ಚುನಾವಣಾ ಪ್ರಚಾರಕ್ಕೆ ಬಂದಾಗ ಡಿಬಾಸ್ ಎಷ್ಟು ಹಣ ಪಡೆಯುತ್ತಾರೆ ಗೊತ್ತಾ , ನೋಡಿ ನಿಜವಾದ ಸತ್ಯ ಇಲ್ಲಿದೆ

ಕನ್ನಡ ಚಿತ್ರರಂಗದ ಸೂಪರ್ ಸ್ಟರ್ ಹಾಗೂ ಕೋಟ್ಯಾಂತರ ಅಭಿಮಾನಿಗಳ ನಾಡಿಮಿಡಿತರಾಗಿರುವ ಡಿಬಾಸ್ ಖ್ಯಾತಿಯಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಚಿತ್ರರಂಗದ ಒಂದು ಘನತೆ ಎನ್ನಬಹುದು. ಹೌದು ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ಏಕೈಕ ನಟ ಎಂಬ ಖ್ಯಸತಿ ಹೊಂದಿರುವ ದಚ್ಚು ಯಾವುದೇ ರೀತಿಯಾದಂತಹ ಗಾಡ್ ಫಾದರ್ ಇಲ್ಲದೇ ತಮ್ಮ ಸ್ವಂತ ಪರಿಶ್ರಮದಿಂದ ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದರೆ ಅಂದರೆ ನಿಜಕ್ಕೂ ದರ್ಶನ್ ಅವರು ಪಟ್ಟಂತಹ ಕಷ್ಟ ಎಂಬುದನ್ನು ಊಹೆ ಮಾಡಿಕೊಳ್ಳುವುದಕ್ಕೂ ಕೂಡ ಸಾಧ್ಯವಿಲ್ಲ.

ಹೌದು ತಂದೆ ತೂಗುದೀಪ ಶ್ರೀನಿವಾಸ್ ಅವರು ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಖಳನಾಯಕ ಹಾಗೂ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು ಕೂಡ ಅವರು ಯಾವುದೇ ರೀತಿಯಾದಂತಹ ಹಣ ಆಸ್ತಿ ಅಥವಾ ಹಿನ್ನೆಲೆಯನ್ನು ಸಂಪಾದಿಸಿರುವುದಿಲ್ಲ.ತಂದೆ ಜೀವಂತವಾಗಿರುವ ತನಕ ಮಕ್ಕಳಿಬ್ಬರಿಗೂ ಕೂಡ ಕಷ್ಟ ಎಂದರೆ ಏನು ಅಂತ ಗೊತ್ತಾಗದಂತೆ ಬೆಳೆಸಿದರು.Campaigning not for party but for candidate Muniratna b'coz of his  greatness: Darshan | udayavani

ಆದರೆ ತಂದೆ ಹಾಸಿಗೆಯನ್ನು ಹಿಡಿದ ನಂತರ ಬಂಧು ಮಿತ್ರರು ಸಿನಿಮಾ ರಂಗದವರು ಎಲ್ಲರೂ ಕೂಡ ಕೈ ಬಿಟ್ಟಿದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ.ಇನ್ನು ಚಿತ್ರರಂಗದಲ್ಲಿ ಯಶಸ್ಸನ್ನು ಕಾಣುವುದಕ್ಕೂ ಮೊದಲು ದರ್ಶನ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೌದು ಒಬ್ಬ ಲೈಟ್ ಬಾಯ್ ಆಗಿಯೂ ಕೆಲಸ ಮಾಡಿರುವ ನಟ ದರ್ಶನ್ ಇಂದು ಒಬ್ಬ ಸ್ಟಾರ್ ನಟ ಎನಿಸಿಕೊಳ್ಳುವುದರ ಹಿಂದಿನ ಕಾರಣ ಅವರ ಸ್ವಂತ ಪರಿಶ್ರಮವೇ ಆಗಿದ್ದು ಇತ್ತೀಚಿಗಿನ ಅವರ ರಾಬರ್ಟ್ ಚಿತ್ರದ ಯಶಸ್ಸು ಇದಕ್ಕೆಲ್ಲ ಹಿಡಿದ ಕೈಗನ್ನಡಿ ಎನ್ನಬಹುದು.

