Deepika And Ranveer Divorce: ದೀಪಿಕಾ ಜೊತೆ ವಿಚ್ಛೇಧನದ ಸುದ್ದಿಗೆ ಸ್ಪಷ್ಟನೆ ಕೊಟ್ಟ ರಣವೀರ್, ಒಂದೇ ಸನ್ನೆಯಲ್ಲಿ ಉತ್ತರ.

Deepika And Ranveer Divorce: ದೀಪಿಕಾ ಪಡುಕೋಣೆ (Deepika Padukone) ದೇಶದ ಚಿತ್ರರಂಗ ಕಂಡ ಖ್ಯಾತ ನಟಿಯರಲ್ಲಿ ಒಬ್ಬರು. ಕನ್ನಡದ ಐಶ್ವರ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ದೀಪಿಕಾ ಪಡುಕೋಣೆ ಅವರು ನಂತರ ಬಾಲಿವುಡ್ (Bollywood) ನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ದೇಶದ ಟಾಪ್ ನಟಿ ಅನ್ನುವ ಸ್ಥಾನವನ್ನ ಪಡೆದುಕೊಂಡರು.

ಹಲವು ಟಾಪ್ ನಟರ ಜೊತೆ ಹಲವು ಸೂಪರ್ ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟಿ ದೀಪಿಕಾ ಪಡುಕೋಣೆ ಅವರು ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನ ಹೊಂದಿದ್ದಾರೆ.

ಹಲವು ಚಿತ್ರಗಳಲ್ಲಿ ಬ್ಯುಸಿ ಇರುವ ಸಮಯದಲ್ಲಿ ನಟ ರಣವೀರ್ ಸಿಂಗ್ (Ranveer Sing) ಅವರನ್ನ ಪ್ರೀತಿಮಾಡಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯನ್ನ ಮಾಡಿಕೊಂಡರು ನಟಿ ದೀಪಿಕಾ ಪಡುಕೋಣೆ.

Ranveer Singh put a full stop to the issue of divorce by kissing Deepika's photo
Image Credit: economictimes.indiatimes

ಮದುವೆಯ ನಂತರ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ ಆದ ನಟಿ ದೀಪಿಕಾ ಪಡುಕೋಣೆ
ಹೌದು ನಟಿ ದೀಪಿಕಾ ಪಡುಕೋಣೆ ಅವರು ರಣವೀರ್ ಸಿಂಗ್ ಅವರನ್ನ ಮದುವೆ ಆದನಂತರ ಸಾಕಷ್ಟು ಚಿತ್ರಗಳ ಶೂಟಿಂಗ್ ನಲ್ಲಿ ಬಹಳ ಬ್ಯುಸಿ ಆದರು.

ಗಂಡನ ಜೊತೆ ಹೆಚ್ಚು ಸಮಯವನ್ನ ಕಳೆಯ ನಟಿ ದೀಪಿಕಾ ಪಡುಕೋಣೆ ಅವರು ಹೆಚ್ಚು ಚಿತ್ರಗಳ ಶೂಟಿಂಗ್ ನಲ್ಲಿಯೇ ಬ್ಯುಸಿ ಆಗಿದ್ದಾರೆ ಎಂದು ಹಲವು ಜನರು ಸಾಮಾಜಿಕ ಜಾಲತಾಣದಲ್ಲಿ ಕೂಡ ಮಾತನಾಡಿಕೊಂಡರು.

Join Nadunudi News WhatsApp Group

ಸಾಮಾಜಿಕ ಜಾಲತಾಣದಲ್ಲಿ ಗಂಡ ಹೆಂಡತಿ ಫುಲ್ ಬ್ಯುಸಿ
ಚಿತ್ರಗಳಲ್ಲಿ ಬ್ಯುಸಿ ಇರುವ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಕೂಡ ಅಷ್ಟೇ ಬ್ಯುಸಿ ಇರುತ್ತಿದ್ದರು. ಸದಾ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಫೋಟೋಗಳನ್ನ ಶೇರ್ ಮಾಡುವ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ನಾವು ಉತ್ತಮ ಸ್ನೇಹಿತರು ಎಂದು ಕೂಡ ಹೇಳಿಕೊಂಡಿದ್ದರು.

