ಇವರಲ್ಲಿ NO 1 ಶ್ರೀಮಂತ ಸ್ಪರ್ಧಿ ಯಾರು ಗೊತ್ತಾ, ಇವರ ಆಸ್ತಿಗಳು ಎಷ್ಟು ನೋಡಿ.

ಜನರು ದಿನವಾದರೆ ಸಾಕು ಬಿಗ್ ಬಾಸ್ ಕಾರ್ಯಕ್ರಮವನ್ನ ವೀಕ್ಷಣೆ ಮಾಡುತ್ತಾರೆ ಎಂದು ಹೇಳಬಹುದು. ಹೌದು ಬಿಗ್ ಬಾಸ್ ಸೀಸನ್ 8 ಶುರು ಆದಾಗಿನಿಂದ ಜನರು ರಾತ್ರಿಯಾದರೆ ಸಾಕು ಟಿವಿ ಮುಂದೆ ಕುಳಿತುಕೊಂಡು ಬಿಗ್ ಬಾಸ್ ನೋಡುತ್ತಿದ್ದು ವಾಹನಿಯ TRP ಕೂಡ ಬಹಳ ಜಾಸ್ತಿ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಭಾರಿ ಬಿಗ್ ಬಾಸ್ ನಲ್ಲಿ ವಿವಿಧ ಕ್ಷೇತ್ರದಲ್ಲಿ ಅನೇಕ ಸಾಧನೆ ಮಾಡಿದ ಸ್ಪರ್ಧಿಗಳು ಕಾಣಿಸಿಕೊಂಡಿದ್ದು ಈ ಬಾರಿಯ ಬಿಗ್ ಬಾಸ್ ಬಹಳ ರೋಚಕ ಹಂತವನ್ನ ತಲುಪಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಎಲ್ಲಾ ಸ್ಪರ್ಧಿಗಳು ಇಲ್ಲಿಯ ತನಕ ಎಷ್ಟು ಸಂಪಾಧನೆ ಮಾಡಿದ್ದಾರೆ ಮತ್ತು ಇವರಲ್ಲಿ ನಂಬರ್ ಶ್ರೀಮಂತ ಸ್ಪರ್ಧಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ಟಿಕ್ ಟಾಕ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಕತ್ ಹೆಸರು ಮಾಡಿದ್ದ ಶಮಂತ್ ಅವರು ಇಲ್ಲಿಯ ತನಕ ಸುಮಾರು 6 ರಿಂದ 7 ಲಕ್ಷ ಸಂಪಾಧನೆಯನ್ನ ಮಾಡಿದ್ದು ತಿಂಗಳಿಗೆ 30 ರಿಂದ 40 ಸಾವಿರ ಸಂಪಾಧನೆಯನ್ನ ಮಾಡುತ್ತಿದ್ದರು ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ರಘು ಗೌಡ ಅವರು ತಮ್ಮದೇ ಆದ ರಘು ವೈನ್ ಸ್ಟೋರ್ ಅನ್ನುವ ಯು ಟ್ಯೂಬ್ ಚಾನೆಲ್ ಹೊಂದಿದ್ದು ಇಲ್ಲಿಯ ತನಕ 10 ರಿಂದ 15 ಲಕ್ಷ ರೂಪಾಯಿ ಸಂಪಾಧನೆ ಮಾಡಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ ಹಾಗು ತಿಂಗಳಿಗೆ 40 ರಿಂದ 50 ಸಾವಿರ ಸಂಪಾಧನೆ ಮಾಡುತ್ತಿದ್ದರು ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಗಣಪ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್ ಅವರು ಸದ್ಯಕ್ಕೆ ಹಲವು ಚಿತ್ರಗಳಲ್ಲಿ ಅಭಿನಯ ಮಾಡಿದ್ದು ಸುಮಾರು 30 ರಿಂದ 40 ಲಕ್ಷ ಸಂಪಾಧನೆ ಮಾಡಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

big boss info

ಇನ್ನು ಬೈಕೆರ್ ಅರವಿಂದ ಅವರು ರಾಷ್ಟ್ರೀಯ ಮಟ್ಟದಲ್ಲಿ ಬಹಳ ಹೆಸರನ್ನ ಮಾಡಿದ್ದು ಸುಮಾರು 40 ರಿಂದ 50 ಲಕ್ಷ ಸಂಪಾಧನೆಯನ್ನ ಮಾಡಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ. ಇನ್ನು ಪತ್ರಕರ್ತ ಹಾಗು ಸಮಾಜ ಸೇವಕರಾಗಿರುವ ಚಕ್ರವರ್ತಿ ಚಂದ್ರಚೂಡ್ ಅವರು ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು 1 ರಿಂದ 2 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಹುಲಿರಾಯ ಖ್ಯಾತಿಯ ದಿವ್ಯ ಉರುಡುಗ ಅವರು ಸಾಕಷ್ಟು ಧಾರಾವಾಹಿ ಮತ್ತು ಕೆಲವು ಸಿನಿಮಾಗಳಲ್ಲಿ ಕೂಡ ನಟನೆಯನ್ನ ಮಾಡಿದ್ದು 50 ರಿಂದ 60 ಲಕ್ಷ ರೂಪಾಯಿ ಸಂಪಾಧನೆ ಮಾಡಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ಸಾಮಾಜಿಕ ಹೋರಾಟಗಾರ ಮತ್ತು ತಮ್ಮದೇ ಆದ ವ್ಯವಹಾರ ಹೊಂದಿರುವ ಪ್ರಶಾಂತ್ ಅವರು 3 ರಿಂದ 4 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ನಟನಾಗಿರುವ ರಾಜೀವ್ ಅವರು ಸುಮಾರು 2 ರಿಂದ 3 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಮಾಡೆಲ್ ಮತ್ತು ನಾಯಕಿಯಾಗಿ ಮಿಂಚುತ್ತಿರುವ ದಿವ್ಯ ಸುರೇಶ ಅವರು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟನೆಯನ್ನ ಮಾಡಿದ್ದು ಸುಮಾರು 1 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಮಜಾಭಾರತ ಕಾಮಿಡಿ ಶೋ ಮೂಲಕ ಹೆಸರು ಮಾಡಿರುವ ಮಂಜು ಪಾವಗಡ ಅವರು ಕೆಲವು ಸಿನಿಮಾಗಳಲ್ಲಿ ಕೂಡ ನಟನೆಯನ್ನ ಮಾಡಿದ್ದು ಸುಮಾರು 30 ರಿಂದ 40 ಲಕ್ಷ ಸಂಪಾಧನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Join Nadunudi News WhatsApp Group

big boss info

ಇನ್ನು ಸತತ 17 ವರ್ಷದಿಂದ ಚಿತ್ರರಂಗದಲ್ಲಿ ಇರುವ ಶುಭ ಪೂಂಜಾ ಅವರು 6 ರಿಂದ 7 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ನಿಧಿ ಸುಬ್ಬಯ್ಯ ಅವರು 3 ರಿಂದ 4 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಧಾರಾವಾಹಿ ಮತ್ತು ಸಿನಿಮಾ ಮತ್ತು ಜಾಹಿರಾತಿನಲ್ಲಿ ನಟನೆಯನ್ನ ಮಾಡಿರುವ ವೈಷ್ಣವಿ ಅವರು 7 ರಿಂದ 8 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಸ್ನೇಹಿತರೆ ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ಯಾರು ವಿನ್ ಆಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group