ಇನ್ನು ದರ್ಶನ್ ಅಭಿಮಾನಿಗಳು ದರ್ಶನ್ ಅವರು ರಸ್ತೆಯಲ್ಲಿ ಸಿಕ್ಕರೂ ಸಾಕು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅವರೊಂದಿಗೆ ಮಾತನಾಡಲು ಹಪಹಪಿಸುತ್ತಾರೆ. ಹಾಗೆಯೇ ದರ್ಶನ್ ಕೂಡ ತಾವು ದೊಡ್ಡ ಸ್ಟಾರ್ ಎನ್ನುವ ಅಹಂಕಾರವನ್ನು ತೋರಿಸದೆ ಒಬ್ಬ ಆಟೋ ಡ್ರೈವರ್ ಜೊತೆಗೂ ಕೂಡ ಸಮಾನವಾಗಿಯೇ ನಡೆದುಕೊಳ್ಳುತ್ತಾರೆ.1600x960 1009070 actor darshan

ಇನ್ನು ಅವರ ಹಲವು ಅಭಿಮಾನಿಗಳಿಗೆ ದರ್ಶನ್ ಚುನಾವಣಾ ಪ್ರಚಾರಕ್ಕೆ ಬಂದಾಗ ಎಷ್ಟು ಹಣ ಪಡೆಯುತ್ತಾರೆ ಎನ್ನುವ ಅನುಮಾನ ಇದೆ ಅದಕ್ಕೆ ಉತ್ತರ ಇಲ್ಲಿದೆ .ದರ್ಶನ್‌ ಮತ್ತು ಮುನಿರತ್ನ ನಡುವೆ ಉತ್ತಮ ಬಾಂಧವ್ಯವಿದ್ದು ಮುನಿರತ್ನ ರವರು ನಿರ್ಮಾಣ ಮಾಡಿದ್ದ ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ದುರ್ಯೋಧನನ ಪಾತ್ರ ಮಾಡಿದ್ದರು. ಈಗ ಮುನಿರತ್ನ ಅವರ ಈ ರಾಜಕೀಯದ ಕುರುಕ್ಷೇತ್ರಕ್ಕೆ ದರ್ಶನ್‌ ಸಾಥ್‌ ನೀಡುತ್ತಿದ್ದು ಅವರ ಆಗಮನದಿಂದ ಚುನಾವಣಾ ಪ್ರಚಾರಕ್ಕೆ ಸ್ಟಾರ್‌ ಮೆರುಗು ಸಿಕ್ಜಿತ್ತು.

Join Nadunudi News WhatsApp Group

ಇನ್ನು ದರ್ಶನ್ ಅವರು ಚುನಾವಣಾ ಪ್ರಚಾರಕ್ಕೆ ಎಂದೂ ಸಹ ಹಣ ಪಡೆಯೋದಿಲ್ಲ. ಹೌದು ದರ್ಶನ್ ಅವರು ಇದುವರೆಗೂ ಚುನಾವಣಾ ಪ್ರಚಾರಕ್ಕೆ ಯಾರ ಬಳಿಯೂ ಕೂಡ ಹಣ ಪಡೆದಿರು ಉದಾಹೆರಣೆಯೇ ಇಲ್ಲ. ಅವರು ಯಾವ ಪಕ್ಷದ ಪರವೂ ಕೂಡ ಪ್ರಚಾರ ಮಾಡುವುದಿಲ್ಲ‌ ರ್ಯಾಲಿ ಸಮಯದಲ್ಲಿ ಪಕ್ಷದ ಪರ ಬಾವುಟಗಳನ್ನು ಕೂಡ ಹಿಡಿಯುವುದಿಲ್ಲ.ಅವರ ಪ್ರಚಾರ ಏನಿದ್ದರೂ ಅವರ ಆಪ್ತರಿಗಷ್ಟೇ. ಹೌದು ವ್ಯಕ್ತಿ ನೋಡಿ ಮಾತ್ರ ದರ್ಶನ್ ಅವರು ಪ್ರಚಾರ ಮಾಡುತ್ತಿದ್ದು ಅದು ಸಹ ಯಾವುದೇ ಹಣವನ್ನು ಪಡೆಯದೆ. ಬದಲಿಗೆ ಆ ವ್ಯಕ್ತಿಯಿಂದ ದರ್ಶನ್ ಅವರು ಲೆಟರ್ ಒಂದನ್ನು ಪಡೆಯುತ್ತಾರೆ.Darshan: ಮಂಡ್ಯ to ಆರ್‌ಆರ್ ನಗರ: ಬದಲಾಯಿತೆ ದರ್ಶನ್ ರಾಜಕೀಯ ಆದರ್ಶ? - Kannada  Filmibeat

