ನೀರಿಗಾಗಿ ಈ ಹುಡುಗಿ ಮಾಡಿದ ಐಡಿಯಾ ಈಗ ಪ್ರಪಂಚ ಫುಲ್ ವೈರಲ್, ಶಾಕ್ ಆಗುತ್ತದೆ ನೋಡಿ.

ಸ್ನೇಹಿತರೆ ಈಗಿನ ಕಾಲದಲ್ಲಿ ಕೆಲವು ಪ್ರದೇಶದ ಜನರು ನೀರಿಗಾಗಿ ಎಷ್ಟು ಸಾಹಸವನ್ನ ಪಡುತ್ತಾರೆ ಅನ್ನುವುದು ನಿಮಗೆಲ್ಲ ತಿಳಿದೇ ಇದೆ. ಹೌದು ಕೆಲವು ಪ್ರದೇಶದ ಜನರಿಗೆ ಕುಡಿಯಲು ಕೂಡ ನೀರು ಸರಿಯಾದ ಪ್ರಮಾಣದಲ್ಲಿ ಸಿಗದೇ ಇರುವ ಕಾರಣ ಬೇಸಿಗೆಯ ಸಮಯದಲ್ಲಿ ಅವರ ಜೀವನ ಬಹಳ ಕಷ್ಟವಾಗಿ ಹೋಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಭೂಮಿಯಲ್ಲಿ ಅಂತರ್ಜಲ ಪ್ರಮಾಣ ಕಡಿಮೆ ಆಗುತ್ತಿರುವ ಕಾರಣ ನೀರು ಕೂಡ ಈಗ ಸರಿಯಾಗಿ ಭೂಮಿಯಲ್ಲಿ ಸಿಗುತ್ತಿಲ್ಲ ಅನ್ನುವುದು ಬಹಳ ಬೇಸರದ ಸಂಗತಿ ಆಗಿದೆ. ಇನ್ನು ಸ್ನೇಹಿತರೆ ಮಧ್ಯಪ್ರದೇಶ ರಾಜ್ಯದಲ್ಲಿ ಒಂದು ಹಳ್ಳಿ ಇದ್ದು ಆ ಹಳ್ಳಿಯ ಹೆಸರು ಆಕ್ರುತ ಗ್ರಾಮ, ಇನ್ನು ಈ ಹಳ್ಳಿಯಲ್ಲಿ ಸುಮಾರು 1400 ಜನರು ವಾಸವನ್ನ ಮಾಡುತ್ತಿದ್ದಾರೆ.

ಇನ್ನು ಈ ಊರಿನ ಜನರಿಗೆ ನೀರಿನ ಅನುಕೂಲಕ್ಕಾಗಿ ಕೆಲವು ಭಾವಿ ಮತ್ತು ಒಂದು ದೊಡ್ಡದಾದ ಕೆರೆ ಕೂಡ ಇದೆ. ಮಳೆಗಾಲದ ಸಮಯದಲ್ಲಿ ಈ ಗ್ರಾಮದವರಿಗೆ ಕುಡಿಯಲು ಮತ್ತು ವ್ಯವಸಾಹಯವನ್ನ ಮಾಡಲು ಯಾವುದೇ ರೀತಿಯ ನೀರಿನ ಸಮಸ್ಯೆ ಇಲ್ಲ, ಆದರೆ ಬೇಸಿಗೆ ಸಮಯದಲ್ಲಿ ಈ ಊರಿನಲ್ಲಿ ನೀರಿಗೆ ಆಹಾಕಾರ ಉಂಟಾಗುತ್ತದೆ. ಹೌದು ಬೇಸಿಗೆಯ ಸಮಯದಲ್ಲಿ ಈ ಊರಿನಲ್ಲಿ ಎಲ್ಲಾ ಭಾವಿಗಳು ಮತ್ತು ಕೆರೆ ಕೂಡ ಭತ್ತಿ ಹೋಗುತ್ತದೆ. ಇನ್ನು ಬೇಸಿಗೆಯ ಸಮಯದಲ್ಲಿ ಈ ಊರಿನ ಜನರಿಗೆ ಕುಡಿಯಲು ಮತ್ತು ವ್ಯವಸಾಯವನ್ನ ಮಾಡಲು ನೀರು ಸಿಗುವುದಿಲ್ಲ.

