ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಿರುವವರ ಪಟ್ಟಿ ಬಿಡುಗಡೆ, ಕುತೂಹಲ ಆರಂಭ

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ನಲ್ಲಿ ಬಿಗ್​ ಬಾಸ್​ ಬಹುದೊಡ್ಡ ಸ್ಥಾನವನ್ನೇ ಹೊಂದಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಪ್ರತಿ ವರ್ಷ ಹೊಸತನವನ್ನು ಮೈಗೂಡಿಸಿಕೊಂಡು ಬರುತ್ತಿರುವ ಈ ಶೋ ಈಗ ಒಟಿಟಿ ಮೂಲಕ ಪ್ರಸಾರಕ್ಕೆ ಅಣಿಯಾಗಿದೆ. ಬಿಗ್​ ಬಾಸ್ ಒಟಿಟಿ’ ಶೋ​ನಲ್ಲಿ ಸಂಪೂರ್ಣ ಸೆಲೆಬ್ರಿಟಿಗಳೇ ಇರಲಿದ್ದಾರೆ. ಪತ್ರಿಕೋದ್ಯಮ, ಸೋಶಿಯಲ್​ ಮೀಡಿಯಾ, ಸಿನಿಮಾ, ಕಿರುತೆರೆ, ರೇಡಿಯೋ ಮುಂತಾದ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳಿಗೆ ಅವಕಾಶ ನೀಡಲಾಗುತ್ತಿದೆ.

ಈ ಬಾರಿ ಯಾರೆಲ್ಲ ಸ್ಪರ್ಧಿಸಲಿದ್ದಾರೆ ಎಂಬ ಕೌತುಕ ಮೂಡಿದೆ. ಸೋಶಿಯಲ್​ ಮೀಡಿಯಾದಲ್ಲಿ ಕೆಲವು ಊಹಾಪೂಹಗಳು ಹರಿದಾಡುತ್ತಿವೆ. ಸಂಭಾವ್ಯ ಸ್ಪರ್ಧಿಗಳ ಪಟ್ಟಿಯನ್ನು ‘ಟೈಮ್ಸ್​ ಆಫ್​ ಇಂಡಿಯಾ’ ಪ್ರಕಟ ಮಾಡಿದೆ. ಅದರ ಪ್ರಕಾರ, ರವಿ ಶ್ರೀವತ್ಸ, ಮಿಮಿಕ್ರಿ ಗೋಪಿ, ಗಾಯಕಿ ಆಶಾ ಭಟ್​, ರೇಖಾ ವೇದವ್ಯಾಸ್​ ಮುಂತಾದವರು ಭಾಗವಹಿಸಲಿದ್ದಾರೆ. ಕಿಚ್ಚ ಸುದೀಪ್​ ನಡೆಸಿಕೊಡಲಿರುವ ಈ ಶೋ ನೋಡಲು ಫ್ಯಾನ್ಸ್​ ಕಾತುರದಿಂದ ಕಾಯುತ್ತಿದ್ದಾರೆ.

ಪತ್ರಿಕೋದ್ಯಮ, ಸೋಶಿಯಲ್​ ಮೀಡಿಯಾ, ಸಿನಿಮಾ, ಕಿರುತೆರೆ, ರೇಡಿಯೋ ಮುಂತಾದ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳಿಗೆ ಅವಕಾಶ ನೀಡಲಾಗುವುದು. ಪ್ರತಿಸಲದಂತೆ ಈ ಬಾರಿಯೂ ಬಿಗ್ ಬಾಸ್ ಸ್ಪರ್ಧಿಗಳು ಯಾರೆಂಬ ಕೌತುಕ ಮೂಡಿದ್ದು ಕೆಲವೊಂದು ಹೆಸರುಗಳು ಮುನ್ನಲೆಗೆ ಬಂದಿದೆ. ಆ ಸಾಂಭವ್ಯ ಪಟ್ಟಿಯಲ್ಲಿ ಇರುವಂತಹ ಕಲಾವಿದರೆ ಬಹುತೇಕ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂಬ ಮಾಹಿತಿ ಹೊರ ಬಿದ್ದಿದೆ ಅಂದ ಹಾಗೆ ಈ ಬಾರಿಯ ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಯಾವೆಲ್ಲ ಸ್ಪರ್ಧಿಗಳು ಸ್ಪರ್ಧಿಸಲಿದ್ದಾರೆ ಎಂಬುದನ್ನು ನೋಡುವುದಾದರೆ.