ಇದಕ್ಕೆ ಕಾರಣವೂ ಕೂಡ ಇದ್ದು ದರ್ಶನ್ ಅವರ ಮನೆಯ ಮುಂದೆ ಸಾಕಷ್ಟು ಜನ ಸಹಾಯ ಕೇಳಿಕೊಂಡು ಬರುತ್ತಾರೆ. ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ನೆರವು ನೀಡುವಂತೆ ದರ್ಶನ್ ಬಳಿ‌ ಮನವಿ ಮಾಡಿಕೊಳ್ಳುತ್ತಾರೆ.ಅದರಲ್ಲೂ ದೊಡ್ಡ ದೊಡ್ಡ ಖಾಯಿಲೆಗಳಿಂದ ಬಳಲುವವರಿಗೆ ಲಕ್ಷಾಂತರ ರೂಪಾಯಿ ಚಿಕಿತ್ಸಾ ವೆಚ್ಛವನ್ನು ದರ್ಶನ್ ಅವರು ಭರಿಸುತ್ತಾರೆ.

ಈ ವೇಳೆ ಶಾಸಕರ ಲೆಟರ್ ಇದ್ದರೆ ಬಡವರಿಗೆ ಆಸ್ಪತ್ರೆಗಳಲ್ಲಿ 30 ರಿಂದ 40 ಸಾವಿರ ಖಡಿತಗೊಳ್ಳಲಿದೆ ಎಂಬ ಮಾತಿದ್ದು ಅದನ್ನು ಬಳಸಿಕೊಂಡು ಮಿಕ್ಕ ಖರ್ಚನ್ನು ದರ್ಶನ್ ಅವರು ಭರಿಸಿ ಬಡವರಿಗೆ ಚಿಕಿತ್ಸೆ ಕೊಡಿಸುತ್ತಾ ಬಂದಿದ್ದಾರೆ.ತಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಇತರರಿಗೆ ನೆರವಾಗುವುದನ್ನೇ ನೋಡುವ ದರ್ಶನ್ ಅವರು ಯಾವುದೇ ಚುನಾವಣೆಗೆ ಯಾರ ಬಳಿಯೂ ಹಣ ಪಡೆಯೋದಿಲ್ಲ ಎಂಬುದು ಈ ಮೂಲಕವಾದರು ಎಲ್ಲರಿಗೂ ತಿಳಿಯುವಂತಾಗಲಿ. ಬಹಳಷ್ಟು ವರ್ಷಗಳಿಂದ ಯಾವುದೇ ಪ್ರಚಾರ ಪಡೆಯದೇ ಬಡವರಿಗೆ ನೆರವಾಗುತ್ತಾ ಬರುತ್ತಿರುವ ದರ್ಶನ್ ಅವರ ಗುಣ ನಿಜಕ್ಕೂ ಮೆಚ್ಚುವಂತದ್ದು.Darshan campaign for munirathna: ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡೋದಕ್ಕೆ  ಅದೊಂದೇ ಕಾರಣ! - Kannada Filmibeat

Join Nadunudi News WhatsApp Group