Chandan Shetty New Song: ಚಂದನ್ ಶೆಟ್ಟಿ ಸೂತ್ರಧಾರಿ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ, ಯುಟ್ಯೂಬ್ ನಲ್ಲಿ ಟ್ರೆಂಡ್.

Chandan Shetty New Song: ಬಿಗ್ ಬಾಸ್ ಸೀಸನ್ 5 (Bigg Boss Session 5) ನ ವಿನ್ನರ್ ಚಂದನ್ ಶೆಟ್ಟಿ (Chandan Shetty) ಇದೀಗ ತಮ್ಮ ಹೊಸ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ತಮ್ಮ ಹಾಡುಗಳ ಮೂಲಕ ಎಲ್ಲರ ಮನ ಗೆದ್ದವರು ಚಂದನ್ ಶೆಟ್ಟಿ. ಇದೀಗ ಚಂದನ್ ಸಿನಿಮಾರಂಗದಲ್ಲೂ ಸಹ ಮಿಂಚುತ್ತಿದ್ದಾರೆ.

Chandan Shetty directorial movie special song release.
Image Credit: timesofindia.indiatimes

ಚಂದನ್ ಶೆಟ್ಟಿ ಹೊಸ ಸಿನಿಮಾ
ಚಂದನ್ ಶೆಟ್ಟಿ ಗಾಯಕನಾಗಿ, ನಿರ್ದೇಶಕನಾಗಿ ಜನರ ಮನಸ್ಸು ಗೆದ್ದಿದ್ದಾರೆ. ಈಗ ನಾಯಕ ನಟನಾಗಿಯೂ ಜನರ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ.

ಚಂದನ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ಸೂತ್ರಧಾರಿ (Sutradhari Movie) ಚಿತ್ರದ ಡ್ಯಾಶ್ ಸಾಂಗ್ ಬಿಡುಗಡೆಯಾಗಿದೆ. ಹೊಸ ವರ್ಷದ ಸಂಭ್ರಮಕ್ಕೆ ಈ ಸಾಂಗ್ ಅದ್ಬುತ ಗೀತೆಯಾಗಲಿದೆ. ಸೂತ್ರಧಾರಿ ಸಿನಿಮಾದ ಡ್ಯಾಶ್ ಹಾಡು ಇಂದು ಬಿಡುಗಡೆಯಾಗಿದೆ.

Chandan Shetty released another song from Sutradhari
Image Credit: cinemaexpress

ಹೊಸ ವರ್ಷಕ್ಕೆ ಸೂತ್ರಧಾರಿ ಚಿತ್ರತಂಡದ ಈ ಹಾಡು ಉಡುಗೊರೆ. ಡ್ಯಾಶ್ ಎಂದರೆ ಖಾಲಿ ಜಾಗ. ಅಲ್ಲಿ ನೀವು ಏನು ಬೇಕಾದರೂ ಬರೆದುಕೊಳ್ಳಬಹುದು. ಈ ಹಾಡಿಗೆ ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಚೇತನ್ ಕುಮಾರ್ ಈ ಹಾಡನ್ನು ಬರೆದಿದ್ದಾರೆ. ಲಕ್ಷಕ್ಕೂ ಅಧಿಕ ಜನರು ಈ ಹಾಡನ್ನು ವೀಕ್ಷಿಸಿದ್ದರೆ ಅಂತ ಚಂದನ್ ಶೆಟ್ಟಿ ಹೇಳಿದ್ದಾರೆ.

ಚಂದನ್ ಶೆಟ್ಟಿ ಸಿನಿಮಾದ ಸ್ಪೆಷಲ್ ಸಾಂಗ್ ರಿಲೀಸ್
ಸಂಜನಾ ಆನಂದ್ (Sanjana Anand) ಮೊದಲ ಬಾರಿಗೆ ಚಂದನ್ ಶೆಟ್ಟಿ ಜೊತೆಗೆ ಸ್ಪೆಷಲ್ ಸಾಂಗ್ ಒಂದರಲ್ಲಿ ನಟಿಸಿದ್ದೇನೆ ಎಂದರು. ಚಂದನ್ ಶೆಟ್ಟಿ ಅವರು ಹೊಸ ವರ್ಷಕ್ಕೆ ಹಾಡನ್ನು ಬಿಡುಗಡೆ ಮಾಡುತ್ತಾರೆ.

Join Nadunudi News WhatsApp Group

Another song release from Chandhan Shetty starrer Sutradhari
Image Credit: vijaykarnataka

ಕೇವಲ ಎರಡು ದಿನಗಳ ಹಿಂದೆ ಈ ಹಾಡಿನ ಚಿತ್ರೀಕರಣವಾಗಿ ಈಗ ಬಿಡುಗಡೆಯಾಗಿದೆ. ಈ ಚಿತ್ರದ ನಾಯಕಿ ಅಪೂರ್ವ (Apurva). ಆದರೆ ಈ ವಿಶೇಷ ಹಾಡಿಗೆ ಚಂದನ್ ಶೆಟ್ಟಿ ಜೊತೆಗೆ ಸಂಜನಾ ಆನಂದ್ (Sanjana Anand) ಹೆಜ್ಜೆ ಹಾಕಿದ್ದಾರೆ. ಸಹಕಾರ ನೀಡಿದ ಎಲ್ಲರಿಗೂ ನಿರ್ಮಾಪಕ ನವರಸನ್ (Navarasan) ಧನ್ಯವಾದ ತಿಳಿಸಿದ್ದಾರೆ.

Join Nadunudi News WhatsApp Group