ಇದೆ ವರಲಕ್ಷ್ಮಿ ಹಬ್ಬಕ್ಕೆ ಡಿಬಾಸ್ ಅಭಿಮಾನಿಗಳು ಊಹಿಸದ ಸಿಹಿಸುದ್ದಿ, ನೋಡಿ ಹೇಗಿರಲಿದೆ ಡಿಬಾಸ್ ಹವಾ

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕ್ರಾಂತಿ ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು ಕೊನೆಯ ಹಂತದ ಚಿತ್ರೀಕರಣವಷ್ಟೇ ಭಾಕಿ ಉಳಿದಿದೆ. ಈ ಮಧ್ಯೆ ದರ್ಶನ್ ತಂಡದಿಂದ ಮತ್ತೊಂದು ಖುಷಿಯ ವಿಚಾರ ಹೊರ ಬಿದ್ದಿದೆ.

ದರ್ಶನ ಸಿನಿಮಾವೊಂದು ಶೂರುವಾಯ್ತು ಅಂದ್ರೆ ಅಭಿಮಾನಿಗಳು ಮುಂದಿನ ಸಿನಿಮಾ ಯಾವುದು ಅನ್ನೋ ಪ್ರಶ್ನೆ ಶುರುಮಾಡ್ತಾರೆ. ಒಂದು ಸಿನಿಮಾ ಕಂಪ್ಲೀಟ್ ಆಗೋ ಮೊದಲೇ ಮತ್ತೊಂದು ಸಿನಿಮಾ ಯಾವುದು, ನಿರ್ದೇಶಕರು ಯಾರು? ನಟಿ ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಅದಕ್ಕೀಗ ನಿರ್ಮಾಪಕ ರಾಕ್ ಲೈವ್ ಉತ್ತರ ನೀಡಿದ್ದಾರೆ.Darshan, wife unfollow each other on Twitter | Kannada Movie News - Times  of India

ಸದ್ಯಕ್ಕೆ ದರ್ಶನ್ ನಟನೆಯ ಮುಂದಿನ ಸಿನಿಮಾಗೆ ಡಿ 56 ಎಂದು ಹೆಸರಿಟ್ಟಿದ್ದು ಚಿತ್ರಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸಿನಿಮಾದ ಲಾಂಚ್ ಗಾಗಿ ಚಿತ್ರತಂಡ ಈಗಾಗ್ಲೆ ಸಾಕಷ್ಟು ತಯಾರಿ ಮಾಡಿಕೊಂಡಿದೆ,. ಈ ಬಗ್ಗೆ ಮಾತನಾಡಿರುವ ರಾಕ್ ಲೈನ್ ವೆಂಕಟೇಶ್, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದರ್ಶನ್ ಅವರ ಮುಂದಿನ ಸಿನಿಮಾ ಸೆಟ್ಟೇರಲಿದೆ ಎಂದಿದ್ದಾರೆ.

ಈ ಚಿತ್ರದ ಬಗ್ಗೆ ಮಾತನಾಡಿರುವ ರಾಕ್‌ಲೈನ್ ವೆಂಕಟೇಶ್, “D 56 ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲಾ ಮಾಹಿತಿ ನೀಡುತ್ತೇವೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಈ ಸಿನಿಮಾ ಸೆಟ್ಟೇರಲಿದೆ.” ಎಂದಿದ್ದಾರೆ. ಸ್ವತಃ ರಾಕ್‌ಲೈನ್ ವೆಂಕಟೇಶ್ ಈ ಮಾಹಿತಿ ನೀಡಿರೋದ್ರಿಂದ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಖುಷಿಯಾಗಿದ್ದಾರೆ.Buzz:Challenging Star Darshan Wife Coronavirus Positive, What Happened Next?

Join Nadunudi News WhatsApp Group

ಈಗಾಗಲೇ D 56 ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದ ಪೋಸ್ಟರ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಕಥೆಯ ಮೇಲೆ ದುಪ್ಪಟ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ದರ್ಶನ್ ಜೊತೆ ಈ ಹಿಂದೆ ರಾಬರ್ಟ್ ಸಿನಿಮಾ ಮಾಡಿದ್ದ ತರುಣ್ ಸುಧೀರ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಡಿ 56 ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು ದೊಡ್ಡ ಮಟ್ಟದ ಸಿನಿಮಾ ನಿರ್ಮಾಣವಾಗಲಿದೆ.

ಒಟ್ಟಾರೆ ಕನ್ನಡದಲ್ಲಿ ಯಶ್ ರಕ್ಷಿತ್ ಶೆಟ್ಟಿ ಬಳಿಕ ಇದೀಗ ಡಿಬಾಸ್ ಕೂಡ ಪಾನ್ ಇಂಡಿಯಾ ಚಿತ್ರದಲ್ಲಿ ನಟಿಸಲಿದ್ದಾರೆ ನಿಜಕ್ಕೂ ಈ ವಿಷ್ಯ ಅಭಿಮಾನಿಗಳಿಗೆ ದೊಡ್ಡ ಸಿಹಿಸುದ್ದಿ ನೀಡಿದೆ ಎನ್ನುವದರಲ್ಲಿ ಎರಡು ಮಾತಿಲ್ಲ. ಇನ್ನು ದರ್ಶನ ಕೂಡ ಇದೆ ವಿಷಯದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿದೆ.Kannada Upcoming PAN India Movies Releasing In 2022 – FilmiBeat

Join Nadunudi News WhatsApp Group