ಅಯುಷ್ಮಾನ್ ಕಾರ್ಡ್ ಇದ್ದವರಿಗೂ ಇಲ್ಲದವರಿಗೂ ಬಂಪರ್ ಕೊಡುಗೆ, ಯೋಜನೆಯಲ್ಲಿ ದೊಡ್ಡ ಬದಲಾವಣೆ.

ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಅನುಕೂಲದ ದೃಷ್ಟಿಯಿಂದ ಅನೇಕ ಯೋಜನೆಗಳನ್ನ ಈಗಾಗಲೇ ಜಾರಿಗೆ ತಂದಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ದೇಶದ ಬಡ ಜನರಿಗೆ ಯಾವುದಕ್ಕೂ ತೊಂದರೆ ಆಗಬಾರದು ಅನ್ನುವ ಉದ್ದೇಶದಿಂದ ಈಗಾಗಲೇ ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದು ಅದರಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಕೂಡ ಒಂದು ಎಂದು ಹೇಳಬಹುದು. ಹೌದು ಈ ಯೋಜನೆಯ ಮೂಲಕ ದೇಶದ ಬಡವರು ಉಚಿತವಾಗಿ ಆರೋಗ್ಯವನ್ನ ಚಿಕೆತ್ಸೆಯನ್ನ ಪಡೆದುಕೊಳ್ಳುತ್ತಿದ್ದು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳುತ್ತಿದ್ದಾರೆ ಅನ್ನುವುದು ಬಹಳ ಸಂತಸದ ವಿಷಯವಾಗಿದೆ.

ಇನ್ನು ಈಗ ಕೇಂದ್ರ ಸರ್ಕಾರ ಮತ್ತೆ ದೇಶದ ಜನರಿಗೆ ಇನ್ನೊಂದು ಬಂಪರ್ ಕೊಡುಗೆಯನ್ನ ನೀಡಿದೆ ಎಂದು ಹೇಳಬಹುದು. ಕೇಂದ್ರ ಸರ್ಕಾರ ಬಡವರಿಗಾಗಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜಾನ್ ಆರೋಗ್ಯ ಯೋಜನೆಯ ಮೂಲಕ ಐದು ಲಕ್ಷ ರೂಪಾಯಿಯ ತನಕ ಉಚಿತ ಆರೋಗ್ಯ ಚಿಕಿತ್ಸೆಯನ್ನ ಬಡವರು ಪಡೆಯಬಹುದಾಗಿದೆ. ಸ್ನೇಹಿತರೆ ನಿಮ್ಮ ಬಳಿ ಕೂಡ ಆಯುಷ್ಮಾನ್ ಭಾರತ್ ಕಾರ್ಡ್ ಇದ್ದರೆ ಅಥವಾ ಇನ್ನು ಕೂಡ ನೀವು ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಳ್ಳಲಿಲ್ಲ ಅಂದರೆ ಈ ಮಾಹಿತಿಯನ್ನ ತಪ್ಪದೆ ಓದಿ.

Ayushman card

ಹೌದು ಕೇಂದ್ರ ಸರ್ಕಾರ ದೇಶದಲ್ಲಿ ಇರುವ ಎಲ್ಲಾ ಬಡ ಕುಟುಂಬದವರಿಗೆ ಐದು ಲಕ್ಷ ರೂಪಾಯಿಯ ತನಕ ಉಚಿತ ಆರೋಗ್ಯ ಚಿಕಿತ್ಸೆಯನ್ನ ಪಡೆದುಕೊಳ್ಳಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಆರೋಗ್ಯ ಕಾರ್ಡುಗಳನ್ನ ವಿತರಣೆ ಮಾಡಲಾಗುತ್ತಿದೆ. ಇನ್ನು ಇಲ್ಲಿಯತನಕ ಈ ಆರೋಗ್ಯ ಕಾರ್ಡ್ ಪಡೆದುಕೊಳ್ಳಲು ಇದ್ದ ಎಲ್ಲಾ ಶುಲ್ಕಗಳನ್ನ ತೆಗೆದು ಹಾಕಲಾಗಿದೆ. ಇನ್ನುಮುಂದೆ ಆಯುಷ್ಮಾನ್ ಭಾರತ್ ಕಾರ್ಡುಗಳನ್ನ ದೇಶದ ಎಲ್ಲಾ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಇನ್ನು ನೀವು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಹೊಸದಾಗಿ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಳ್ಳಲು ಹೋದರೆ ಅಲ್ಲಿ ಕೇವಲ ನೀವು 15 ರೂಪಾಯಿಗಳನ್ನ ಪಾವತಿ ಮಾಡಬೇಕು.

