ಮೂರನೇ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಗೀತಾ ಅವರಿಗೆ ಸಿಕ್ಕ ಭಾರಿ ಸಂಭಾವನೆ ಎಷ್ಟು ಗೊತ್ತಾ.

ಸದ್ಯ ಕನ್ನಡ ಕಿರುತೆರೆಯಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಬಿಗ್ ಬಾಸ್ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ರಾಜ್ಯದ ಪ್ರತಿಯೊಂದು ಮನೆಯಲ್ಲಿ ಕೂಡ ಜನರು ಬಿಗ್ ಬಾಸ್ ಶೋ ವೀಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಜನರು ತಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಹಾಕುವುದರ ಮೂಲಕ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಇನ್ನು ದಿನದಿಂದ ದಿನಕ್ಕೆ ಈ ಶೋ ರೋಚಕ ಹಂತವನ್ನ ತಲುಪುತ್ತಿದ್ದು ಈ ಭಾರಿ ಬಿಗ್ ಬಾಸ್ ಯಾರು ವಿನ್ ಆಗುತ್ತಾರೆ ಅನ್ನುವುದನ್ನ ಊಹೆ ಮಾಡುವುದು ಕೂಡ ಬಹಳ ಕಷ್ಟವಾಗುತ್ತಿದೆ ಎಂದು ಹೇಳಬಹುದು.

ಇನ್ನು ವಿಷಯಕ್ಕೆ ಬರುವುದಾದರೆ ಬಿಗ್ ಬಾಸ್ ಆರಂಭವಾಗಿ ಮೂರೂ ವಾರಗಳು ಕಳೆದಿದ್ದು ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳು ಮನೆಯಿಂದ ಆಚೆ ಬಂದಿದ್ದಾರೆ ಎಂದು ಹೇಳಬಹುದು. ಇನ್ನು ಬಿಗ್ ಬಾಸ್ ಮನೆಗೆ ಹೋದ ಘಟಾನುಘಟಿ ಸ್ಪರ್ಧಿಗಳಲ್ಲಿ ಬ್ರಹ್ಮಗಂಟು ಧಾರಾವಾಹಿಯ ನಾಯಕಿಯಾದ ನಟಿ ಗೀತಾ ಅವರು ಕೂಡ ಒಬ್ಬರು ಎಂದು ಹೇಳಬಹುದು. ಈ ಧಾರಾವಾಹಿಯ ಮೂಲಕ ನಟಿ ಗೀತಾ ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿದ್ದರು ಎಂದು ಹೇಳಬಹುದು. ಇನ್ನು ನಟಿ ಗೀತಾ ಅವರು ಬಿಗ್ ಬಾಸ್ ಮನೆಗೆ ಹೋದಾಗ ಅವರು ಈ ಭಾರಿ ವಿನ್ ಆಗುತ್ತಾರೆ ಎಂದು ಕೆಲವರು ಮಾತನಾಡಿಕೊಂಡಿದ್ದರು, ಆದರೆ ಜನರ ವೋಟ್ ಕಡಿಮೆ ಬಿದ್ದ ಕಾರಣ ನಟಿ ಗೀತಾ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.

Big boss geeta

ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ವಾರದ ಲೆಕ್ಕದಲ್ಲಿ ಸಂಭಾವನೆಯನ್ನ ನೀಡಲಾಗುತ್ತದೆ ಮತ್ತು ಅದೇ ರೀತಿಯಾಗಿ ಗೀತಾ ಅವರು ಮೂರೂ ವಾರ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಎಷ್ಟು ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಅನ್ನುವುದು ಜನರ ತಲೆಯಲ್ಲಿ ಮೂಡಿರುವ ಒಂದು ಪ್ರಶ್ನೆಯಾಗಿದೆ ಎಂದು ಹೇಳಬಹುದು. ಹಾಗಾದರೆ ಮೂರೂ ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ನಟಿ ಗೀತಾ ಅವರು ಎಷ್ಟು ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಟಿ ಗೀತಾ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ಬಿಗ್ ಬಾಸ್ ನ ಮೂರನೇ ವಾರದಲ್ಲಿ ನಟಿ ಗೀತಾ ಅವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದ ಗೀತಾ ಅವರಿಗೆ ವಾರಕ್ಕೆ ಸುಮಾರು 15000 ಸಾವಿರ ರೂಪಾಯಿ ಸಂಭಾವನೆಯನ್ನ ನೀಡಲಾಗುತ್ತಿದ್ದು ಎಂದು ಮಾಹಿತಿಗಳಿಂದ ತಿಳಿದು ಬಂದಿತ್ತು ಮತ್ತು ಮೂರೂ ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಗೀತಾ ಅವರಿಗೆ ಬರೋಬ್ಬರಿ 45000 ರೂಪಾಯಿ ಸಂಭಾವನೆಯನ್ನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ನಿಮ್ಮ ಪ್ರಕಾರ ಈ ಭಾರಿ ಬಿಗ್ ಬಾಸ್ ಯಾರು ವಿನ್ ಆಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Big boss geeta

Join Nadunudi News WhatsApp Group