1500 ಕೋಟಿ ರೂ ಕಲೆಕ್ಷನ್ ಮಾಡಲಿದೆ ದರ್ಶನ್ ಅವರ ಸಿನೆಮಾ, ನೋಡಿ ಸಿಹಿಸುದ್ದಿ ಹೇಳಿದ್ಯಾರು

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜತೆಗೆ “ರಾಜವೀರ ಮದಕರಿ ನಾಯಕ” ಸಿನಿಮಾ ಮಾಡುವ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಈಗಾಗಲೇ ಸಾಕಷ್ಟು ಸಲ ಹೇಳಿಕೊಂಡಿದ್ದರು. ಸದ್ದಿಲ್ಲದೆ, ಶೂಟಿಂಗ್‌ ಸ್ಥಳಗಳನ್ನೂ ನೋಡಿಕೊಂಡು ಬಂದಿದ್ದರು.2020ರ ಡಿಸೆಂಬರ್‌ನಲ್ಲಿ ಉತ್ತರಕನ್ನಡದ ಮಿರ್ಜಾನ್‌ ಕೋಟೆಗೂ ಚಿತ್ರತಂಡ ಭೇಟಿ ನೀಡಿ ಲೊಕೇಷನ್‌ ನೋಡಿಕೊಂಡು ಬಂದಿತ್ತು.

ಇದೆಲ್ಲ ಬೆಳವಣಿಗೆ ಬಳಿಕ ಈ ಸಿನಿಮಾ ಸದ್ಯಕ್ಕೆ ಶುರುವಾಗುವುದಿಲ್ಲ ಎಂಬ ಮಾತೂ ಕೇಳಿಬಂದಿತ್ತು. ಇನ್ನೊಂದೆಡೆ ಸಿನಿಮಾ ಸೆಟ್ಟೇರುವುದೇ ಡೌಟು ಎನ್ನಲಾಗಿತ್ತು. ಆದರೆ, ಇದೀಗ ಆ ಸಿನಿಮಾ ಅಲ್ಲದಿದ್ದರೂ, ಅದೇ ನಿರ್ದೇಶಕರು ದರ್ಶನ್‌ ಜತೆ ಸಿನಿಮಾ ಮಾಡುವ ವಿಚಾರವನ್ನು ಹೇಳಿಕೊಂಡಿದ್ದಾರೆ.Complaint filed against Rajendra Singh Babu, Aditya | Kannada Movie News -  Times of India

ತುಳುನಾಡಿನ ಜಾನಪದ ಕ್ರೀಡೆಗಳಲ್ಲಿ ಬಹುಮುಖ್ಯವಾದ ಕ್ರೀಡೆ ಕಂಬಳ. ಈ ಕಂಬಳದ ಕುರಿತು “ವೀರ ಕಂಬಳ” ಚಿತ್ರವನ್ನು ಎಸ್. ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ. ಅರುಣ್ ರೈ ತೋಡಾರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಈವರೆಗಿನ ಅಪ್‌ಡೇಟ್‌ ಮಾಹಿತಿ ಮತ್ತು ಮೊದಲ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರು ಕಂಬಳದ ಜತೆಗೆ ದರ್ಶನ್‌ ಸಿನಿಮಾ ಬಗ್ಗೆ ಮಾಹಿತಿ ನೀಡಿದರು.

ಸದ್ಯಕ್ಕೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಉತ್ತರ ನೀಡಿದ್ದಾರೆ. ಕಂಬಳ ಸಿನಿಮಾ ಮುಗಿಯುತ್ತಿದ್ದಂತೆ, ದರ್ಶನ್ ಜತೆಗೂ ಒಂದು ಅದ್ದೂರಿ ಸಿನಿಮಾ ನಿರ್ದೇಶನ ಮಾಡಲಿದ್ದೇನೆ ಎಂದಿದ್ದಾರೆ. ಹಾಗಾಗಿ ಇದು “ರಾಜ ವೀರ ಮದಕರಿ ನಾಯಕ” ಚಿತ್ರವೋ ಅಥವಾ ಬೇರೆ ಮತ್ತೊಂದು ಚಿತ್ರವೋ ಎಂಬುದು ಸದ್ಯದ ಗೊಂದಲ. ಆ ಬಗ್ಗೆ ಮುಂದಿನ ದಿನಗಳಲ್ಲಿ ಸ್ವತಃ ನಿರ್ದೇಶಕರು ಅಧಿಕೃತ ಮಾಹಿತಿ ನೀಡಲಿದ್ದಾರೆ.Darshan's Raja Veera Madakari Nayaka Launched - Photos,Images,Gallery -  109692

ದರ್ಶನ್ ಅವರ ಚಿತ್ರ 1500 ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಡೌಟೇ ಇಲ್ಲ. ದರ್ಶನ್ ತುಂಬಾ ಒಳ್ಳೆಯ ಟಾಲೆಂಟೆಡ್ ವ್ಯಕ್ತಿ. ಅವರ ಜೊತೆಗೆ ನಾನು ಹಾಗೂ ಅರುಣ್ ರೈ ತೋಡಾರ್ ಇಬ್ಬರೂ ಸೇರಿಕೊಂಡು ದರ್ಶನ್ ಗಾಗಿ ಕಥೆಯನ್ನು ಬರೆದು ಸಿನಿಮಾ ಮಾಡುತ್ತೇವೆ. ಅದನ್ನು ಇಡೀ ಭಾರತ ಹಾಗೂ ಎಲ್ಲಾ ದೇಶಗಳಲ್ಲೂ ರಿಲೀಸ್ ಮಾಡುತ್ತೇವೆ. ಆ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎಂದು ಹೇಳಿದ್ದಾರೆ.

Join Nadunudi News WhatsApp Group

ಡಿಬಾಸ್ ಸದ್ಯ ಕ್ರಾಂತಿ ಸಿನೆಮಾದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೆ ಈ ಚಿತ್ರಕ್ಕಾಗಿ ದರ್ಶನ್ ಬಹಳ ಶ್ರಮ ವಹಿಸಿದ್ದಾರೆ. ಹೀಗಾಗಿ ಸದ್ಯ ಅವರ ಮುಂದಿನ ಚಿತ್ರ ಯಾವುದು ಎನ್ನುವುದರ ಬಗ್ಗೆ ಎಲ್ಲರಿಗು ಕುತೂಹಲ ಇದೆ ಅದಕ್ಕೂ ಮುನ್ನವೇ ಇದೀಗ ಡಿಬಾಸ್ ಚಿತ್ರ ಕೋಟಿ ಕೋಟಿ ಬಚ್ಚಲಿದೆ ಎನ್ನುವ ಸುದ್ದಿಯನ್ನು ನಿರ್ದೇಶಕರೊಬ್ಬರು ಹೊರಹಾಕಿದ್ದು ಎಲ್ಲರಿಗು ಕುತೂಹಲ ಮೂಡಿಸಿದೆ.

Rajendra Singh Babu About Gandugali Madakari Nayaka Movie: ಭಾರತದ ಯಾವುದೇ  ಸಿನಿಮಾಗೂ 'ಮದಕರಿ' ಕಮ್ಮಿ ಇರೋಲ್ಲ- ರಾಜೇಂದ್ರ ಸಿಂಗ್ ಬಾಬು - Kannada Filmibeat

Join Nadunudi News WhatsApp Group