PM Awas Yojana: ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ಮುಂದೆ ಈ ದಾಖಲೆ ಕಡ್ಡಾಯ, ಕೇಂದ್ರದ ಆದೇಶ

ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ಮುಂದೆ ಈ ದಾಖಲೆ ಕಡ್ಡಾಯ

Document Required For PM Awas Yojana: ಬಡ ಜನರ ಸ್ವಂತ ಮನೆ ನಿರ್ಮಾಣದ ಕನಸಿಗೆ PM Awas ಯೋಜನೆಯು ಸಹಕಾರಿಯಾಗಿದೆ. ಸ್ವಂತ ಮನೆಯನ್ನು ನಿರ್ಮಿಸಿಕೊಡುವ ಸಲುವಾಗಿ 2015 ರಲ್ಲಿ PM Awas ಯೋಜನೆಯನ್ನು ಪ್ರಾರಂಭಿಸಿದೆ. ಈಗಾಗಲೇ ದೇಶದಲ್ಲಿ ಸಾಕಷ್ಟು ಜನರು PM ಆವಾಸ್ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

ಈ ಯೋಜನೆಯಡಿ ಈಗಾಗಲೇ ಫಲಾನುಭವಿಗಳು ತಮಗಾಗಿ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇನ್ನು ಇತ್ತೀಚಿಗೆ ಕೇಂದ್ರ ಸರ್ಕಾರ Awas ಯೋಜನೆಯ ಅರ್ಹತೆಗಳನ್ನು ಬದಲಿಸಿದೆ. ನೀವು Awas ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಳ್ಳಲು ಯೋಜನೆ ಹಾಕಿಕೊಂಡಿದ್ದರೆ, ಅರ್ಜಿ ಸಲ್ಲಿಸುವುದು ಹೇಗೆ…? ಬೇಕಾದ ದಾಖಲೆಗಳು ಏನು…? ಎಷ್ಟು ಹಣ ಸಿಗುತ್ತೆ…? ಅನ್ನುವ ಮಾಹಿತಿ ಇಲ್ಲಿದೆ.

PM Awas Yojana 2024
Image Credit: Zeebiz

ದೇಶದ ಜನರಿಗೆ ಉಚಿತ ಮನೆ ನಿರ್ಮಾಣಕ್ಕೆ ಮುಂದಾದ ಮೋದಿ
ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಯೋಜನೆಯಲ್ಲಿ ಎರಡು ವಿಧಗಳಿವೆ, ಅದರ ಅಡಿಯಲ್ಲಿ ಜನರಿಗೆ ಅದರ ಪ್ರಯೋಜನಗಳನ್ನು ನೀಡಲಾಗುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (PMAY-G) ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ (PMAY-U) ವಿಧಗಳಾಗಿವೆ.

ವಾರ್ಷಿಕ ಆದಾಯ ರೂ. 18 ಲಕ್ಷದವರೆಗೆ ಇರುವ ಯಾವುದೇ ವ್ಯಕ್ತಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಹಾಗೆಯೆ ಈ ಆದಾಯವನ್ನು 3 ವರ್ಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು EWS ಅಂದರೆ ಆರ್ಥಿಕವಾಗಿ ದುರ್ಬಲ, LIG ಅಂದರೆ ಕಡಿಮೆ ಆದಾಯದ ಗುಂಪು ಮತ್ತು ಮೂರನೆಯದು MIG ಅಂದರೆ ಮಧ್ಯಮ ಆದಾಯದ ಗುಂಪು. EWS ಗೆ ವಾರ್ಷಿಕ ಆದಾಯ ಮಿತಿಯು 3 ಲಕ್ಷ ರೂ. ಎಲ್ ಐಜಿ ಗೆ 3ರಿಂದ 6 ಲಕ್ಷ ರೂ., ಎಂಐಜಿ ಗೆ 6ರಿಂದ 18 ಲಕ್ಷ ರೂ. ಆಗಿದೆ. ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಅಗತ್ಯ…? ಎನ್ನುವ  ಬಗ್ಗೆ ಮಾಹಿತಿ ತಿಳಿಯೋಣ.

PM Awas Yojana Latest News
Image Credit: Paytm

ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ಮುಂದೆ ಈ ದಾಖಲೆ ಕಡ್ಡಾಯ
•ಆಧಾರ್ ಕಾರ್ಡ್

Join Nadunudi News WhatsApp Group

•ಬ್ಯಾಂಕ್ ಖಾತೆ

•ವಿಳಾಸ ಪುರಾವೆ

•ಗುರುತಿನ ಚೀಟಿ

•ಮೊಬೈಲ್ ನಂಬರ

•ಬಿಪಿಎಲ್ ಕಾರ್ಡ್

•ಪಾಸ್ಪೋರ್ಟ್ ಗಾತ್ರದ ಫೋಟೋ

•ಆದಾಯ ಪ್ರಮಾಣಪತ್ರ

PM Awas Yojana Eligibility
Image Credit: Original Source

PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು….?
•PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವವರು ಭಾರತೀಯರಾಗಿರಬೇಕು.

•ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ವಸತಿ ಯೋಜನೆಯ ಪ್ರಯೋಜನವನ್ನು ಪಡೆದಿರಬಾರದು.

•ಈ ಯೋಜನೆಯ ಫಲಾನುಭವಿಗಳು ಈಗಾಗಲೇ ಸ್ವಂತ ಮನೆ ಹೊಂದಿರಬಾರದು.

•EWS ಅಡಿಯಲ್ಲಿ ಫಲಾನುಭವಿಯ ವಾರ್ಷಿಕ ಆದಾಯವು ರೂ. 6 ಲಕ್ಷ ಮೀರಬಾರದು.

•LIG ಅಡಿಯಲ್ಲಿ ಫಲಾನುಭವಿಯ ವಾರ್ಷಿಕ ಆದಾಯವು ರೂ.6 ಲಕ್ಷಕ್ಕಿಂತ ಹೆಚ್ಚು ಮತ್ತು ರೂ.12 ಲಕ್ಷಕ್ಕಿಂತ ಕಡಿಮೆಯಿರಬೇಕು.

•MIG-I ಫಲಾನುಭವಿಯ ವಾರ್ಷಿಕ ಆದಾಯವು ರೂ.12 ಲಕ್ಷ ಅಥವಾ ರೂ.18 ಲಕ್ಷಕ್ಕಿಂತ ಕಡಿಮೆಯಿರಬೇಕು.

•MIG-II ಗೆ ಫಲಾನುಭವಿಯ ವಾರ್ಷಿಕ ಆದಾಯ ರೂ. 18 ಲಕ್ಷ ಮೀರಬಾರದು.

•ಇನ್ನು ಅರ್ಹರು https://pmaymis.gov.in/ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Document Required For PM Awas Yojana
Image Credit: Navimumbaihouses

Join Nadunudi News WhatsApp Group