ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ, ಚಿನ್ನ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್, ತಿಂಗಳ ಅಂತ್ಯಕ್ಕೆ ಎಷ್ಟಾಗಲಿದೆ ಗೊತ್ತಾ.

ದೇಶದಲ್ಲಿ ಕಳೆದ ಒಂದು ತಿಂಗಳಿಂದ ಭರ್ಜರಿ ಸುದ್ದಿಯಾಗುತ್ತಿರುವ ಒಂದೇ ಒಂದು ವಿಷಯ ಏನು ಅಂದರೆ ಅದೂ ಚಿನ್ನದ ಬೆಲೆ ಎಂದು ಹೇಳಿದರೆ ತಪ್ಪಾಗಲ್ಲ. ದೇಶದಲ್ಲಿ ಕರೋನ ಮಹಾಮಾರಿ ಕಾಣಿಸಿಕೊಂಡ ಸಮಯದಲ್ಲಿ ಚಿನ್ನದ ಬೆಲೆ ಯಾವ ಮಟ್ಟದಲ್ಲಿ ಏರಿಕೆಯ ಹಾದಿಯನ್ನ ಹಿಡಿದಿತ್ತು ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿತ್ತು, ಆದರೆ ಈಗ ಅದೇ ರೀತಿಯಲ್ಲಿ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯನ್ನ ಕಾಣುತ್ತಿದ್ದು ಇದು ಜನರ ಖುಷಿಗೆ ಕಾರಣವಾಗಿದೆ ಎಂದು ಹೇಳಬಹುದು. ಚಿನ್ನದ ಬೆಲೆ ಇಳಿಕೆ ಬಡಜನರ ಸಂತಸಕ್ಕೆ ಕಾರಣವಾಗಿದ್ದು ಜನರು ಮದುವೆಗೆ ಚಿನ್ನವನ್ನ ಖರೀದಿ ಮಾಡಲು ಚಿನ್ನದ ಮಳಿಗೆಗಳಿಗೆ ಬಳಿ ಬರುತ್ತಿದ್ದಾರೆ ಎಂದು ಹೇಳಬಹುದು.

ಇನ್ನು ವಿಷಯಕ್ಕೆ ಬರುವುದಾದರೆ ಎಂದಿನಂತೆ ಚಿನ್ನದ ಇಂದು ಕೂಡ ಭಾರಿ ಇಳಿಕೆಯನ್ನ ಕಂಡಿದ್ದು ಇದು ಜನರ ಸಂತೋಷಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಮತ್ತು ತಜ್ಞರು ಅಭಿಪ್ರಾಯದ ಪ್ರಕಾರ ಮಾರ್ಚ್ ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆ ಎಷ್ಟಾಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿನ್ನದ ಬೆಲೆಯಲ್ಲಿ ಈ ಭಾರಿ ಇಳಿಕೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Great gold rate

ಹೌದು ಸ್ನೇಹಿತರೆ ವರ್ಷದ ಆರಂಭದಲ್ಲಿ ದೇಶದಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 4700 ರೂಪಾಯಿ ಆಗಿತ್ತು, ಆದರೆ ಫೆಬ್ರವರಿ ತಿಂಗಳ ಆರಂಭದಲ್ಲಿ ಇಳಿಕೆಯನ್ನ ಕಾಣಲು ಆರಂಭವಾದ ಚಿನ್ನದ ಬೆಲೆ ದಿನದಿಂದ ಸತತವಾಗಿ ಇಳಿಕೆಯನ್ನ ಕಾಣುತ್ತಿದ್ದು ಇಂದು ದೇಶದಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4145 ರೂಪಾಯಿ ಆಗಿದೆ. ಹೌದು ಒಂದು ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆ 565 ರೂಪಾಯಿ ಇಳಿಕೆಯನ್ನ ಕಂಡಿದ್ದು ತಜ್ಞರ ಅಭಿಪ್ರಾಯದ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಇಳಿಕೆ ಆಗುವ ಬಹುತೇಕ ಲಕ್ಷಣ ಇದೆ ಎಂದು ಹೇಳಲಾಗುತ್ತಿದೆ. ಹೌದು ದೇಶದಲ್ಲಿ ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4180 ಆಗಿತ್ತು, ಆದರೆ ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ 35 ರೂಪಾಯಿ ಇಳಿಕೆ ಆಗಿತ್ತು ಇಂದು ಮಾರುಕಟ್ಟೆಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 4145 ರೂಪಾಯಿ ಆಗಿದೆ.

ಇನ್ನು ದೇಶದಲ್ಲಿ ಇಂದು 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 41450 ರೂಪಾಯಿ ಆಗಿದೆ ಮತ್ತು ಒಂದು ತಿಂಗಳ ಅವಧಿಯಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 5650 ರೂಪಾಯಿ ಇಳಿಕೆ ಆಗಿದೆ ಎಂದು ಹೇಳಬಹುದು. ತಜ್ಞರ ಅಭಿಪ್ರಾಯದ ಪ್ರಕಾರ ಮಾರ್ಚ್ ತಿಂಗಳ ಅಂತ್ಯದಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4000 ರೂಪಾಯಿಗೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ದಿನದಿಂದ ದಿನಕ್ಕೆ ಇಳಿಕೆ ಆಗುತ್ತಿರುವ ಚಿನ್ನದ ಬೆಳೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Great gold rate

Join Nadunudi News WhatsApp Group