ರಾಧಿಕಾ ಪಂಡಿತ್ ಮಗಳು ಐರಾ ಮನೆಯಲಿ ಒಟ್ಟು ಎಷ್ಟು ಭಾಷೆ ಮಾತಾಡುತ್ತಾಳೆ ಗೊತ್ತಾ, ನೋಡಿ

ಕನ್ನಡ ಸಿನಿಲೋಕದಲ್ಲಿ ನಟರನ್ನು ಅಭಿಮಾನಿಗಳು ಹೇಗೆ ಮೆಚ್ಚಿಕೊಳ್ಳುತ್ತಾರೋ ಅದೇ ರೀತಿ ಅವರ ಮಕ್ಕಳು ಹಾಗು ಕುಟುಂಬದ ಬಗ್ಗೆಯೂ ಕೂಡ ಅಷ್ಟೇ ಅಪಾರವಾದ ಪ್ರೀತಿಯನ್ನು ಅಭಿಮಾನಿಗಳು ತೋರುತ್ತಾರೆ. ಈಗಂತೂ ಸಾಮಾಜಿಕ ಜಾಲತಾಣದ ಲೋಕ, ಪ್ರತಿದಿನ ಮನೆಯಲ್ಲಿ ಆಗುವ ವಿಷಯಗಳೆಲ್ಲ ಸಾಮಾನ್ಯವಾಗಿ ಎಲ್ಲಾ ನಟ ನಟಿಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಕಾಮನ್ ಆಗಿಬಿಟ್ಟಿದೆ.

ಅದರಲ್ಲಂತೂ ಕನ್ನಡ ನಂತರ ಮಕ್ಕಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಸುದ್ದಿಯಾಗಿದ್ದು ಎಂದರೆ ಯಶ್ ಮಕ್ಕಳಾದ ಐರಾ ಹಾಗು ಯಥರ್ವ. ಇವರಿಬ್ಬರ ತುಂಟಾಟಗಳನ್ನು ರಾಧಿಕಾ ಯಾವಾಗಲು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹಾಕುತ್ತಾರೆ. ಇನ್ನು ಅಭಿಮಾನಿಗಳು ಕೂಡ ಈ ವಿಡಿಯೋ ನೋಡಿ ಎಂಜಾಯ್ ಮಾಡುತ್ತಾರೆ.Yash Feeding Ice Cream To Daughter Ayra Yash | New Cute Video of Ayra - YouTube

ಅಂದಹಾಗೆ, ಕಳೆದೆರಡು ತಿಂಗಳ ಹಿಂದೆ, ಪುತ್ರಿ ಐರಾ ಜೊತೆಗೆ ಯಶ್ ಸಮಯ ಕಳೆದಿದ್ದರು. ಹೌದು, ಕನ್ನಡ ವರ್ಣಮಾಲೆಯ ಅಕ್ಷರವನ್ನು ಹೇಳಿಕೊಟ್ಟಿದ್ದರು. ಯಶ್ ಮಗಳು ಐರಾಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಅ ಆ ಇ ಈ ಹೇಳಿಕೊಡುತ್ತಿರುವ ವಿಡಿಯೋಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ರಾಧಿಕಾ ಪಂಡಿತ್ ಶೇರ್ ಮಾಡಿದ್ದರು. ಈ ವಿಡಿಯೋಗೆ ವೀಕೆಂಡ್ ಸ್ಪೆಷಲ್ ಕ್ಲಾಸ್ ಎಂದು ಬರೆದುಕೊಂಡಿದ್ದರು.

ಅಪ್ಪ ಮಗಳ ಈ ವಿಡಿಯೋವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಜನವರಿ 8 ರಂದು ಯಶ್ ಹುಟ್ಟು ಹಬ್ಬದ ದಿನ. ಆ ದಿನವೇ ಪೋಸ್ಟರ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಗೆ ಸಂತಸ ನೀಡಿತ್ತು. ಅಷ್ಟೇ ಅಲ್ಲದೇ, ಅಪ್ಪನ ಹುಟ್ಟುಹಬ್ಬಕ್ಕೆ ಪುತ್ರಿ ಐರಾ ಹಾಗೂ ಯಥರ್ವ್ ವಿಶೇಷವಾದ ಉಡುಗೊರೆಯನ್ನು ನೀಡಿದ್ದರು. ಈ ಉಡುಗೊರೆಯ ಫೋಟೋ ಎಲ್ಲೆಡೆ ವೈರಲ್ ಆಗಿತ್ತು.Photo alert! Yash and Radhika's daughter Ayra beats the heat with Mom made watermelon popsicles | Kannada Movie News - Times of India

