ಕರೋನ ಲಸಿಕೆ ಪಡೆಯುವ ಮುನ್ನ ಈ ಎಲ್ಲಾ ಅಂಶಗಳನ್ನ ಗಮನದಲ್ಲಿ ಇರಿಸಿಕೊಳ್ಳುವುದು ಅತ್ಯವಶ್ಯಕ, ಆರೋಗ್ಯ ಸಚಿವಾಲಯದ ಮಾಹಿತಿ.

ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡು ಒಂದು ವರ್ಷ ಕಳೆಯುತ್ತಾ ಬಂದಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡ ಅದೆಷ್ಟೋ ಜನರು ತಮ್ಮ ಜೀವವನ್ನ ಕಳೆದುಕೊಂಡಿದ್ದರು ಮತ್ತು ಈಗಲೂ ಕೂಡ ಕೆಲವು ಜನರು ಈ ಮಹಾಮಾರಿಯಿಂದ ಬಳಲುತ್ತಿದ್ದಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಈಗ ಕರೋನ ಮಹಾಮಾರಿಯ ಲಸಿಕೆಯನ್ನ ನೀಡಲಾಗುತ್ತಿದ್ದು ಎರಡು ಹಂತದಲ್ಲಿ ಕರೋನ ಮಹಾಮಾರಿಗೆ ಲಸಿಕೆಯನ್ನ ನೀಡಲಾಗುತ್ತಿದ್ದು ಹಲವು ಜನರು ಈಗಾಗಲೇ ಲಸಿಕೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು.

ಇನ್ನು ವಿಷಯಕ್ಕೆ ಬರುವುದಾದರೆ ನಿನ್ನೆಯಿಂದ ಕರೋನ ಲಸಿಕೆ ಮೆಗಾ ಡ್ರೈವ್​ಗೆ ಚಲನೆಯನ್ನ ನೀಡಲಾಗಿದ್ದು ದೇಶದಲ್ಲಿ ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಅಸ್ವಸ್ಥರಿಗೆ ಕೊರೊನಾ ಲಸಿಕೆಯನ್ನ ನೀಡುವ ಉದ್ದೇಶವನ್ನ ಹೊಂದಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಯನ್ನ ನೀಡಲಾಗುತ್ತಿದೆ. ಕೋವಿನ್​ ಪೋರ್ಟಲ್​ ಮೂಲಕ ನೀವು ಲಸಿಕೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಕೊರೊನಾ ಲಸಿಕೆಯನ್ನು ಪಡೆಯುವ ಮುನ್ನ ನೀವು ಕೆಲವು ಅಂಶಗಳನ್ನ ಗಮನದಲ್ಲಿ ಇಡೋದು ಒಳ್ಳೆಯದು. ಹಾಗಾದರೆ ಗಮನದಲ್ಲಿ ಇರಿಸಿಕೊಳ್ಳಬೇಕಾದ ಆ ಅಂಶಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಕರೋನ ಲಸಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

corona vaccination

ಹೌದು ಸ್ನೇಹಿತರೆ ಕರೋನ ಮಹಾಮಾರಿಗೆ ಲಸಿಕೆಯನ್ನ ಪಡೆದುಕೊಳ್ಳುವವರು ಈ ಅಂಶಗಳನ್ನ ಗಮನದಲ್ಲಿ ಇರಿಸಿಕೊಳ್ಳುವುದು ಅತ್ಯವಶ್ಯಕ ಎಂದು ಹೇಳಬಹುದು. ಮೊದಲನೆಯದಾಗಿ ದೆಹಲಿಯಲ್ಲಿ ಇನ್ನು ಆನ್​ ದ ಸ್ಪಾಟ್​​ ನೋಂದಾವಣಿ ಇರೋದಿಲ್ಲ. ಇನ್ನು ಎರಡನೆಯದಾಗಿ ಕೊರೊನಾ ಲಸಿಕೆಗೆ ಪ್ರಸ್ತುತ ಕೋವಿನ್​ ಅಪ್ಲಿಕೇಶನ್​ ಮೂಲಕವೇ ನೋಂದಣಿ ಮಾಡಲಾಗ್ತಿದೆ. ಇನ್ನು ಜನರು ಗಮನದಲ್ಲಿ ಇರಿಸಿಕೊಳ್ಳಬೇಕಾದ ಇನ್ನೊಂದು ಮಹತ್ವದ ಅಂಶ ಏನು ಅಂದರೆ ಕರೋನ ಲಸಿಕೆಯನ್ನ ವಾರದಲ್ಲಿ ಆರು ದಿನ ಮಾತ್ರ ನೀಡಲಾಗುತ್ತದೆ. ನಾಲ್ಕನೆಯದಾಗಿ ಮಂಗಳವಾರದಿಂದ ಕೇಂದ್ರ ಆರೋಗ್ಯ ಸಚಿವಾಲಯ ನಿಗದಿಪಡಿಸಿದ ಸಮಯ ಅಂದರೆ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗುತ್ತದೆ.

ಇನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಎಲ್ಲಾ ಲಸಿಕೆ ಕೇಂದ್ರಗಳು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಬಂದ್​ ಆಗಲಿವೆ. ಇನ್ನು ಕರೋನ ಲಸಿಕೆ ಪಡೆದುಕೊಳ್ಳುವವರು ತಮ್ಮ ಮೊದಲನೆಯ ಡೋಸ್ ದಿನಾಂಕವನ್ನ ರದ್ದು ಮಾಡಿದರೆ ಆತನ ಎರಡನೆಯ ಡೋಸ್ ದಿನಾಂಕ ಕೂಡ ರದ್ದಾಗಲಿದೆ. ಇನ್ನು ಕೋವಿನ ನೋಂದಾವಣೆಯನ್ನ ಹೊರತುಪಡಿಸಿ ಆನ್​ಸೈಟ್​ ನೋಂದಣಿ ಎಂಬ ಅವಕಾಶವನ್ನ ನೀಡಲಾಗಿದೆ ಮತ್ತು ಇದರಲ್ಲಿ ಫಲಾನುಭವಿಗಳು ನೇರವಾಗಿ ಲಸಿಕೆ ಕೇಂದ್ರಗಳಿಗೆ ಹೋಗಿ ತಮ್ಮ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ಲಸಿಕೆ ಹಾಕಿಸಿಕೊಳ್ಳುವ ಎಲ್ಲರಿಗೂ ತಲುಪಿಸಿ.

Join Nadunudi News WhatsApp Group

corona vaccination

Join Nadunudi News WhatsApp Group