ಮನೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದರೆ ಈಗಲೇ ಅರ್ಜಿ ತುಂಬಿಸಿ, ಕೇಂದ್ರದ ಹೊಸ ಯೋಜನೆ.

ದೇಶದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಗಳು ಯಾರಿಗೆ ಬರುತ್ತಿದೆ ಎಂದು ಹೇಳಬಹುದು, ಜನರ ಅನುಕೂಲದ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನ ಜಾರಿಗೆ ತರುತ್ತಿದ್ದು ಈ ಯೋಜನೆಯ ಲಾಭವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಅನ್ನುವುದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಬಹುದು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಈಗ ಆಧಾರ್ ಕಾರ್ಡ್ ಎಷ್ಟು ಅವಶ್ಯಕ ಅನ್ನುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಈಗಿನ ಕಾಲದಲ್ಲಿ ಆಧಾರ್ ಕಾರ್ ಇಲ್ಲದೆ ಯಾವುದೇ ಕೆಲಸವನ್ನ ಮಾಡಲು ಸಾಧ್ಯವಿಲ್ಲ ಎಂದು ಹೇಳಬಹುದು, ಯಾವುದೇ ಸರ್ಕಾರೀ ಕೆಲಸ ಅಥವಾ ಖಾಸಗಿ ಕೆಲಸಕ್ಕೆ ಆದರೆ ಕಾರ್ಡ್ ಬಹಳ ಅವಶ್ಯವಾಗಿದೆ.

ಇನ್ನು ದೇಶದಲ್ಲಿ ಹುಟ್ಟಿದ ಎಲ್ಲಾ ಮಗುವಿಂಗೂ ಆಧಾರ್ ಕಾರ್ಡ್ ನೀಡಲಾಗುತ್ತದೆ, ಆದರೆ ಈಗ ಮಕ್ಕಳ ಆಧಾರ್ ಕಾರ್ಡ್ ನಲ್ಲಿ ದೊಡ್ಡ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಚೀನತೆಯನ್ನ ಮಾಡಿದ್ದು ಯುಐಡಿಎಐ ಟ್ವಿಟರ್ ನಲ್ಲಿ ಇದರ ಬಗ್ಗೆ ಮಾಹಿತಿಯನ್ನ ಕೂಡ ನೀಡಿದೆ. ಹಾಗಾದರೆ ಯುಐಡಿಎಐ ನೀಡಿದ ಆ ಮಾಹಿತಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Baal aadhar

ಹೌದು ಮಕ್ಕಳಿಗಾಗಿ ಬಾಲ್ ಆಧಾರ್ ಕಾರ್ಡ್ ತಯಾರಿಸುವಂತೆ ಯುಐಡಿಎಐ ತನ್ನ ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ. ಇನ್ನು ಬಾಲ್ ಆಧಾರ್ ಕಾರ್ಡ್ ಅನ್ನು ಐದು ವರ್ಷದ ಒಳಗಿನ ಮಕ್ಕಳಿಗೆ ನೀಡಲಾಗುತ್ತದೆ ಮತ್ತು ಈ ಆಧಾರ್ ಕಾರ್ಡ್ ನೀಲಿ ಬಣ್ಣದಲ್ಲಿ ಇರುತ್ತದೆ. ಇನ್ನು ಮಗುವಿನ ಐದು ವರ್ಷ ತುಂಬಿದ ಕೂಡಲೇ ಈ ಬಾಲ್ ಆಧಾರ್ ಕಾರ್ಡ್ ತನ್ನ ಕೆಲಸವನ್ನ ಸ್ಥಗಿತ ಮಾಡುತ್ತದೆ ಅಂದರೆ ಅಮಾನ್ಯವಾಗುತ್ತದೆ. ಇನ್ನು ಮಗುವಿನ ಐದು ವರ್ಷ ತುಂಬಿದ ನಂತರ ಮಗುವಿನ ಪೋಷಕರು ಮಗುವಿನ ಜೊತೆಗೆ ಆಧಾರ್ ಕೇಂದ್ರಕ್ಕೆ ಮಗುವಿನ ಬೆರಳಚ್ಚನ್ನ ನೀಡಿ ಶಾಶ್ವತವಾದ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬೇಕಾಗಿದೆ.

ಇನ್ನು ಈ ನೀಲಿ ಕಾರ್ಡ್ ಬಯಸುವವರು ಆಧಾರ್ ಕೇಂದ್ರಕ್ಕೆ ಹೋಗಿ ಅಲ್ಲಿ ಅರ್ಜಿಯನ್ನ ಭಾರ್ತಿ ಮಾಡಿ ಮಗುವಿನ ಜನನ ಪ್ರಮಾಣಪತ್ರ ಮತ್ತು ಪೋಷಕರ ಆಧಾರ್ ಕಾರ್ಡ್ ಪ್ರತಿಯ ಜೊತೆಗೆ ಮಗುವಿನ ಫೋಟೋ ನೀಡಬೇಕು. ಇನ್ನು ಅರ್ಜಿ ಸಲ್ಲಿಸುವಾಗ ಮಗುವಿನ ಬಯೋಮೆಟ್ರಿಕ್ ವಿವರಗಳನ್ನು ಇಲ್ಲಿ ತೆಗೆದುಕೊಳ್ಳಲಾಗುವುದಿಲ್ಲ. ಇನ್ನು ಅರ್ಜಿ ಸಲ್ಲಿಸುವಾಗ ಪೋಷಕರ ಮೊಬೈಲ್ ಸಂಖ್ಯೆಯನ್ನ ನೀಡಬೇಕು ಮತ್ತು ಅರ್ಜಿ ಸಲ್ಲಿಸಿದ 40 ದಿನದ ಒಳಗಾಗಿ ಮಗುವಿಗೆ ನೀಲಿ ಆಧಾರ್ ಕಾರ್ಡ್ ನೀಡಲಾಗುತ್ತದೆ. ಇನ್ನು ಅರ್ಜಿ ಸಲ್ಲಿಸಲು ಮಗುವಿನ ವಯಸ್ಸು 5 ವರ್ಷದ ಒಳಗೆ ಇರಬೇಕು. ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ಪೋಷಕರಿಗೂ ತಲುಪಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Baal aadhar

Join Nadunudi News WhatsApp Group