ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿವ್ಯ ಸುರೇಶ್, ಅಷ್ಟಕ್ಕೂ ನಿನ್ನೆ ಆಗಿದ್ದೇನು ಗೊತ್ತಾ.

ಸದ್ಯ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಅದೂ ಬಿಗ್ ಬಾಸ್ ಕನ್ನಡ ಸೀಸನ್ 8 ಎಂದು ಹೇಳಿದರೆ ತಪ್ಪಾಗಲ್ಲ. ಹೌದು ರಾತ್ರಿಯಾದರೆ ಸಾಕು ಜನರು ಟಿವಿ ಮುಂದೆ ಕುಳಿತುಕೊಂಡು ಬಿಗ್ ಬಾಸ್ ವೀಕ್ಷಣೆ ಮಾಡುತ್ತಿದು ಬಿಗ್ ಬಾಸ್ ನ TRP ಕೂಡ ಬಹಳ ಜಾಸ್ತಿ ಆಗಿದೆ ಎಂದು ಹೇಳಬಹುದು. ಇನ್ನು ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಬಹಳ ರೋಚಕ ಟಾಸ್ಕ್ ಗಳನ್ನ ನೀಡುತ್ತಿದ್ದು ಇದು ಜನರ ಮನರಂಜನೆಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಬಿಗ್ ಬಾಸ್ ಬಹಳ ರೋಚಕ ಹಂತವನ್ನ ತಲುಪುತ್ತಿದ್ದು ಪ್ರತಿ ವಾರ ಒಬ್ಬೊಬ್ಬರು ಮನೆಯಿಂದ ಆಚೆ ಬರುತ್ತಿದ್ದಾರೆ ಎಂದು ಹೇಳಬಹುದು.

ಇನ್ನು ಈ ಭಾರಿ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಅನ್ನುವುದನ್ನ ಊಹೆ ಮಾಡುವುದು ಬಹಳ ಕಷ್ಟವಾಗುತ್ತಿದೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ಬಿಗ್ ಬಾಸ್ ಸ್ಪರ್ಧಿ ದಿವ್ಯ ಸುರೇಶ್ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರನ್ನ ಹಾಕಿದ್ದು ಸದ್ಯ ಈ ಸುದ್ದಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು. ಹಾಗಾದರೆ ದಿವ್ಯ ಸುರೇಶ್ ಅವರು ಕಣ್ಣೀರು ಹಾಕಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Divya suresh cry

ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಹಾಸ್ಟೆಲ್ ನಲ್ಲಿ ಇರುವವರು ಮನೆಯವರ ಜೊತೆ ಮಾತನಾಡಲು ಬಹಳ ಚಡಪಡಿಸುತ್ತಾರೆ, ಅಂದಹಾಗೇ ಇದೀಗ ಬಿಗ್ ಬಾಸ್ ಮನೆಯಲ್ಲಿ ಕೂಡ ಹಾಸ್ಟೆಲ್ ಸದಸ್ಯರ ಮನೆಯವರು ಪತ್ರಗಳನ್ನು ಕಳುಹಿಸಿದ್ದಾರೆ. ಆದರೆ ಸದಸ್ಯರು ತಮಗೆ ಬಂದಿರುವ ಪತ್ರಗಳನ್ನು ಓದಲು ಬಿಗ್‍ಬಾಸ್ ನೀಡುವ ಟಾಸ್ಕ್‌ನಲ್ಲಿ ಗೆಲ್ಲಬೇಕು. ಆಗ ಮಾತ್ರ ಗೆಲ್ಲುವ ಸದಸ್ಯರಿಗೆ ಮಾತ್ರ ಪತ್ರ ಓದುವ ಅವಕಾಶ ಸಿಗುತ್ತದೆ ಎಂದು ಸೂಚಿಸಿದ್ದರು.

