ಅರ್ಧಕ್ಕೆ ನಿಂತ ಬಿಗ್ ಬಾಸ್, ಬಿಗ್ ಬಾಸ್ ಕ್ಲೋಸ್ ಆಗಲು ಅಸಲಿ ಕಾರಣ ಏನು ಗೊತ್ತಾ

ಸದ್ಯ ಕರ್ನಾಟಕದಲ್ಲಿ ಕರೋನ ಮಹಾಮಾರಿ ಬಿಟ್ಟರೆ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯಗಳು ಅಂದರೆ ಅದೂ ಬಿಗ್ ಬಾಸ್ ವಿಷಯ ಏನು ಹೇಳಿದರೆ ತಪ್ಪಾಗಲ್ಲ. ಹೌದು ರಾಜ್ಯದಲ್ಲಿ ಬಿಗ್ ಬಾಸ್ ನೋಡುವವರ ಸಂಖ್ಯೆ ಬಹಳ ಜಾಸ್ತಿ ಇದೆ ಎಂದು ಹೇಳಬಹುದು. ರಾತ್ರಿಯಾದರೆ ಸಾಕು ಜನರು ಟಿವಿ ಮುಂದೆ ಕುಳಿತುಕೊಂಡು ಬಿಗ್ ಬಾಸ್ ನೋಡುತ್ತಾರೆ ಎಂದು ಹೇಳಬಹುದು. ಇನ್ನು ಈ ಬಾರಿಯ ಬಿಗ್ ಬಾಸ್ ಬಹಳ ರೋಚಕ ಹಂತವನ್ನ ತಲುಪಿದ್ದು ಬಿಗ್ ಬಾಸ್ ಶುರುವಾಗಿ ಎರಡು ತಿಂಗಳು ಕಳೆದಿದೆ ಎಂದು ಹೇಳಬಹುದು. ಬಿಗ್ ಬಾಸ್ ನೀಡಿದ ಟಾಸ್ಕ್ ಮತ್ತು ಇತರೆ ಕಾರ್ಯಗಳು ಬಹಳ ರೋಚಕ ಹಂತವನ್ನ ತಲುಪಿದ್ದು ಈ ಬಾರಿ ಯಾರು ವಿನ್ ಆಗುತ್ತಾರೆ ಅನ್ನುವುದನ್ನ ಊಹೆ ಮಾಡುವುದು ಕೂಡ ಬಹಳ ಕಷ್ಟವಾಗಿತ್ತು ಎಂದು ಹೇಳಬಹುದು.

ಇನ್ನು ಇದರ ನಡುವೆ ಜನರಿಗೆ ಶಾಕ್ ಆಗುವಂತಹ ಸುದ್ದಿ ನಿನ್ನೆ ಬಂದಿದ್ದು ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಅರ್ಧಕ್ಕೆ ಅಂತ್ಯವಾಗಿದೆ. ಹಾಗಾದರೆ ಬಿಗ್ ಬಾಸ್ ಅರ್ಧಕ್ಕೆ ಕೊನೆಯಾಗಲು ಅಸಲಿ ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಬಿಗ್ ಬಾಸ್ ಸೀಸನ್ 8 ನಾಳೆಗೆ ಅಂತ್ಯವಾಗಲಿದೆ. ಈ ವಿಚಾರವನ್ನು ಬಿಗ್ ಬಾಸ್ ಪ್ರಸಾರವಾಗುವ ಕಲರ್ಸ್ ಕನ್ನಡ ಚಾನೆಲ್ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಖಚಿತಪಡಿಸಿದ್ದಾರೆ.

Big boss show cancel

ತಮ್ಮ ಫೇಸ್‍ಬುಕ್‍ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು ಯಾಕೆ ಈ ಶೋವನ್ನು ಅರ್ಧದಲ್ಲೇ ನಿಲ್ಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಶುರುವಾಗಿ ಎರಡು ತಿಂಗಳು ಕಳೆದಿದೆ, ಪಿಸಿಆರ್ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್ನಿನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ.

ಹೊರಗೆ ಏನು ನಡೆಯುತ್ತಿದೆ ಅನ್ನುವುದು ಅವರಿಗೆ ಗೊತ್ತಿಲ್ಲ ಮತ್ತು ಅವರನ್ನ ನಾಳೆ ಹೊರಗೆ ಕರೆಯುತ್ತೇವೆ, ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ. ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ. ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ. ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ ಎಂದು ಅವರು ಹೇಳಿದ್ದಾರೆ. ಸ್ನೇಹಿತರೆ ಬಿಗ್ ಬಾಸ್ ಅರ್ಧಕ್ಕೆ ನಿಲ್ಲುತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Big boss show cancel

Join Nadunudi News WhatsApp Group