ಇನ್ನೂ, ಈ ಉಡುಗೊರೆಯ ಫೋಟೋವನ್ನು ರಾಧಿಕಾ ಪಂಡಿತ್​ ಅವರು ಇನ್​ಸ್ಟಾಗ್ರಾಮ್​ ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಹೃದಯದ ಚಿತ್ರ ಬರೆದು, ಅದರೊಳಗೆ ಐರಾ ಮತ್ತು ಯಥರ್ವ್​ ಅಂಗೈ ಮುದ್ರೆ ಒತ್ತಿದ್ದರು. ಈ ವಿಡಿಯೋ ನೋಡಿದ ಯಶ್ ರಾಧಿಕಾ ಅಭಿಮಾನಿಗಳು ಖುಷಿಪಟ್ಟಿದ್ದರು.ಈ ಹಿಂದೆ ಅಪ್ಪ ಅಮ್ಮನನ್ನು ಫೋಟೋದಲ್ಲಿ ಗುರುತಿಸುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿತ್ತು.

Join Nadunudi News WhatsApp Group

ಆದಲ್ಲದೆ, ರಾಧಿಕಾರವರು ಐರಾಳ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಗ ಅಭಿಮಾನಿಗಳು ಸ್ವಲ್ಪ ಗರಂ ಆಗಿದ್ದರು. ರಾಧಿಕಾ ಪಂಡಿತ್ ಅವರು ಕೊಂಕಣಿ ಭಾಷೆಯಲ್ಲಿ ಮಗಳಿಗೆ ಅಪ್ಪ ಅಮ್ಮನ ಬಗ್ಗೆ ಕೇಳಿದ್ದರು. ರಾಧಿಕಾರು ಮಗಳ ಜೊತೆಯಲ್ಲಿ ಕೊಂಕಣಿಯಲ್ಲಿ ಮಾತನಾಡುವುದನ್ನು ಕಂಡು, ಸ್ವಲ್ಪ ಗರಂ ಆಗಿದ್ದ ನೆಟ್ಟಿಗರು ಕನ್ನಡ ಕಲಿಸಿ ಎಂದಿದ್ದರು. ಇದೀಗ ಐರಾಳಿಗೆ ಮೂರು ವರ್ಷ ತುಂಬಿದೆ.Watch: Yash and Radhika's daughter Ayra is doting sister to baby brother Yatharv in latest video

ಯಾವೆಲ್ಲಾ ಭಾಷೆಯನ್ನು ಮಾತನಾಡುತ್ತಾಳೆ ಕೇಳಿದ್ದರೆ ಅಚ್ಚರಿ ಪಡ್ತೀರಾ. ಹೌದು, ರಾಧಿಕಾ ಪಂಡಿತ್ ಅವರ ಮಾತೃ ಭಾಷೆ ಕೊಂಕಣಿ, ಹಾಗೂ ಯಶ್ ಅವರ ಮಾತೃ ಭಾಷೆ ಕನ್ನಡ, ಜೊತೆಗೆ ಇಂಗ್ಲಿಷ್ ಭಾಷೆಯನ್ನು ಕಲಿಸಿದ್ದಾರೆ ಯಶ್ ದಂಪತಿಗಳು. ಹೌದು ಮೂರು ಭಾಷೆಯನ್ನು ಚೆನ್ನಾಗಿ ಮಾತನಾಡುವ ಐರಾಳು ಓದಿನಲ್ಲಿಯೂ ಮುಂದೆ ಇದ್ದಾಳೆ. ಒಟ್ಟಿನಲ್ಲಿ ರಾಧಿಕಾ ಹಾಗೂ ಯಶ್ ಫ್ಯಾನ್ಸ್ ಬಳಗ ಇಬ್ಬರೂ ಮಕ್ಕಳ ಮುದ್ದಾದ ವಿಡಿಯೋ ಫೋಟೋಗಳನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ.

Join Nadunudi News WhatsApp Group