ಕೊರೋನಾ ಮಹಾಮಾರಿಗೆ ಕನ್ನಡದ ಖ್ಯಾತ ನಟ ಮತ್ತು ನಿರ್ಮಾಪಕ ಇನ್ನಿಲ್ಲ, ಕಣ್ಣೀರಲ್ಲಿ ಚಿತ್ರರಂಗ.

ಯಾಕೋ ಕನ್ನಡ ಮತ್ತು ಇತರೆ ಚಿತ್ರರಂಗದ ಸಮಯ ಸ್ವಲ್ಪಾನು ಸರಿ ಇಲ್ಲ ಎಂದು ಕಾಣುತ್ತದೆ. ಹೌದು ಕಳೆದ ವರ್ಷ ಅದೆಷ್ಟೋ ಯುವನಟರು ನತ್ತು ನಟಿಯರು ಇಹಲೋಕವನ್ನ ತ್ಯಜಿಸುವುದರ ಮೂಲಕ ಅಭಿಮಾನಿಗಳಿಗೆ ಬಹಳ ನೋವನ್ನ ಉಂಟುಮಾಡಿದ್ದರು. ಒಂದುಕಡೆ ಕರೋನ ಮಹಾಮಾರಿಯ ಆರ್ಭಟ ಇನ್ನಷ್ಟು ಜಾಸ್ತಿ ಆಗಿದ್ದು ಜನರು ಬಹಳ ಭಯದಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಜನರು ಸರ್ಕಾರದ ಕೆಲವು ಮಾರ್ಗಸೂಚಿಯನ್ನ ಗಮನದಲ್ಲಿ ಇರಿಸಿಕೊಳ್ಳದೆ ತಮಗೆ ಇಷ್ಟಬಂದ ಹಾಗೆ ಜೀವನ ಮಾಡುತ್ತಿರುವುದು ದೇಶದಲ್ಲಿ ಕರೋನ ಮಹಾಮಾರಿ ಹರಡಲು ಉಖ್ಯವಾದ ಕಾರಣ ಆಗಿದೆ ಎಂದು ಹೇಳಬಹುದು.

ಇನ್ನು ಕರೋನ ಮಹಾಮಾರಿಯ ಅದೆಷ್ಟೋ ಕಲಾವಿದರು ಮತ್ತು ನಟರು ಇಹಲೋಕವನ್ನ ತ್ಯಜಿಸಿದ್ದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಮತ್ತು ಈಗ ಅದೇ ಸಾಲಿಗೆ ಕನ್ನಡದ ಮತ್ತೊಬ್ಬ ಯುವನಟ ಸೇರಿಕೊಂಡಿದ್ದು ಇವರ ಸಾವು ಚಿತ್ರಕ್ಕೆ ತುಂಬಲಾರದ ನಷ್ಟವನ್ನ ಉಂಟುಮಾಡಿದೆ ಎಂದು ಹೇಳಬಹುದು. ಹಾಗಾದರೆ ನಟ ಯಾರು ಮತ್ತು ಅವರು ಯಾವ ಯಾವ ಚಿತ್ರಗಳಲ್ಲಿ ನಟನೆಯನ್ನ ಮಾಡಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

DS Manjunath no more

ಹೌದು ಕನ್ನಡ ಚಿತ್ರಗಳಲ್ಲಿ ಬಹಳ ಹೆಸರನ್ನ ಮಾಡಿದ್ದ ನಟ ಮತ್ತು ನಿರ್ಮಾಪಕ ಕರೋನ ಮಹಾಮಾರಿಗೆ ಬಲಿಯಾಗಿದ್ದು ಇದು ಚಿತ್ರರಂಗದ ಶಾಕ್ ಗೆ ಕಾರಣವಾಗಿದೆ. ಹೌದು ಸ್ಯಾಂಡಲ್ ವುಡ್ ಚಿತ್ರರಂಗದ ಹೆಸರಾಂತ ನಟ ಮತ್ತು ನಿರ್ಮಾಪಕ ಅನಿಸಿಕೊಂಡಿದ್ದ ಡಾ. ಡಿ.ಎಸ್‌. ಮಂಜುನಾಥ್ ಕೊರೋನಾಗೆ ಬಲಿಯಾಗಿದ್ದಾರೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾಗೆ ನಿರ್ಮಾಣ ಮಾಡುವ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದ ಮಂಜುನಾಥ್ ಅವರು ತಮ್ಮ ಮೊದಲ ಸಿನಿಮಾದ ಯಶಸ್ಸಿನ ನಂತರ ಬಾರಿ ಸುದ್ದಿಯಾಗಿದ್ದರು ಎಂದು ಹೇಳಬಹುದು. ಇನ್ನು ಮಂಜುನಾಥ್ ಅವರು ಮೊದಲ ಸಿನಿಮಾ ಸಕ್ಸಸ್ ಆದನಂತರ ಎರಡನೆಯ ಸಿನಿಮಾ ಆದ ಸಂಯುಕ್ತ 2 ಗೆ ಬಂಡವಾಳ ಹೂಡಿದ್ದರು.

ಇನ್ನು ತಾನು ಚಿತ್ರಗಳಲ್ಲಿ ಬಣ್ಣವನ್ನ ಹಚ್ಚಬೇಕು ಅನ್ನುವ ಆಸೆಯನ್ನ ಹೊಂದಿದ್ದ ಮಂಜುನಾಥ್ ಅವರು ‘present ಪ್ರಪಂಚ 0%ಲವ್ ಸಿನಿಮಾವನ್ನು ನಿರ್ಮಿಸಿ, ನಟಿಸುತ್ತಿದ್ದರು, ಆದರೆ ಕರೋನ ಮಹಾಮಾರಿಯ ಕಾರಣದಿಂದ ಈ ಸಿನಿಮಾದ ಕೆಲಸಗಳನ್ನ ಮುಂದೂಡಲಾಗಿತ್ತು, ಆದರೆ ತಮ್ಮ ಸಿನಿಮಾ ಪೂರ್ಣ ಆಗುವುದರ ಒಳಗೆ ಮಂಜುನಾಥ್ ಅವರು ನಿಧನರಾಗಿದ್ದಾರೆ. 41 ವರ್ಷ ವಯಸ್ಸಿನ ಮಂಜುನಾಥ್ ಅವರಿಗೆ ಸಿನಿಮಾ ರಂಗದಲ್ಲಿ ಏನಾದರು ಸಾಧನೆ ಮಾಡಬೇಕು ಬಯಕೆ ಇತ್ತು ಮತ್ತು ಹೀಗಾಗಿ ವಿಭಿನ್ನ ಸಿನಿಮಾಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು, ಆದರೆ ವಿಧಿಯ ಆಟಕ್ಕೆ ಮಂಜುನಾಥ್ ಅವರು ಬಲಿಯಾಗಿದ್ದಾರೆ ಎಂದು ಹೇಳಬಹುದು. ಸ್ನೇಹಿತರೆ ನಟ ಮತ್ತು ನಿರ್ಮಾಪಕ ಮಂಜುನಾಥ್ ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

DS Manjunath no more

Join Nadunudi News WhatsApp Group