ಪತ್ತೆಯಾಯಿತು ಚಿನ್ನದ ಗುಡ್ಡ, ಚಿನ್ನವನ್ನ ಬುಟ್ಟಿಯಲ್ಲಿ ತುಂಬಿದ ಜನರು, ಈ ಗುಡ್ಡ ಯಾವುದು ಗೊತ್ತಾ.

ಚಿನ್ನ ಅಂದರೆ ಯಾರಿಗೆ ತಾನೇ ಇಷ್ಟವಲ್ಲ ಹೇಳಿ. ಹೌದು ಚಿನ್ನವನ್ನ ಬಹುತೇಕ ಎಲ್ಲರೂ ಜನರು ಬಹಳ ಇಷ್ಟಪಡುತ್ತಾರೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ಚಿನ್ನದ ಬೆಲೆ ಎಷ್ಟಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಹೌದು ಚಿನ್ನದ ಬೆಲೆ ಗಗನಕ್ಕೆ ಏರಿದ್ದು ಚಿನ್ನವನ್ನ ಕೊಂಡುಕೊಳ್ಳುವವರ ಸಂಖ್ಯೆ ಕೂಡ ಕಡಿಮೆ ಆಗಿದೆ ಎಂದು ಹೇಳಬಹುದು. ಇನ್ನು ಈ ಭೂಮಿಯ ಮೇಲೆ ಅನೇಕ ಚಿನ್ನದ ನಿಕ್ಷೇಪಗಳು ಇದ್ದು ಕೆಲವು ನಿಕ್ಷೇಪಗಳಿಗೆ ಜನರ ನಿರ್ಬಂಧ ಕೂಡ ಮಾಡಲಾಗಿದೆ. ಇನ್ನು ಈಗ ವಿಷಯಕ್ಕೆ ಬರುವುದಾದರೆ ನಾವು ಹೇಳುವ ಈ ಹಳ್ಳಿಯಲ್ಲಿ ಚಿನ್ನದ ಗುಡ್ಡ ಪತ್ತೆಯಾಗಿದ್ದು ಜನರು ಚಿನ್ನವನ್ನ ಬಾಚಿಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ.

ಹಾಗಾದರೆ ಈ ಹಳ್ಳಿ ಯಾವುದು, ಎಲ್ಲಿದೆ ಮತ್ತು ಇಲ್ಲಿ ಚಿನ್ನ ಪತ್ತೆಯಾಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಆಫ್ರಿಕಾದ ಕಾಂಗೋ ದೇಶದಲ್ಲಿ ಚಿನ್ನದ ಗುಡ್ಡ ಪತ್ತೆಯಾಗಿದೆ. ಕಿವು ಪ್ರಾಂತ್ಯದ ಕಿನ್ಸ್ ಹಾಸ ಸಮೀಪದಲ್ಲಿ ಲುಹಿಹಿ ಎಂಬ ಗುಡ್ಡವನ್ನು ಚಿನ್ನದ ಗುಡ್ಡ ಎಂದೇ ಕರೆಯಲಾಗುತ್ತದೆ. ಇನ್ನು ಈ ಹಳ್ಳಿಯ ಈ ಗುಡ್ಡದಲ್ಲಿ ಅಗೆದಷ್ಟೂ ಚಿನ್ನ ಸಿಗುತ್ತಿದ್ದು ಜನರು ಚಿನ್ನವನ್ನ ಸಂಗ್ರಹ ಮಾಡಲು ಮುಗಿಬಿದ್ದಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಹೇಳಬಹುದು.

gold plant in luhihi

ಮಣ್ಣಿನಲ್ಲಿ ಚಿನ್ನ ಪತ್ತೆಯಾಗಲಿದ್ದು ಜನರು ಮಣ್ಣುಗಳನ್ನ ಚೀಲಗಳಲ್ಲಿ ತುಂಬಿಕೊಂಡು ಮನೆಗೆ ಹೋಗು ಮಣ್ಣು ಚಿನ್ನವನ್ನ ಬೇರ್ಪಡಿಸುತ್ತಿರುವುದು ಕಂಡುಬಂದಿದೆ. ಈ ಗುಡ್ಡದಲ್ಲಿ ಅಗೆದಷ್ಟು ಚಿನ್ನ ಸಿಗುತ್ತಿದ್ದು ಹೆಚ್ಚಿನ ಸಂಖ್ಯೆಯ ಜನ ಸೇರಿಕೊಂಡು ಗುಡ್ಡದ ಮಣ್ಣನ್ನು ಬುಟ್ಟಿಯಲ್ಲಿ ಸಂಗ್ರಹಿಸುತ್ತಿದ್ದಾರೆ ಮತ್ತು ಅದನ್ನು ತೊಳೆದು ಚಿನ್ನದ ತುಣುಕುಗಳನ್ನು ಪಡೆಯುತ್ತಿದ್ದಾರೆ. ಇನ್ನು ಕೆಲವು ಜನರು ಚೀಲಗಟ್ಟಲೆ ಮಣ್ಣುಗಳನ್ನ ಮನೆಗೆ ತೆಗೆದುಕೊಂಡು ಹೋಗಿದ್ದು ಬಹಳ ಚಿನ್ನವನ್ನ ಸಂಗ್ರಹ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಮಣ್ಣಿನಲ್ಲಿ ಚಿನ್ನ ಪ್ರತ್ಯಕ್ಷ ಆದ ವಿಷಯ ಸದ್ಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಸದ್ಯ ಅಧಿಕಾರಿಗಳು ಈ ಗುಡ್ಡವನ್ನ ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದ್ದು ಲುಹಿಹಿ ಗುಡ್ಡದಲ್ಲಿ ಗಣಿಗಾರಿಕೆ ನಿರ್ಬಂಧಿಸಲಾಗಿದೆ. ಇನ್ನು ಅಧಿಕಾರಿಗಳು ಲುಹಿಹಿ ಗುಡ್ಡದಲ್ಲಿ ಗಣಿಗಾರಿಕೆ ನಿರ್ಬಂಧ ಮಾಡುವ ಮುನ್ನವೇ ಜನರು ಭಾರಿ ಪ್ರಮಾಣದಲ್ಲಿ ಚಿನ್ನವನ್ನ ಶೇಖರಣೆ ಮಾಡಿದ್ದಾರೆ ಎಂದು ವರಧಿಗಳಿಂದ ತಿಳಿದು ಬಂದಿದೆ. ನಿಜ ಹೇಳಬೇಕು ಅಂದರೆ ಇದು ಆ ಹಳ್ಳಿಯ ಜನರ ಅದೃಷ್ಟ ಎಂದು ಹೇಳಬಹುದು. ಚಿನ್ನದ ಬೆಲೆ ಗಗನಕ್ಕೆ ಏರಿರುವ ಈ ಸಮಯದಲ್ಲಿ ಈ ಹಳ್ಳಿಯ ಜನರಿಗೆ ಚಿನ್ನ ಮಣ್ಣಿನಲ್ಲಿ ಸಿಕ್ಕಿದ್ದು ಅವರ ಅದೃಷ್ಟವೇ ಬದಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ನಿಮಗೂ ಕೂಡ ಹೀಗೆ ಚಿನ್ನ ಸಿಕ್ಕಿದ್ದರೆ ಏನು ಮಾಡುತ್ತೀರಿ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

gold plant in luhihi

Join Nadunudi News WhatsApp Group