Deepika Padukone and Ranveer Singh getting divorced is false and a gossip
Image Credit: republicworld

ಹರಿದಾಡಿತು ದೀಪಿಕಾ ಪಡುಕೋಣೆ ಮತ್ತು ರಣವೀರ್ ವಿಚ್ಛೇಧನದ ಸುದ್ದಿ
ಹೌದು ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ವಿಚ್ಛೇಧನವನ್ನ ಪಡೆದುಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು.

ನಟ ರಣವೀರ್ ಮತ್ತು ದೀಪಿಕಾ ನಡುವೆ ಏನೋ ಏನದೆದಿದೆ ಮತ್ತು ಅವರು ಕೆಲವು ಕಾರಣಗಳಿಂದ ವಿಚ್ಛೇಧನ (Divorce) ಪಡೆದುಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಕೂಡ ಹರಿದಾಡಿತ್ತು.

ವಿಚ್ಛೇಧನದ ಸುದ್ದಿಗೆ ಬ್ರೇಕ್ ಹಾಕಿದ ನಟ ರಣವೀರ್ ಸಿಂಗ್
ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ವಿಚ್ಛೇಧನವನ್ನ ಪಡೆದುಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ರಣವೀರ್ ಸಿಂಗ್ ಅವರು ಈ ವಿಷಯಕ್ಕೆ ತಿಲಾಂಜಲಿಯನ್ನ ಇಟ್ಟಿದ್ದಾರೆ. ಮುಂಬೈ ನಲ್ಲಿ ಒಂದು ಕಾರ್ಯಕ್ರಮಕ್ಕೆ ಆಗಮಿಸಿದ ನಟ ರಣವೀರ್ ಸಿಂಗ್ ಅವರು ಅಲ್ಲಿ ದೀಪಿಕಾ ಪಡುಕೋಣೆ ಅವರ ಫೋಟೋ ನೋಡಿ ಅದಕ್ಕೆ ಕಿಸ್ ಕೊಟ್ಟಿದ್ದಾರೆ.

Ranveer Singh put a full stop to the issue of divorce by saying that she is mine
Image Credit: filmfare

ಹೆಂಡತಿಯ ಫೋಟೋಗೆ ಕಿಸ್ ಕೊಟ್ಟಿರುವ ನಟ ರಣವೀರ್ ಸಿಂಗ್ ಅವರು ನಂತರ ಇವಳು ನನ್ನವಳು ಎಂದು ಸನ್ನೆ ಮಾಡಿ ಹೇಳಿದ್ದಾರೆ. ಸದ್ಯ ಹೆಂಡತಿಯ ಬಗ್ಗೆ ಪ್ರೀತಿಯನ್ನ ಹೊರಹಾಕಿರುವ ನಟ ರಣವೀರ್ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚ್ಛೇಧನದ ಸುದ್ದಿಗೆ ಪೂರ್ಣ ವಿರಾಮ ಹಾಕಿದ್ದಾರೆ.

ವಿಚ್ಛೇಧನ ಒಂದು ಗಾಸಿಪ್ ಅಷ್ಟೇ ಅಂದ ಅಭಿಮಾನಿಗಳು
ನಟ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ವಿಚ್ಛೇಧನ ಪಡೆದುಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿಯನ್ನ ಕೇಳಿದ ಅಭಿಮಾನಿಗಳು ಬೇಸರವನ್ನ ಹೊರಹಾಕಿದ್ದರು. ಸದ್ಯ ಇದೊಂದು ಗಾಸಿಪ್ ಆಗಿದ್ದು ಅದೂ ಸುಳ್ಳು ಸುದ್ದಿ ಎಂದು ತಿಳಿದು ಈಗ ಸಂತಸವನ್ನ ಅವರ ಅಭಿಮಾನಿಗಳು ಹೊರಹಾಕಿದ್ದಾರೆ.

Join Nadunudi News WhatsApp Group