ನಟ ಶ್ರೀನಿವಾಸ್ ಮೂರ್ತಿ ಅವರ ಮಗ ನವೀನ್ ಕೃಷ್ಣ ಬರಲಿದ್ದಾರಂತೆ. ನಟ ಹಾಗೂ ನಿರ್ದೇಶಕ ಆಗಿರುವಂತಹ ನವೀನ್ ಕೃಷ್ಣ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಎರಡನೇಯದಾಗಿ ಹಾಸ್ಯ ಕಲಾವಿದ ಮತ್ತು ಪೋಷಕ ಪಾತ್ರಗಳಲ್ಲಿ ನಿರ್ವಹಿಸುವಂತಹ ಟೆನಿಸ್ ಕೃಷ್ಣ ಹಾಗೂ ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಸರು ಪಡೆದಂತಹ ಆರ್ಯವರ್ಧನ್ ಗುರೂಜಿ.

ಖ್ಯಾತ ಸಂಗೀತ ನಿರ್ದೇಶಕ ಆದಂತಹ ರಘು ದೀಕ್ಷಿತ್, ಬಿ ಟಿವಿಯಲ್ಲಿ ಕಾರ್ಯನಿರ್ವಹಿಸುವಂತಹ ದಿವ್ಯ ವಸಂತ, ಸರಿಗಮಪ ಕಾರ್ಯಕ್ರಮದಲ್ಲಿ ಖ್ಯಾತಿ ಪಡೆದಂತಹ ಹನುಮಂತ ಹಾಗೂ ಇತ್ತೀಚಿಗಷ್ಟೇ ಸುದ್ದಿಯಲ್ಲಿ ಇದ್ದಂತಹ ಪವಿತ್ರ ಲೋಕೇಶ್,ರೀಲ್ಸ್​ನಲ್ಲಿ ಫೇಮಸ್​ ಆದ ಭೂಮಿಕಾ ಬಸವರಾಜ್​,ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಂತಹ ಇಂದ್ರಜಿತ್ ಲಂಕೇಶ್ ಈ ಹೆಸರುಗಳು ಕೇಳಿ ಬರುತ್ತಿದೆ. ಆದರೆ ಈ ಹೆಸರುಗಳನ್ನು ಹೊರತುಪಡಿಸಿ ಇನ್ನೂ ಸಾಕಷ್ಟು ಕಲಾವಿದರು ಪಾಲ್ಗೊಳ್ಳುತ್ತಾರೆ ಎಂಬುದು ಕೆಲವು ಮೂಲಗಳಿಂದ ತಿಳಿದು ಬಂದಿದೆ.

Join Nadunudi News WhatsApp Group

ಆದರೆ ನಿಜವಾಗಿ ಯಾರು ಬಿಗ್ ಬಾಸ್ ಮನೆಗೆ ಎಂಟ್ರಿನೀಡಲಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಈ ಬಗ್ಗೆ ಯಾವ ಸೆಲೆಬ್ರಿಟಿ ಸಹ ಪ್ರತಿಕ್ರಿಯೆ ನೀಡದಿದದ್ದು ಇನ್ನಷ್ಟು ಕುತೂಹಲಕ್ಕೂ ಕಾರಣ ಮಾಡಿದೆ. ದಿನದ 24 ಗಂಟೆಗಳ ಕಾಲವೂ ಸ್ಪರ್ಧಿಗಳ ಚಟುವಟಿಕೆಗಳನ್ನು ವೀಕ್ಷಕರು ನೋಡಬಹುದು. ವೂಟ್​ ಸೆಲೆಕ್ಟ್ ಮೂಲಕ ಈ ಶೋ ಪ್ರಸಾರ ಆಗಲಿದೆ. ಅಂದಾಜು 16 ಸ್ಪರ್ಧಿಗಳಿಗೆ ಅವಕಾಶ ಸಿಗಲಿದೆ. ‘ಬಿಗ್​ ಬಾಸ್​ ಒಟಿಟಿ’ ಮುಗಿದ ಬಳಿಕ ‘ಕಲರ್ಸ್​ ಕನ್ನಡ’ದಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಆರಂಭ ಆಗಲಿದೆ ಎಂದು ಮಾಹಿತಿ ಮೂಲಗಳು ತಿಳಿಸಿದ್ದು ಕಿಚ್ಚನ ಅಭಿಮಾನಿಗಳಿಗೆ ಹಾಗೂ ಬಿಗ್ ಬಾಸ್ ಶೋ ನ ಅಭಿಮಾನಿಗಳು ಕಾತುರದಿಂದ, ಕುತೂಹಲದಿಂದ ಕಾಯುವಂತಾಗಿದೆ‌.

Join Nadunudi News WhatsApp Group