ಚಾಲಕರ ಪಕ್ಕದಲ್ಲಿ ಕುಳಿತು ಪ್ರಯಾಣ ಮಾಡುವವರಿಗೆ ಜಾರಿಗೆ ಬಂದಿದೆ ಹೊಸ ನಿಯಮ, ದಂಡ ಕಡ್ಡಾಯ.

ವಾಹನವನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ಓಡಿಸುತ್ತಾರೆ ಎಂದು ಹೇಳಬಹುದು. ಹೌದು ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ವಾಹನಗಳು ಇದ್ದು ಪ್ರತಿಯೊಬ್ಬರೂ ಕೂಡ ವಾಹನದಲ್ಲಿ ಸವಾರಿ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ವಾಹನ ಚಲನೆಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ನಿಯಮಗಳನ್ನ ಜಾರಿಗೆ ತಂದಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಮತ್ತು ಈಗಲೂ ಕೂಡ ಅನೇಕ ನಿಯಮಗಳನ್ನ ದೇಶದಲ್ಲಿ ಜಾರಿಗೆ ತರಲಾಗುತ್ತಿದೆ. ಇನ್ನು ಅನುಕೂಲದ ದೃಷ್ಟಿಯಿಂದ ಮತ್ತು ದೇಶದಲ್ಲಿ ಅಪಘಾತಗಳನ್ನ ಕಡಿಮೆ ಮಾಡುವ ಉದ್ದೇಶದಿಂದ ದೇಶದಲ್ಲಿ ಅನೇಕ ನಿಯಮಗಳನ್ನ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಕಾರುಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಚಲಿಸುತ್ತಾರೆ ಎಂದು ಹೇಳಬಹುದು, ಆದರೆ ಈಗ ಈಗ ಕಾರ್ ಓಡಿಸುವವರನ್ನ ಬಿಟ್ಟು ಬದಿಯಲ್ಲಿ ಕುಳಿತುಕೊಳ್ಳುವವರಿಗೆ ಹೊಸ ನಿಯಮವನ್ನ ಜಾರಿಗೆ ತರಲಾಗಿದ್ದು ಜನರು ಈ ನಿಯಮವನ್ನ ಗಮನದಲ್ಲಿ ಇರಿಸಿಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. ಹಾಗಾದರೆ ದೇಶದಲ್ಲಿ ಜಾರಿಗೆ ಬಂದಿರುವ ಆ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಿಯಮಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Airbag in car

ಹೌದು ಕಾರಿನ ಮುಂಭಾಗದ ಆಸನಕ್ಕಾಗಿ ಎಲ್ಲಾ ಕಾರು ತಯಾರಿಸುವ ಕಂಪನಿಗಳನ್ನು ಏರ್‌ಬ್ಯಾಗ್‌ಗಳಿಗೆ ಕಡ್ಡಾಯಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಹೌದು ಚಾಲಕರ ಪಕ್ಕದಲ್ಲಿ ಅಂದರೆ ವಾಹನದ ಮುಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರ ಸೀಟಿಗೂ ಕೂಡ ಏರ್ ಬ್ಯಾಗ್ ಕಡ್ಡಾಯಗೊಳಿಸುವಂತೆ ರಸ್ತೆ ಮತ್ತು ಸಾರಿಗೆ ಸಚಿವಾಲಯ ಈ ಪ್ರಸ್ತಾಪವನ್ನು ಮುಂದಿಟ್ಟಿದೆ. ಇನ್ನು ಈ ಪ್ರಸ್ತಾವನೆ ಅತೀ ಶೀಘ್ರದಲ್ಲೇ ಜಾರ್ಫಿಗೆ ಬರುವ ಲಕ್ಷಣ ಕೂಡ ಇದೆ ಎಂದು ಹೇಳಲಾಗುತ್ತಿದೆ ಮತ್ತು ಯಾವುದೇ ವೆಚ್ಚದಲ್ಲಿ ಭದ್ರತಾ ಕ್ರಮಗಳೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಭಾರತ ಸರ್ಕಾರವು ಸ್ಪಷ್ಟಪಡಿಸಿದೆ.

ಇನ್ನು ಹೊಸ ನಿಯಮಗಳಿಗೆ ಸಂಬಂಧಿಸಿದಂತೆ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಭಾರತದಲ್ಲಿ, ಹೊಸ ಕಾರುಗಳ ಮೇಲೆ ಈ ಪ್ರಸ್ತಾಪವನ್ನು ಜಾರಿಗೆ ತರಲು ಅಸ್ತಿತ್ವದಲ್ಲಿರುವ ಕಾರುಗಳಿಗೆ 1 ಏಪ್ರಿಲ್ 2021 ಮತ್ತು 31 ಆಗಸ್ಟ್ 2021 ರವರೆಗೆ ಗಡುವು ನಿಗದಿಪಡಿಸಲಾಗಿದೆ. ವಾಹನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸುರಕ್ಷತೆ ಬಹಳ ಮುಖ್ಯ, ಏರ್‌ಬ್ಯಾಗ್ ಯಾವುದೇ ವಾಹನಗಳಿಗೆ ಜೀವ ಉಳಿಸುವ ವೈಶಿಷ್ಟ್ಯವಾಗಿದ್ದು, ಈಗ ಅದನ್ನು ಪ್ರತಿಯೊಂದು ಕಾರಿನಲ್ಲಿಯೂ ನೀಡಲಾಗುತ್ತಿದೆ.

Join Nadunudi News WhatsApp Group

Airbag in car

ಆಟೋಮೋಟಿವ್ ಉದ್ಯಮದ ಮಾನದಂಡದ ಪ್ರಕಾರ, ಪ್ರತಿ ಕಂಪನಿಗೆ ಡ್ರೈವ್ ಸೈಡ್ ಏರ್‌ಬ್ಯಾಗ್‌ಗಳನ್ನು ಒದಗಿಸುವುದು ಅವಶ್ಯಕ, ಆದರೆ ಚಾಲಕನ ಪಕ್ಕದಲಿ ಕುಳಿತುಕೊಳ್ಳುವವರಿಗೆ ಏರ್ ಬ್ಯಾಗ್ ಇರುವುದಿಲ್ಲ ಮತ್ತು ಈ ಸಮಯದಲ್ಲಿ ಹಾನಿಯುಂಟಾಗುವ ಸಾಧ್ಯತೆ ಬಹಳ ಜಾಸ್ತಿ ಇರುವ ಕಾರಣ ಎರಡು ಬದಿಯಲ್ಲಿ ಏರ್ ಬ್ಯಾಗ್ ಕಡ್ಡಾಯ ಮಾಡುವ ಬಹುತೇಕ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸ್ನೇಹಿತರೆ ಈ ನಿಯಮದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group