ಇನ್ನು ಅದೇ ರೀತಿಯಲ್ಲಿ ನಿನ್ನೆ ನಡೆದ ಟಾಸ್ಕ್ ನಲ್ಲಿ ದಿವ್ಯ ಸುರೇಶ್ ಅವರು ಗೆದ್ದಿದ್ದು ಪತ್ರವನ್ನು ಪಡೆಯುತ್ತಾರೆ. ಇನ್ನು ಪತ್ರವನ್ನ ದಿವ್ಯ ಅವರು ನಂತರ ಅದನ್ನ ಗಾರ್ಡನ್ ನಲ್ಲಿ ಕುಳಿತು ಓದಿ ಮನೆಯವರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಳಿಕ ಬೆಡ್ ರೂ ಏರಿಯಾಗೆ ಹೋಗಿ ಪತ್ರವನ್ನು ಮತ್ತೊಮ್ಮೆ ಓದಿ ಅಳುತ್ತಾ ಕೊನೆಯಲ್ಲಿ ಲೆಟರ್ ಕಳುಹಿಸಿ ಕೊಟ್ಟಿದ್ದಕ್ಕೆ ಬಿಗ್‍ಬಾಸ್‍ಗೆ ಧನ್ಯವಾದ ತಿಳಿಸಿದರು. ಇದಾದ ನಂತರ ಕಿಚನ್ ಏರಿಯಾ ಬಳಿ ದಿವ್ಯಾ ಸುರೇಶ್ ಹೋದಾಗ ಮನೆಯವರು ಏನಂತಾ ಹೇಳಿದ್ದಾರೆ ಎಂದು ರಘು, ದಿವ್ಯಾ ಉರುಡುಗ, ಶುಭ ಕೇಳಿದಾಗ, ನಮ್ಮ ಮನೆಯವರು ತುಂಬಾ ಖುಷಿಪಟ್ಟಿದ್ದಾರೆ. ನಿನ್ನನ್ನು ಫಿನಾಲೆಯಲ್ಲಿ ನೋಡಲು ಬರುತ್ತೇವೆ ಎಂದಿದ್ದಾರೆ.

Join Nadunudi News WhatsApp Group

Divya suresh cry

ಅಲ್ಲದೆ ನಮ್ಮ ಅಮ್ಮ ಡೂಡೂ ಬಗ್ಗೆ ನೀನು ಯೋಚಿಸಬೇಡ. ನೀನು ಎಷ್ಟು ಸ್ಟ್ರಾಂಗ್ ಅಂತ ನಿನಗೆ ಗೊತ್ತು ಯಾಕೆ ಅಳುತ್ತೀಯಾ, ಅಳಬೇಡ. ಗ್ರೂಪ್ ಟಾಸ್ಕ್ ಇದ್ದಾಗ ನೀನು ಯಾವ ಟೀಂನಲ್ಲಿ ಇರುತ್ತೀಯಾ ಆ ಟೀಂನಲ್ಲಿ ತುಂಬಾ ಹೋಪ್ಸ್ ಇರುತ್ತದೆ. ಅದನ್ನು ನೀನು ಹಾಗೆಯೇ ನಿಭಾಯಿಸಿಕೊಂಡು ಹೋಗು. ಚೆನ್ನಾಗಿ ಆಡುತ್ತೀಯಾ ಚೆನ್ನಾಗಿ ಆಡಿಕೊಂಡು ಹೋಗು ಎಂದಿದ್ದಾರೆ. ಚಿಕನ್ ಮಾಡಿದಾಗಲೆಲ್ಲಾ ನಿನ್ನನ್ನು ಜ್ಞಾಪಿಸಿಕೊಳ್ಳುತ್ತಿರುತ್ತೇವೆ. ನೀನು ಮಲ್ಲಿಗೆ ಹೂ ಮುಡಿದುಕೊಂಡಿದ್ದಾಗ ಎಲ್ಲರೂ ತುಂಬಾ ಜಾಸ್ತಿ ನಕ್ಕಿದ್ದೇವೆ. ವೀಕೆಂಡ್‍ನಲ್ಲಿ ನೀನು ಕಲ್ರ್ಸ್ ಮಾಡುತ್ತೀಯಾಲ್ಲ ಯಾವಾಗಲೂ ಕಲ್ರ್ಸ್ ಮಾಡು ತುಂಬಾ ಮುದ್ದಾಗಿ ಕಾಣಿಸುತ್ತೀಯಾ. ಜೊತೆಗೆ ಸಾರಿಯಲ್ಲಿ ನೀನು ತುಂಬಾನೇ ಚೆನ್ನಾಗಿ ಕಾಣಿಸುತ್ತೀಯಾ ಹಾಗಾಗಿ ಸಾರಿ ಹಾಕು ಎಂದು ಬರೆದಿದ್ದಾರೆ ಎನ್ನುತ್ತಾ ಸಂತಸ ವ್ಯಕ್ತಪಡಿಸಿದರು.

Join Nadunudi News WhatsApp Group