ಇನ್ನುಮುಂದೆ ದೇಶದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ಪಡೆದುಕೊಂಡಿರುವ ಎಲ್ಲಾ ಫಲಾನುಭವಿಗಳು ಯಾವುದೇ ಸರ್ಕಾರೀ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಐದು ಲಕ್ಷ ರೂಪಾಯಿಗಳ ತನಕ ಉಚಿತವಾಗಿ ಚಿಕೆತ್ಸೆಯನ್ನ ಪಡೆದುಕೊಳ್ಳಲು ಅನುಕೂಲವನ್ನ ಮಾಡಿಕೊಡಲಾಗಿದೆ. ದೇಶದಲ್ಲಿ ಇರುವ ಸಾಕಷ್ಟು ಬಡ ಕುಟುಂಬಗಳಲ್ಲಿ ಅನೇಕರು ಹೃದಯ ಸಂಬಂಧಿ ಖಾಯಿಲೆ, ಕಣ್ಣಿನ ಸಮಸ್ಯೆ ಮತ್ತು ಕೆಲವು ಆಪರೇಷನ್ ಮಾಡಿಸಿಕೊಳ್ಳಲು ಹಣವಿಲ್ಲದೆ ಸಾಮಾನ್ಯ ಜನರು ಅನೇಕ ಸಮಸ್ಯೆಗಳನ್ನ ಅನುಭವಿಸುತ್ತಿರುವುದನ್ನ ಮನಗೊಂಡ ಕೇಂದ್ರ ಸರ್ಕಾರ ಈಗ 2021 ರಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿದೆ.

Join Nadunudi News WhatsApp Group

Ayushman card

ಇನ್ನುಮುಂದೆ ಈ ಕಾರ್ಡ್ ಹೊಂದಿರುವ ಫಲಾನುಭವಿಗಳು ನಿಮ್ಮ ಹತ್ತಿರದ ಮಲ್ಟಿ ಸ್ಪೆಸಿಯಾಲಿಟಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಈ ಯೋಜನೆಯ ಮೂಲಕ ಐದು ಲಕ್ಷ ರೂಪಾಯಿಯ ತನಕ ಉಚಿತ ಆರೋಗ್ಯ ಚಿಕೆತ್ಸೆಯನ್ನ ಪಡೆದುಕೊಳ್ಳಬಹುದಾಗಿದೆ. ಸ್ನೇಹಿತರೆ ನೀವು ಕೂಡ ಈ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಸಿಕೊಂಡು ನಿಮಗೆ ಇಷ್ಟವಾಗುವ ಆಸ್ಪತ್ರೆಯಲ್ಲಿ ಸರಳವಾಗಿ ಐದು ಲಕ್ಷ ರೂಪಾಯಿಯ ತನಕ ಉಚಿತವಾಗಿ ಚಿಕೆತ್ಸೆಯನ್ನ ಪಡೆದುಕೊಳ್ಳಬಹುದಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ದೇಶದ ಎಲ್ಲಾ ಬಡವರಿಗೆ ತಲುಪಿಸಿ.

Join Nadunudi News WhatsApp Group