ಆಕ್ಸಿಡೆಂಟ್ ಆಗಿದ್ದ ಆದಿತ್ಯ ತಂಗಿ ರಿಷಿಕಾ ಸ್ಥಿತಿ ಈಗ ಹೇಗಿದೆ ಗೊತ್ತಾ, ತಂಗಿಯ ಬಗ್ಗೆ ಆದಿತ್ಯ ಹೇಳಿದ್ದೇನು ನೋಡಿ.

ನಟ ಆದಿತ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ನಟ ಆದಿತ್ಯ ಕೂಡ ಒಬ್ಬರು ಎಂದು ಹೇಳಬಹುದು. ಕನ್ನಡದ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟ ಆದಿತ್ಯ ಅವರು ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಮೊನ್ನೆ ಮೊನ್ನೆ ತಾನೇ ಆದಿತ್ಯ ಅವರ ಒಂದು ಘಂಟೆಯ ಕಥೆ ಅನ್ನುವ ಸಿನಿಮಾ ಕೂಡ ಬಿಡುಗಡೆಯಾಗಿದ್ದು ಎಲ್ಲಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನವನ್ನ ಕಾಣುತ್ತಿದೆ ಎಂದು ಹೇಳಬಹುದು. ಇನ್ನು ನಟ ಆದಿತ್ಯ ಅವರ ತಂಗಿ ಯಾರು ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಹೌದು ನಟ ಆದಿತ್ಯ ಅವರ ತಂಗಿ ರಿಷಿಕಾ ಅವರು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು.

ಹೌದು ರಿಷಿಕಾ ಅವರು ಕೆಲವು ಸಿನಿಮಾಗಳಲ್ಲಿ ಕೂಡ ನಟನೆಯನ್ನ ಮಾಡಿದ್ದಾರೆ. ಇನ್ನು ಈಗ ವಿಷಯಕ್ಕೆ ಬರುವುದಾದರೆ ಕೆಲವು ಸಮಯದ ಹಿಂದೆ ಆತ ದೊಡ್ಡ ಅಸಿಡೆಂಟ್ ನಲ್ಲಿ ನಟ ಆದಿತ್ಯ ಅವರ ತಂಗಿ ರಿಷಿಕಾ ಅವರಿಗೆ ಬಲವಾದ ಗಾಯಗಳಾಗಲಿ ಅವರು ಆಸ್ಪತ್ರೆ ಸೇರುವಂತಾಗಿತ್ತು ಮತ್ತು ಜನರು ಅವರ ಜೀವನವೇ ಮುಗಿಯಿತು ಎಂದು ಮಾತನಾಡಿಕೊಳ್ಳುತ್ತಿದ್ದರು. ಹಾಗಾದರೆ ನಟ ಆದಿತ್ಯ ಅವರ ತಂಗಿ ರಿಷಿಕಾ ಅವರು ಈಗ ಹೇಗಿದ್ದಾರೆ, ರಿಷಿಕಾ ಅವರ ಆದಿತ್ಯ ಹೇಳುವುದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Aditya and rishika

ಹೌದು ನಟ ಆದಿತ್ಯ ಅವರು ಬಳಿ ಮಾದ್ಯಮದವರು ತಂಗಿ ರಿಷಿಕಾ ಅವರ ಬಗ್ಗೆ ಕೇಳಿದಾಗ ಅವರು ತಂಗಿಯ ಸ್ಥಿತಿಯ ಬಗ್ಗೆ ಸ್ಪಷ್ಟನೆಯನ್ನ ಕೊಟ್ಟಿದ್ದಾರೆ. ನನ್ನ ತಂಗಿ ರಿಕವರಿ ಆಗುತ್ತಿದ್ದಾಳೆ, ರಿಕವರಿ ತುಂಬಾ ನಿಧಾನವಾಗಿ ಆಗುತ್ತಿದೆ, ಸ್ಪೈನ್ ಗೆ ಬಲವಾದ ಏಟಾಗಿರುವ ಕಾರಣ ರಿಕವರಿ ಸ್ವಲ್ಪ ತಡವಾಗುತ್ತಿದೆ ಎಂದು ಆದಿತ್ಯ ಅವರು ಹೇಳಿದ್ದಾರೆ. ಅವಳು ಈಗಲೂ ಕೂಡ ವೀಲ್ ಚೇರ್ ನಲ್ಲಿಯೇ ಇದ್ದಾಳೆ, ಈಗ ಸ್ವಲ್ಪ ಸ್ವಲ್ಪ ಎದ್ದು ನಿಲ್ಲುತ್ತಿದ್ದಾರೆ, ರಿಕವರಿ ತುಂಬಾ ಸ್ಲೋ ಪ್ರೋಸೆಸ್ ನಲ್ಲಿ ನಡೆಯುತ್ತಿದೆ ಮತ್ತು ಡಾಕ್ಟರ್ ಹೇಳುವ ಪ್ರಕಾರ ಅವಳು ರಿಕವರಿ ಆಗಲು ಆರರಿಂದ ಒಂದು ವರ್ಷ ಬೇಕಾಗುವ ಸಾಧ್ಯತೆ ಇದೆ.

ಈಗ ನನ್ನ ತಂಗಿ ತುಂಬಾ ರಿಕವರಿ ಆಗಿದ್ದಾಳೆ, ಇನ್ನೇನು ನಡೆಯುವುದು ಮಾತ್ರ ಬಾಕಿ ಉಳಿದುಕೊಂಡಿದೆ ಮತ್ತು ಇನ್ನೇನು ಒಂದು ಅಥವಾ ಎರಡು ತಿಂಗಳು ಅವಳು ರಿಕವರಿ ಆಗುತ್ತಾಳೆ ಎಂದು ತಮ್ಮ ತಂಗಿಯ ಆರೋಗ್ಯದ ಬಗ್ಗೆ ಮಾಹಿತಿಯನ್ನ ಕೊಟ್ಟಿದ್ದಾರೆ ನಟ ಆದಿತ್ಯ ಅವರು. ಆ ಘಟನೆ ನನ್ನ ಕುಟುಂಬಕ್ಕೆ ದೊಡ್ಡ ಆಘಾತವನ್ನ ಉಂಟುಮಾಡಿತ್ತು, ಆದರೆ ನನಗೆ ಹೆಮ್ಮೆ ಆಗುತ್ತಿದೆ ನನ್ನ ತಂಗಿ ತುಂಬಾ ಸ್ಟ್ರಾಂಗ್, ನನ್ನ ತಂಗಿಗೆ ಸಿನಿಮಾ ನಿರ್ದೇಶನ ಮಾಡುವ ಆಸೆ ಮತ್ತು ಅದಕ್ಕೆ ನನ್ನ ಸಹಕಾರ ಇದೆ ಎಂದು ಹೇಳಿದ್ದಾರೆ ಆದಿತ್ಯ ಅವರು. ಏನೇ ಆಗಲಿ ರಿಷಿಕಾ ಅವರ ಆದಷ್ಟು ಬೇಗ ಸುಧಾರಿಸಿಕೊಳ್ಳಲಿ ಎಂದು ನಾವು ಕೂಡ ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Aditya and rishika

Join Nadunudi News WhatsApp Group