Great babitha

ಇನ್ನು ಈ ಗ್ರಾಮದವರ ಒಂದು ಆಶಯ ಏನು ಅಂದರೆ, ಈ ಊರಿನ ಹಿಂಭಾಗದಲ್ಲಿ ಒಂದು ಬೆಟ್ಟ ಇದ್ದು ಆ ಬೆಟ್ಟದಿಂದ ವರ್ಷಪೂರ್ತಿ ನೀರು ಬರುತ್ತದೆ, ಆದರೆ ಬರುವ ನೀರು ಬೆಟ್ಟದ ಹಿಂಭಾಗದಲ್ಲಿ ಇರುವ ನದಿಗೆ ಸೇರುತ್ತದೆ, ಒಂದೇವೇಳೆ ಆ ನೀರು ಹಳ್ಳಿಯ ಕೆರೆಗೆ ಹಳ್ಳಿಯ ಜನರಿಗೆ ವರ್ಷಪೂರ್ತಿ ನೀರು ಸಿಗುತ್ತದೆ. ಆ ಬೆಟ್ಟದಲ್ಲಿ ಹರಿಯುವ ನೀರನ್ನ ಊರಿಗೆ ತರುವುದು ಬೆಟ್ಟದಷ್ಟು ಕಷ್ಟ ಆಗಿತ್ತು ಮತ್ತು ಅದಕ್ಕೆ ಕಾರಣ ಆ ಬೆಟ್ಟದ ಮದ್ಯೆ ಇನ್ನೊಂದು ಬೆಟ್ಟ ಇರುವುದು ಆಗಿದೆ. ಮದ್ಯದಲ್ಲಿ ಇರುವ ಬೆಟ್ಟವನ್ನ ಕಡಿದು ಹಳ್ಳಿಗೆ ನೀರು ಬರುವಂತೆ ಮಾಡುವುದು ಹಳ್ಳಿ ಜನರ ಅದೆಷ್ಟೋ ವರ್ಷಗಳ ಕನಸು ಆಗಿದೆ, ಆದರೆ ಬೆಟ್ಟವನ್ನ ಕಡಿಯಲು ಅರಣ್ಯ ಇಲಾಖೆ ಅವಕಾಶ ಕೊಡದ ಕಾರಣ ಎಲ್ಲರೂ ಸುಮ್ಮನಾಗಿದ್ದಾರೆ.

ನೀರಿಗಾಗಿ ಹಲವು ವರ್ಷಗಳಿಂದ ಕಷ್ಟ ಪಡುತ್ತಿದ್ದ ಹಳ್ಳಿಯ ಒಂದು ಕುಟುಂಬದ 19 ವರ್ಷದ ಬಬಿತಾ ಅನ್ನುವ ಯುವತಿ ಕೊನೆಗೂ ಒಂದು ದೈರ್ಯವನ್ನ ಮಾಡಿಬಿಟ್ಟಳು, ಪ್ರತಿದಿನ ಅರಣ್ಯ ಇಲಾಖೆಯ ಸುತ್ತ ತಿರುಗಾಡಿದ ಬಬಿತಾ ತಮ್ಮ ಗೋಳನ್ನ ಅವರಿಗೆ ಮನವರಿಕೆ ಮಾಡಿ ಕೊನೆಗೂ ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆದುಕೊಂಡಳು. ಇನ್ನು ಒಪ್ಪಿದ ಪಡೆದುಕೊಂಡ ನಂತರ ಹಳ್ಳಿಯ ಪುರುಷರು ಸುಮ್ಮನಾದವರು ಮತ್ತು ಯಾರು ಕೂಡ ಕೆಲಸವನ್ನ ಮಾಡಲು ಮುಂದೆ ಬರಲಿಲ್ಲ. ಆಗ ಏನು ಮಾಡಬೇಕು ಎಂದು ತೋಚದ ಬಬಿತಾ ತನ್ನ 12 ಜನ ಗೆಳತಿಯರ ತಂಡವನ್ನ ಕಟ್ಟಿಕೊಂಡು ಬೆಟ್ಟವನ್ನ ಕಡಿಯಲು ಆರಂಭ ಮಾಡಿದಳು, ಮಕ್ಕಳ ಈ ಕೆಲಸವನ್ನ ನೋಡಿ ಉಳಿದ ಮಹಿಳೆಯರು ಕೂಡ ಅವರ ಜೊತೆಗೆ ಸೇರಿಕೊಂಡರು.

Join Nadunudi News WhatsApp Group

Great babitha

ಮನೆಯ ಎಲ್ಲಾ ಕೆಲಸ ಮುಗಿದ ಮೇಲೆ ಬೆಟ್ಟ ಕಡಿಯುವ ಕೆಲಸ ಮಾಡುತ್ತಿದ್ದ ಮಹಿಳೆಯರು ಸುಮಾರು 18 ತಿಂಗಳುಗಳ ಕಾಲ ಬಹಳ ಕಷ್ಟಪಟ್ಟು ಅರ್ಧ ಕಿಲೋ ಮೀಟರ್ ಉದ್ದದ ಬೆಟ್ಟವನ್ನ ಕಡಿದು ಕೊನೆಗೂ ನೀರನ್ನ ಊರಿಗೆ ತರುವಲ್ಲಿ ಯಶಸ್ಸನ್ನ ಸಾಧಿಸಿದರು. ಸ್ನೇಹಿತರೆ ಇಡೀ ಬೆಟ್ಟವನ್ನ ಕಡಿಯಲು ನಿಂತ ಬಬಿತಾಳ ದೈರ್ಯವನ್ನ ನಾವು ಮೆಚ್ಚಲೇಬೇಕು, ಸ್ನೇಹಿತರೆ ಈ ಯುವತಿಯ ಈ ಸಾಹಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group