83 ನೇ ವಯಸ್ಸಿಗೆ ಮಗುವಿಗೆ ತಂದೆಯಾದ ವೃದ್ಧ, ಈತನ ಹೆಂಡತಿಯ ವಯಸ್ಸು ಎಷ್ಟು ಗೊತ್ತಾ.

ಮದುವೆಯಾಗುವುದು ಮತ್ತು ಮದುವೆಯಾದ ನಂತರ ಮಕ್ಕಳ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ ಎಂದು ಹೇಳಬಹುದು. ಯಾವುದೇ ಕೆಲಸವನ್ನ ಮಾಡಲು ಒಂದು ಸರಿಯಾದ ಸಮಯ ಇರುತ್ತದೆ ಮತ್ತು ಆ ಸಮಯದಲ್ಲೇ ಆ ಕೆಲಸವನ್ನ ಮಾಡಿದರೆ ಒಳ್ಳೆಯದು, ಇಲ್ಲವಾದರೆ ಕಂಡವರ ಬಾಯಿಗೆ ನಾವು ತುತ್ತಾಗಬೇಕಾಗುತ್ತದೆ. ಸದ್ಯ ಇಲ್ಲೊಬ್ಬ ವೃದ್ಧ ಮಾಡಿರುವ ಕೆಲಸ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು. ಹೌದು ತನ್ನ 83 ನೇ ವಯಸ್ಸಿನಲ್ಲಿ ಈ ವೃದ್ಧ ಮಗುವಿಗೆ ತಂದೆಯಾಗಿದ್ದು ಈತನ ಮತ್ತು ಈತನ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ಇನ್ನು ಈತನ ಫೋಟೋ ಸುದ್ದಿಯಾಗಿರುವುದರ ಜೊತೆಗೆ ಈತನ ಮಗುವಿಗೆ ತಾಯಿಯಾಗಿರುವ ಈತನ ಹೆಂಡತಿಗೆ ವಯಸ್ಸು ಕೂಡ ಸಕತ್ ಸುದ್ದಿಯಾಗಿದೆ. ಹಾಗಾದರೆ ಈ ವೃದ್ಧನ ಹೆಂಡತಿಯ ವಯಸ್ಸು ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ತಾವು 83ನೇ ವಯಸ್ಸಿನಲ್ಲಿ ತಂದೆಯಾಗಿರುವ ಬಗ್ಗೆ ಸ್ವತಃ ಆ ವ್ಯಕ್ತಿಯೇ ಬಹಿರಂಗಪಡಿಸಿದ್ದಾರೆ. ಅವರ ಹೆಸರು ಆಲ್ಬರ್ಟೊ ಕಾರ್ಮಿಲಿಯಟ್. ವೃತ್ತಿಯಲ್ಲಿ ಅವರು ಪೌಷ್ಠಿಕಾಂಶ ತಜ್ಞರು. ಹಾಗಂತ ಅವರ ಹೆಂಡತಿಯ ವಯಸ್ಸು 60 ಅಥವಾ 70 ಅಲ್ಲ. 35 ವರ್ಷದ ಹುಡುಗಿಯನ್ನು 2ನೇ ಮದುವೆಯಾಗಿದ್ದ ಆಲ್ಬರ್ಟೊ ಕಾರ್ಮಿಲಿಯಟ್ 83ನೇ ವಯಸ್ಸಿಗೆ ತಂದೆಯಾಗಿದ್ದಾರೆ.

