ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆದ ಈತ ನಿಜಕ್ಕೂ ಯಾರು ಗೊತ್ತಾ, ಗ್ರೇಟ್ ನೋಡಿ.

ದೇಶದಲ್ಲಿ ಕರೋನ ಮಹಾಮಾರಿ ಯಾವ ರೀತಿಯಲ್ಲಿ ಎಷ್ಟು ವೇಗವಾಗಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ದೇಶದಲ್ಲಿ ಕರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನರು ಬಹಳ ಭಯಭೀತರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಕೆಲವು ರಾಜ್ಯಗಳನ್ನ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು ಜನರು ಕೂಡ ಸರ್ಕಾರದ ಮಾರ್ಗಸೂಚಿಯನ್ನ ಪಾಲನೆ ಮಾಡುತ್ತಿರುವುದು ಬಹಳ ಬೇಸರದ ಸಂಗತಿ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವೈದ್ಯರು ಜನರ ರಕ್ಷಣೆ ಮಾಡಲು ಹರಸಾಹಸ ಮಾಡುತ್ತಿದ್ದು ವೈದ್ಯರು ಕೂಡ ವಿಫಲರಾಗುತ್ತಿದ್ದಾರೆ ಎಂದು ಹೇಳಬಹುದು.

ಇನ್ನು ವೈದ್ಯರು ಹಗಲು ರಾತ್ರಿ ಅನ್ನದೆ ಆಸ್ಪತ್ರೆಯಲ್ಲಿ ಕೆಲಸವನ್ನ ಮಾಡುತ್ತಿದ್ದು ಜನರು ಪ್ರಾಣವನ್ನ ಕಾಪಾಡುವಲ್ಲಿ ಕಾರ್ಯನಿರತರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕಳೆದ ಒಂದು ದಿನದಿಂದ ಪಿಪಿಇ ಕಿಟ್ ಧರಿಸಿದ ವೈದ್ಯರೊಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದು ಈ ಫೋಟೋಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಪಿಪಿಇ ಕಿಟ್ ಧರಿಸಿದ ಈ ವೈದ್ಯ ಯಾರು ಮತ್ತು ಈತ ಅಷ್ಟು ವೈರಲ್ ಆಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Doctor Sohil

ಹೌದು ಜನರಿಗೆ ಎಷ್ಟೇ ಹೇಳಿದರು ಕೂಡ ಅವರು ಮಾಸ್ಕ್ ಧರಿಸಲು ಹಿಂದೆಮುಂದೆ ನೋಡುತ್ತಿದ್ದಾರೆ ಮತ್ತು ಅದೆಷ್ಟೋ ಜನರು ಮಾಸ್ಕ್ ಧರಿಸದೇ ಅಡ್ಡಾಡುತ್ತಿದ್ದರೆ ಎಂದು ಹೇಳಬಹುದು.ಜನರು ಮಾಸ್ಕ್ ಧರಿಸವು ನಿರ್ಲಕ್ಷ್ಯ ಮಾಡುತ್ತಿರುವ ಈ ಸಮಯದಲ್ಲಿ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಎಲ್ಲವನ್ನು ಧರಿಸಿ ಜನರ ಪ್ರಾಣ ಉಳಿಸಲು ಹಗಲಿರುಳು ದುಡಿಯುತ್ತಿರುವ ಕೊರೊನಾ ವಾರಿಯರ್ಸ್ ಅನ್ನು ನೆನಪಿಸುವ ಒಂದು ಘಟನೆ ನಡೆದಿದೆ. ಸುಮಾರು 15 ಘಂಟೆಗಳ ಕಾಲ ಪಿಪಿಇ ಕಿಟ್ ಧರಿಸಿ ಮೈಯೆಲ್ಲಾ ಬೇವರಿನಿಂದ ತೇವವಾಗಿರುವ ವೈದ್ಯರೊಬ್ಬರ ಘೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಫೋಟೋದಲ್ಲಿ ಕಾಣಿಸುತ್ತಿರುವ ಈ ವೈದ್ಯರ ಹೆಸರು ಸೋಹಿಲ್, ವೈದ್ಯರು ಹೇಗೆ ಪ್ರತಿದಿನ ರಿಸ್ಕ್ ನಲ್ಲೆ ಕೆಲಸ ಮಾಡುತ್ತಿದ್ದಾರೆ ಎಂದು ಜನರಿಗೆ ಗೊತ್ತಾಗಲಿ ಅನ್ನುವ ಕಾರಣ ಎರಡು ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಸೋಹಿಲ್. ಎಲ್ಲಾ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ಪರವಾಗಿ ನಾನು ಹೇಳುತ್ತಿದ್ದೇನೆ. ನಾವು ನಮ್ಮ ಕುಟುಂಬಗಳಿಂದ ದೂರವಿದ್ದು ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ. ಕೆಲವೊಮ್ಮೆ ಕೊರೊನಾ ರೋಗಿಗಳಿಂದ ಒಂದು ಅಡಿ ಅಂತರದಲ್ಲೇ ಇದ್ದರೆ ಇನ್ನೂ ಕೆಲವೊಮ್ಮೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಂದ ಒಂದಿಂಚು ದೂರ ನಿಂರತುಕೊಂಡೇ ಕಾರ್ಯನಿರ್ವಹಿಸುತ್ತೇವೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ನಾನು ಮನವಿ ಮಾಡುತ್ತೇನೆ, ಸುರಕ್ಷಿತವಾಗಿರಿ ಎಂದು ವೈದ್ಯ ಸೋಹಿಲ್ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Doctor Sohil

Join Nadunudi News WhatsApp Group