ಮಹಾನಾಯಕ ಅಂಬೇಡ್ಕರ್ ಪಾತ್ರ ಮಾಡುತ್ತಿರುವ ಈ ಹುಡುಗ ನಿಜಕ್ಕೂ ಯಾರು ಗೊತ್ತಾ, ಶಾಕ್ ಆಗುತ್ತದೆ.

ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಲ್ಲಿ ಹೆಚ್ಚಿನ ಕುಟುಂಬಗಳು ಧಾರಾವಾಹಿಯನ್ನ ವೀಕ್ಷಣೆ ಮಾಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇತರೆ ಜನರಿಗೆ ಹೋಲಿಕೆ ಮಾಡಿದರೆ ನಮ್ಮ ಕರ್ನಾಟಕದಲ್ಲಿ ಧಾರಾವಾಹಿ ಪ್ರಿಯರು ಸ್ವಲ್ಪ ಜಾಸ್ತಿ ಇದ್ದಾರೆ ಎಂದು ಹೇಳಬಹುದು. ಹೌದು ದಿನದಿಂದ ದಿನಕ್ಕೆ ಹೊಸ ಹೊಸ ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ಮೂಡಿಬರುತ್ತಿದ್ದು ಕೆಲವು ಧಾರಾವಾಹಿಗಳು ಜನರನ್ನ ತನ್ನತ್ತ ಆಕರ್ಷಣೆ ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ಕನ್ನಡದ ಹಲವು ಕಿರುತೆರೆ ವಾಹಿನಿಯಲ್ಲಿ ಹಲವು ಬಹಳ ಒಳ್ಳೆಯ ಧಾರಾವಾಹಿಗಳು ಮೂಡಿಬರುತ್ತಿದ್ದು ಆ ಧಾರಾವಾಹಿಯಲ್ಲಿ ಮಹಾನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಧಾರಾವಾಹಿ ಕೂಡ ಒಂದು ಎಂದು ಹೇಳಬಹುದು. ವಾರದಲ್ಲಿ ಎರಡು ದಿನ ಪ್ರಸಾರವಾಗುವ ಈ ಧಾರಾವಾಹಿ ಮೂಲತಃ ಹಿಂದಿ ಧಾರಾವಾಹಿ ಆಗಿದ್ದು ಈಗ ಕನ್ನಡಕ್ಕೆ ಅನುವಾದ ಮಾಡಲಾಗಿದೆ ಎಂದು ಹೇಳಬಹುದು. ಕರ್ನಾಟಕದಲ್ಲಿ ಈ ಧಾರಾವಾಹಿಗೆ ಅಪಾರವಾದ ಅಭಿಮಾನಿಗಳು ಇದ್ದು ಈ ಧಾರಾವಾಹಿಯಲ್ಲಿ ಮಹಾನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪಾತ್ರವನ್ನ ಮಾಡುತ್ತಿರುವ ಚಿಕ್ಕ ಹುಡುಗನ ನಟನೆಗೆ ಜನರು ಫುಲ್ ಫಿದಾ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ayad bhanushali

ಇನ್ನು ಧಾರಾವಾಹಿಯಲ್ಲಿ ಮಹಾನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪಾತ್ರವನ್ನ ಮಾಡುತ್ತಿರುವ ಈ ಚಿಕ್ಕ ಹುಡುಗ ನಿಜಕ್ಕೂ ಯಾರು ಎಂದು ತಿಳಿದರೆ ನೀವು ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹಾಗಾದರೆ ಮಹಾನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪಾತ್ರವನ್ನ ಈ ಹುಡುಗ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹುಡುಗನ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ಸ್ನೇಹಿತರೆ ಮಹಾನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಧಾರಾವಾಹಿಯಲ್ಲಿ ನಟನೆಯನ್ನ ಮಾಡುತ್ತಿರುವ ಈ ಪುಟ್ಟ ಹುಡುಗನ ಹೆಸರು ಆಯಾದ್ ಭಾನುಷಾಲಿ, 2012 ರಲ್ಲಿ ಮುಂಬೈ ನಲ್ಲಿ ಹುಟ್ಟಿದ ಈ ಹುಡುಗನಿಗೆ ಈಗ 8 ವರ್ಷ ವಯಸ್ಸು. ಈ ಹುಡುಗನ ತಂದೆ ಮಯೂರ್ ಭಾನುಶಾಲಿ ಮತ್ತು ತಾಯಿ ದೀಪಾ ಭಾನುಶಾಲಿ ಮತ್ತು ಹುಡುಗ ಈ ದಂಪತಿಗಳ ಎರಡನೆಯ ಮಗ. ಇನ್ನು ಆಯಾದ್ ತನ್ನ ಐದನೇ ವಯಸ್ಸಿಯಿಂದ ಬಣ್ಣವನ್ನ ಹಚ್ಚುತ್ತಿದ್ದಾನೆ, ಇನ್ನು ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಮೊದಲು ಈ ಹುಡುಗ ಹಲವು ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಮತ್ತು ಒಂದು ಜಾಹಿರಾತಿನಲ್ಲಿ ಕೂಡ ಈ ಹುಡುಗ ಕಾಣಿಸಿಕೊಂಡಿದ್ದ.

Join Nadunudi News WhatsApp Group

ayad bhanushali

ಹಿಂದೀ ಕಲರ್ಸ್ ಚಾನೆಲ್ ನಲ್ಲಿ ಪ್ರಸಾರಾಗೊಂಡ , ಚಂದ್ರಕಾಂತ್ ಏಕ್ ಮಾಯಾವಿ ಪ್ರೇಮ್ ಗಾಥಾ ಧಾರವಾಹಿಯಲ್ಲಿ ಆಯುದ್ ಕಾಣಿಸಿಕೊಂಡಿದ್ದ. ಸ್ಟಾರ್ ಪ್ಲಸ್ ನಲ್ಲಿ ಪ್ರಸಾರಾಗೊಂಡ ಇಷ್ಕ್ ಬಾಜ್ ಧಾರವಾಹಿಯಲ್ಲಿ ಕೂಡಾ ಈ ಪುಟ್ಟ ಬಾಲಕ ಕಾಣಿಸಿಕೊಂಡಿದ್ದ. ವಿಶೇಷ ಎಂದರೆ ಆಯುದ್ ಭಾನುಶಾಲೀ ಸಲ್ಮಾನ್ ಖಾನ್ ಜೊತೆ ಕೂಡಾ ಕೆಲಸ ಮಾಡಿದ್ದಾನೆ. ತನ್ನ ಪುಟ್ಟ ವಯಸ್ಸಿನಲ್ಲಿ ಇಷ್ಟು ದೊಡ್ಡ ದೊಡ್ಡ ಸಾಧನೆಯನ್ನ ಮಾಡಿದ ಈ ಹುಡುಗನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group