ ಅಂತ ಕಾಣುತ್ತದೆ. ಕಳೆದ ವರ್ಷ ಅದೆಷ್ಟೋ ಯುವನಟರು ಮತ್ತು ನಟಿಯರು ಇಹಲೋಕವನ್ನ ತ್ಯಜಿಸಿದ್ದರು ಮತ್ತು ಅದೇ ರೀತಿಯಲ್ಲಿ ಈ ವರ್ಷ ಕೂಡ ಕೆಲವು ಗಣ್ಯ ನಟರು ತಮ್ಮ ಅಗಲಿಕೆಯ ಮೂಲಕ ಅಭಿಮಾನಿಗಳಿಗೆ ಬಹಳ ಬೇಸರವನ್ನ ತರಿಸಿದ್ದರು ಎಂದು ಹೇಳಬಹುದು. ಒಂದುಕಡೆ ಕರೋನ ಮಹಾಮಾರಿ ದೇಶದಲ್ಲಿ ಆವರಿಸುತ್ತಿರುವ ಭೀತಿ ಮತ್ತು ಇನ್ನೊಂದು ಕಡೆ ಒಬ್ಬರಾದ ಮೇಲೆ ಒಬ್ಬರು ದೇಶದ ಗಣ್ಯ ನಟರು ಇಹಲೋಕವನ್ನ ತ್ಯಜಿಸುತ್ತಿರುವುದು ಅದೆಷ್ಟೋ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಈಗ ಸಾವಿನ ಸಂಖ್ಯೆ ಇನ್ನು ಕೂಡ ಮುಂದುವರೆದಿದ್ದು ಈಗ ಮತ್ತೊಬ್ಬ ದೇಶದ ಖ್ಯಾತ ನಟ ಇಹಲೋಕವನ್ನ ತ್ಯಜಿಸಿದ್ದು ಇಡೀ ದೇಶದ ಇತ್ರರಂಗವೇ ಇವರ ಅಗಲಿಕೆಗೆ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು. ಹಾಗಾದರೆ ಈ ಖ್ಯಾತ ನಟ ಯಾರು ಮತ್ತು ಇವರ ಅಗಲಿಕೆಗೆ ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ. ಹೌದು ಸ್ನೇಹಿತರೆ ತಮಿಳಿನಲ್ಲಿ ಖ್ಯಾತ ನಟ ಎನಿಸಿಕೊಂಡಿರುವ ನಟ ವಿವೇಕ್ ಇಂದು ಬೆಳಗಿನ ಜಾವ ಸುಮಾರು 4.30ಕ್ಕೆ ನಿಧನರಾಗಿದ್ದಾರೆ.

Actress Vivek no more

ನಟ ವಿವೇಕ್ ಅವರಿಗೆ ಗುರುವಾರ ಎದೆನೋವು ಕಾಣಿಸಿಕೊಂಡಿದ್ದ ಕಾರನನ್ನ ಅವರನ್ನ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ವೈದ್ಯರು ಅವರ ಆರೋಗ್ಯದ ಸ್ಥಿತಿಯನ್ನ ಪರಿಶೀಲನೆ ಮಾಡಿದಾಗ ಅವರಿಗೆ ಹೃದಯಾಘಾತ ಆಗಿರುವುದು ದೃಢಪಟ್ಟಿತ್ತು ಮತ್ತು ನಟ ವಿವೇಕ್ ಅವರ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದರು. ಇನ್ನು ವೈದ್ಯರು ಆರೋಗ್ಯ ಪರೀಕ್ಷಿಸಿದ ನಂತರ ವಿವೇಕ್ ಅವರು ICU ನಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದರು. ಹೃದ್ರೋಗ ತಜ್ಞರ ತಂಡ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿತ್ತು, ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ವಿವೇಕ್ ಏಪ್ರಿಲ್ 15 ರಂದು ಅವರ ಸ್ನೇಹಿತನೊಂದಿಗೆ ಚೆನ್ನೈನ ಒಮಾಂಡುರಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಕರೋನ ಲಸಿಕೆ ಪಡೆದಿದ್ದರು ಮತ್ತು ಕರೋನ ಲಸಿಕೆ ಪಡೆದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ವಿವೇಕ್ ಅವರು ಎಲ್ಲರೂ ಕೂಡ ಲಸಿಕೆ ಪಡೆದುಕೊಳ್ಳುವಂತೆ ವಿನಂತಿಯನ್ನ ಕೂಡ ಮಾಡಿಕೊಂಡಿದ್ದರು. ವಿವೇಕ್ ಅವರು ತಮಿಳು ಚಿತ್ರರಂಗದ ಬಹುಬೇಡಿಕೆಯ ಹಾಸ್ಯ ನಟ ನಟನಾಗಿದ್ದು ಸದ್ಯ ಇರುವ ದೇಶಾದ್ಯಂತ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸುಮಾರು 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ವಿವೇಕ್ ಅವರಿಗೆ ಭಾರತ ಸರ್ಕಾರ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಸ್ನೇಹಿತರೆ ಈ ಹಾಸ್ಯ ನಟನ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Actress Vivek no more

Join Nadunudi News WhatsApp Group