Doctor Alberto Cormillot

35 ವರ್ಷದ ಪತ್ನಿಯ ಹೆಸರು ಎಸ್ಟೆಫಾನಿಯಾ ಪಾಸ್ಕಿನಿ. ಫರ್ಟಿಲಿಟಿ ಚಿಕಿತ್ಸೆಯ ಬಳಿಕ ಎಸ್ಟೇಫಾನಿಯಾ ಗರ್ಭಿಣಿಯಾದಳು ಎಂದು ಹೇಳಿದ್ದಾರೆ. ಇನ್ನು ಮಗುವಿಗೆ ಎಮಿಲಿಯೋ ಎಂದು ಹೆಸರಿಡಲಾಗಿದೆ. ತಮಗೆ ತೀರಾ ವಯಸ್ಸಾಗಿದೆ ಎನ್ನುವ ವಿಚಾರ ಆಲ್ಬರ್ಟೋ ಅವರಿಗೂ ಗೊತ್ತಿದೆ, ಹಾಗಿದ್ದರೂ ಬದುಕಿದ್ದಷ್ಟು ದಿನ ಮಗ ಎಮಿಲಿಯೋನನ್ನು ಚೆನ್ನಾಗಿ ಸುಖವಾಗಿ ಬೆಳೆಸುತ್ತೇನೆ. ಆ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದ್ದಾರೆ. ಈಗಾಗಲೇ ನಾನು ಭವಿಷ್ಯದ ಬಗ್ಗೆ ಯೋಚಿಸಿದ್ದೇನೆ. ಮುಂದೆ ಇವರಿಬ್ಬರೇ ಜೀವನದ ಹೆಚ್ಚಿನ ಸಮಯ ಕಳೆಯಬೇಕು ಎನ್ನುವುದು ನನಗೆ ಗೊತ್ತು. ಆದರೆ ಎಮಿಲಿಯೋಗೆ ತನ್ನ ತಂದೆ ಯಾರು ಅವರ ಧ್ವನಿ ಹೇಗಿತ್ತು ಎನ್ನುವುದು ಗೊತ್ತಾಗಬೇಕಲ್ಲ.

ಅದಕ್ಕಾಗಿ ಜೀವನದ ವಿಶೇಷ ಕ್ಷಣಗಳ ವಿಡಿಯೋ ಹಾಗೂ ಆಡಿಯೋ ರೆಕಾರ್ಡ್ ಮಾಡುತ್ತೇವೆ ಎಂದು ಆಲ್ಬರ್ಟೋ ಹೇಳುತ್ತಾರೆ. ನಾನು ಈ ಭೂಮಿಯ ಮೇಲೆ ಇಲ್ಲದೇ ಇದ್ದಾಗ ಅವನು ಇವುಗಳನ್ನು ಕೇಳಬಹುದು. ಅವನಿಗಿನ್ನೂ ಒಂದು ವರ್ಷ, ಹಾಗಿದ್ದರೂ ಆತನಿಗೆ ಒಂದು ಫೋನ್ ಇದೆ. ಅದರಲ್ಲಿ ವ್ಯಾಟ್ಸ್ ಆಪ್ ಇದೆ. ಅದರಲ್ಲಿ ಅವನೂ ಕೂಡ ಆಡಿಯೋ ಸಂದೇಶಗಳನ್ನು ರೆಕಾರ್ಡ್ ಮಾಡುತ್ತಾನೆ. ವಿಡಿಯೋ ಸಂದೇಶಗಳನ್ನು ಕಳಿಹಿಸುತ್ತಾನೆ.

Join Nadunudi News WhatsApp Group

Doctor Alberto Cormillot

ಇದೆಲ್ಲವನ್ನು ನಾನು ಸ್ಟೋರ್ ಮಾಡಿ ಇಡುತ್ತಿದ್ದೇನೆ. ಅದರೊಂದಿಗೆ ನಾನು ಮಾಡಿರುವ ವಿಡಿಯೋ ಹಾಗೂ ಆಡಿಯೋ ರೆಕಾರ್ಡ್‌ಗಳೂ ಇರುತ್ತವೆ. ಭವಿಷ್ಯದಲ್ಲಿ ಆತನಿಗೆ ಇವುಗಳ ಮೂಲಕವೇ ನಾನು ಜೊತೆಯಾಗಿರುತ್ತೇನೆ ಎನ್ನುತ್ತಾರೆ. ಇದರ ನಡುವೆ ಚಿಕ್ಕ ಮಗುವಿಗೆ ಚೈನೀಸ್ ಭಾಷೆಯನ್ನು ಕಲಿಸಲು ಶಿಕ್ಷಕರನ್ನೂ ನೇಮಕ ಮಾಡಿಕೊಂಡಿದ್ದಾರೆ. ಚೈನೀಸ್ ಎನ್ನುವುದು ಭವಿಷ್ಯದ ಭಾಷೆ. ಅದರಲ್ಲಿ ಆತ ಇಂದುಳಿಯಬಾರದು ಎನ್ನುವ ಕಾರಣಕ್ಕೆ ಚೈನೀಸ್ ಕಲಿಸುತ್ತಿದ್ದೇನೆ ಎನ್ನುತ್ತಾರೆ. ಅದರೊಂದಿಗೆ ಮಗನಿಗೆ ಆರ್ಗನ್ ನುಡಿಸುವುದನ್ನೂ ಹೇಳಿಕೊಡುತ್ತಿದ್ದಾರೆ.

Join Nadunudi News WhatsApp Group