ಮದುವೆಯಾದ ಮೊದಲ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಚೈತ್ರ ಕೊಟ್ಟೂರು ಗಂಡ, ಅಷ್ಟಕ್ಕೂ ಆಗಿದ್ದೇನು ನೋಡಿ.

ನಟಿ ಚೈತ್ರಾ ಕೊಟ್ಟೂರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕರ್ನಾಟಕದ ಎಲ್ಲಾ ಜನರಿಗೆ ಚೈತ್ರಾ ಕೊಟ್ಟೂರು ಅವರ ಪರಿಚಯ ಇದೆ ಎಂದು ಹೇಳಬಹುದು. ಇನ್ನು ಚೈತ್ರಾ ಕೊಟ್ಟೂರು ಅವರು ಕನ್ನಡ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ಚೈತ್ರಾ ಕೊಟ್ಟೂರು ಅವರು ಅಭಿಮಾನಿಗಳ ಗಳಿಕೆ ಮಾಡಿಕೊಂಡಿದ್ದು ಅಂದರೆ ಅದೂ ಬಿಗ್ ಬಾಸ್ ಮೂಲಕ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಬಿಗ್ ಬಾಸ್ ನಲ್ಲಿ ಬಹಳ ಒಳ್ಳೆಯ ಆಟವನ್ನ ಆಡಿದ ಚೈತ್ರಾ ಕೊಟ್ಟೂರು ಅವರು ಕೊನೆಯ ಕೆಲವು ದಿನಗಳಲ್ಲಿ ಸೋಲನ್ನ ಅನುಭವಿಸಿದರು ಎಂದು ಹೇಳಿದರು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚೈತ್ರಾ ಕೊಟ್ಟೂರು ಅವರು ಬಿಗ್ ಬಾಸ್ ನಂತರ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಕತ್ ಸುದ್ದಿಯಾಗಿದ್ದಾರೆ ಎಂದು ಹೇಳಬಹುದು.

ಇನ್ನು ಈಗ ಜನರಿಗೆ ಶಾಕ್ ಆಗಿರುವ ಇನ್ನೊಂದು ವಿಷಯ ಏನು ಅಂದರೆ ಚೈತ್ರಾ ಕೊಟ್ಟೂರು ಅವರು ನಿನ್ನೆ ಬೆಳಿಗ್ಗೆ ಬೆಂಗಳೂರಿನಲ್ಲಿ ಸದ್ದಿಲ್ಲದೇ ಮದುವೆಯನ್ನ ಮಾಡಿಕೊಂಡಿದ್ದು ಚೈತ್ರಾ ಕೊಟ್ಟೂರು ಅವರ ಮದುವೆಯ ಫೋಟೋ ನೋಡಿ ಇಡೀ ಕರ್ನಾಟಕವೇ ಶಾಕ್ ಆಗಿದೆ ಎಂದು ಹೇಳಬಹುದು. ಇನ್ನು ಯಾರಿಗೂ ಸುದ್ದಿಮಾಡದೆ ಮದುವೆಯಾದ ಶಾಕ್ ಒಂದುಕಡೆಯಾದರೆ ಇನ್ನೊಂದು ಕಡೆ ಮದುವೆಯಾದ ಮೊದಲ ರಾತ್ರಿಯೇ ಗಲಾಟೆಯನ್ನ ಮಾಡಿಕೊಂಡಿ ಪೊಲೀಸ್ ಠಾಣೆಯ ಮೆಟ್ಟಿಲನ್ನ ಏರುವಂತಾಗಿದೆ ಅನ್ನುವುದು ಇನ್ನೊಂದು ಶಾಕಿಂಗ್ ವಿಚಾರ ಎಂದು ಹೇಳಬಹುದು.

