ಖ್ಯಾತ ನಟಿ ದೀಪಿಕಾ ಪಡುಕೋಣೆ ಹೃದಯ ಬಡಿತದಲ್ಲಿ ಭಾರಿ ಹೆಚ್ಚಳ, ಆಸ್ಪತ್ರೆಗೆ ದಾಖಲು, ವೈದ್ಯರು ಹೇಳಿದ್ದೇನು ನೋಡಿ.

ಸದ್ಯದ ದಿನಗಳಲ್ಲಿ ಯಾವ ಸಮಯದಲ್ಲಿ ಏನಾಗುತ್ತದೆ ಅನ್ನುವುದನ್ನ ಊಹೆ ಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂದು ಹೇಳಬಹುದು. ಪ್ರತಿದಿನ ನಡೆಯುತ್ತಿರುವ ಕೆಲವು ಘಟನೆಗಳನ್ನ ಕೇಳಿದರೆ ನಮಗೆ ಜೀವದ ಮೇಲೆ ಭಯ ಹುಟ್ಟುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಚಿತ್ರರಂಗದಲ್ಲಿ ಪದೇಪದೇ ಆಘಾತದ ಸುದ್ದಿಗಳು ಬರುತ್ತಿದ್ದು ಇದು ಜನರ ಆತಂಕಕ್ಕೆ ಕಾರಣವಾಗುತ್ತಿದೆ. ನಟ ನಟಿಯರು ಶೂಟಿಂಗ್ ಕಾರಣ ತಮ್ಮ ಆರೋಗ್ಯದ ಮೇಲೆ ಗಮನವನ್ನ ಕೊಡದೆ ಆಸ್ಪತ್ರೆ ಸೇರುತ್ತಿದ್ದು ಇದು ಅಭಿಮಾನಿಗಳಲ್ಲಿ ದೊಡ್ಡ ಆತಂಕವನ್ನ ಉಂಟಾಗುವಂತೆ ಮಾಡುತ್ತಿದೆ. ಇನ್ನು ಈಗ ಮತ್ತೆ ಜನರಿಗೆ ದೊಡ್ಡ ಶಾಕಿಂಗ್ ಸುದ್ದಿ ಬಂದಿದೆ ಎಂದು ಹೇಳಬಹುದು.

ಎದೆ ಬಡಿತದಲ್ಲಿ ತೀವ್ರವಾದ ಏರುಪೇರು ಆದಕಾರಣ ದೇಶದ ಚಿತ್ರರಂಗದ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾದರೆ ನಟಿ ದೀಪಿಕಾ ಪಡುಕೋಣೆ ಈಗ ಹೇಗಿದ್ದಾರೆ ಮತ್ತು ಅವರ ಆರೋಗ್ಯದಲ್ಲಿ ಏರುಪೇರಾಗಲು ಅಸಲಿ ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಹೌದು ಸ್ನೇಹಿತರೆ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರ ಆರೋಗ್ಯದಲ್ಲಿ ಬೆಳಿಗ್ಗೆ ತೀವ್ರವಾದ ಏರುಪೇರು ಆಗಿದ್ದು ಅವರನ್ನ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೌದು ಶೂಟಿಂಗ್ ಸಮಯದಲ್ಲಿ ಅವರ ಹೃದಯ ಬಡಿತದಲ್ಲಿ ತೀವ್ರವಾದ ಏರುಪೇರು ಉಂಟಾಗಿದ್ದು ಶೂಟಿಂಗ್ ನಡೆಯುತ್ತಿದ್ದ ಜಾಗದಲ್ಲೇ ದೀಪಿಕಾ ಪಡುಕೋಣೆ ಅವರು ಅಶ್ವಸ್ಥರಾಗಿದ್ದಾರೆ ಎಂದು ಮಾಧ್ಯಮ ಮೂಲಗಳಿಂದ ತಿಳಿದುಬಂದಿದೆ.

deepika padukone in hospital

ಪ್ರಾಜೆಕ್ಟ್ ಕೆ ಚಿತ್ರೀಕರಣದ ಸಮಯದಲ್ಲಿ ಈ ಘಟನೆ ನಡೆದಿದ್ದು ತಕ್ಷಣ ದೀಪಿಕಾ ಪಡುಕೋಣೆ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಅವರ ಆರೋಗ್ಯದಲ್ಲಿ ಈಗ ಸುಧಾರಣೆ ಆಗಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ನಟಿ ದೀಪಿಕಾ ಪಡುಕೋಣೆ ಅವರು ಶೂಟಿಂಗ್ ಸಲುವಾಗಿ ಎರಡು ದಿನಗಳಿಂದ ಊಟ ಮಾಡಿರಲಿಲ್ಲವಂತೆ ಮತ್ತು ಈ ಕಾರಣದಿಂದ ಅವರು ತುಂಬಾ ಸುಸ್ತಾಗಿದ್ದರು ಎಂದು ಹೇಳೆಲಾಗುತ್ತಿದೆ.

ಶೂಟಿಂಗ್ ಕಾರಣ ಅವರು ಊಟ ಬಿಟ್ಟಿದ್ದು ಶೂಟಿಂಗ್ ಅಂಲ್ಲಿ ಬಹಳ ಆಯಾಸ ಆದಕಾರಣ ಅವರ ಹೃದಯ ಬಡಿತದಲ್ಲಿ ಬಹಳ ಏರಿಕೆ ಆಗಿದ್ದು ಈಗ ಅವರು ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆರೋಗ್ಯದಲ್ಲಿ ತೀವ್ರವಾದ ಏರುಪೇರು ಆಗುತ್ತಿರುವುದು ನಟಿ ದೀಪಿಕಾ ಪಡುಕೋಣೆ ಅವರ ಗಮನಕ್ಕೆ ಬಂದಿದ್ದು ತಕ್ಷಣ ಅವರೇ ಇತರರಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಎಂದು ತಿಳಿದುಬಂದಿದೆ. ಸ್ನೇಹಿತರೆ ದೇಶದ ಚಿತ್ರರಂಗದಲ್ಲಿ ಪದೇಪದೇ ಇಂತಹ ಆತಂಕದ ಸುದ್ದಿ ಬರುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

deepika padukone in hospital

Join Nadunudi News WhatsApp Group