Chaitra kottur marriage

ಹಾಗಾದರೆ ಚೈತ್ರಾ ಕೊಟ್ಟೂರು ಅವರು ಸಡನ್ ಆಗಿ ಮದುವೆಯಾಗಿದ್ದು ಯಾಕೆ ಮತ್ತು ಗಲಾಟೆ ಆಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಚೈತ್ರಾ ಕೊಟ್ಟೂರು ಅವರು ಮಂಡ್ಯ ಮೂಲದ ವ್ಯಕ್ತಿಯಾದ ನಾಗಾರ್ಜುನ್ ಅನ್ನುವವರ ಜೊತೆ ನಿನ್ನೆ ಬೆಳಿಗ್ಗೆ ಬೆಂಗಳೂರಿನ ಬ್ಯಾಟರಾಯಪುರದ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ವಿವಾಹವನ್ನ ಮಾಡಿಕೊಂಡರು, ಆದರೆ ಈಗ ಇಬ್ಬರು ಈಗ ಪೊಲೀಸ್ ಠಾಣೆಯ ಮೆಟ್ಟಿಲನ್ನ ಏರಿದ್ದು ಮದುವೆಯ ವಿಷಯವೇ ವಿವಾದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ನಾಗಾರ್ಜುನ್ ಅವರಿಗೆ ಚೈತ್ರ ಅವರ ಜೊತೆ ಮದುವೆಯನ್ನ ಮಾಡಿಕೊಳ್ಳಲು ಇಷ್ಟ ಇರಲಿಲ್ಲ, ಕೆಲವು ಸಂಘಟನೆಯವರು ನಾಗಾರ್ಜುನ್ ಅವರ ಬಲವಂತವಾಗಿ ದೇವಸ್ಥಾನದಲ್ಲಿ ಕೂಡಿಹಾಕಿ ನಾಗಾರ್ಜುನ್ ಅವರಿಗೆ ಹೆದರಿಸಿ ಮದುವೆಯನ್ನ ಮಾಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ನಾಗಾರ್ಜುನ್ ಅವರ ಮನೆಯವರಿಗೂ ಕೂಡ ಮದುವೆ ಸ್ವಲ್ಪಾನು ಇಷ್ಟ ಇರಲಿಲ್ಲ ಮತ್ತು ಈ ಕಾರಣಕ್ಕೆ ಅವರು ಮದುವೆಯ ನಂತರ ಮನೆಗೆ ಬಂದ ನಂತರ ತರಾಟೆಗೆ ತೆಗೆದುಕೊಂಡ ಕಾರಣ ಮದುವೆಯ ಭಿನ್ನಾಭಿಪ್ರಾಯ ಈಗ ಪೊಲೀಸ್ ಠಾಣೆಯ ಮೆಟ್ಟಿಲನ್ನ ಏರಿದೆ ಎಂದು ಹೇಳಬಹುದು.

Join Nadunudi News WhatsApp Group

Chaitra kottur marriage

ನಾಗಾರ್ಜುನ್ ಕುಟುಂಬದವರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಹೀಗಾಗಿ ಪೊಲೀಸರು ಚೈತ್ರಾ ಮತ್ತು ನಾಗಾರ್ಜುನ್ ದಂಪತಿಯನ್ನು ಠಾಣೆಗೆ ಕರೆಸಿದ್ದಾರೆ. ಒಂದು ಕಡೆ ನಾಗಾರ್ಜುನ್​ ಈ ಮದುವೆ ಇಷ್ಟವಿಲ್ಲ, ನಾನು ಚೈತ್ರಾ ಜತೆ ಬಾಳುವುದಿಲ್ಲ ಎಂದು ಹೇಳುತ್ತಿದ್ದರೆ ಇನ್ನೊಂದು ಕಡೆ ನನಗೆ ನಾಗಾರ್ಜುನ್ ಇಷ್ಟ, ನಾನು ಅವನ ಜತೆಗೇ ಇರುತ್ತೇನೆ ಎಂದು ಚೈತ್ರಾ ಪಟ್ಟು ಹಿಡಿದಿದ್ದಾರೆ. ಸ್ನೇಹಿತರೆ ಈ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group