ಸೋಮವಾರದಿಂದ ಸಂಪೂರ್ಣ ಲಾಕ್ ಡೌನ್, ರಾಜ್ಯದಲ್ಲಿ ಏನಿರುತ್ತೆ ಏನಿರಲ್ಲ ಗೊತ್ತಾ, ಸರ್ಕಾರದ ಆದೇಶ.

ದೇಶದಲ್ಲಿ ಕರೋನ ಮಹಾಮಾರಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ದೇಶದಲ್ಲಿ ಕರೋನ ಮಹಾಮಾರಿಯ ಎರಡನೆಯ ಅಲೆ ಆರಂಭ ಆಗಿದ್ದು ಜನರು ಬಹಳ ಭಯಭೀತರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಕರೋನ ಸೋಂಕಿತರ ಸಂಖ್ಯೆ ದಿನದಿಂದ ಹೆಚ್ಚಳ ಆಗುತ್ತಿದ್ದು ಜನರು ಬಹಳ ಭಯದಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಜನರು ಕರೋನ ಮಾರ್ಗಸೂಚಿಯನ್ನ ಪಾಲನೆ ಮಾಡದಿರುವುದೆ ಕರೋನ ಮಹಾಮಾರಿ ಹೆಚ್ಚಳ ಆಗಲು ಪ್ರಮುಖವಾದ ಕಾರಣ ಆಗಿದೆ ಎಂದು ಹೇಳಬಹುದು. ಇನ್ನು ಸದ್ಯ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿ ಇದ್ದು ರಾಜ್ಯದಲ್ಲಿ ಭಿಗಿ ಭದ್ರತೆಯನ್ನ ಮಾಡಲಾಗಿದೆ ಎಂದು ಹೇಳಬಹುದು.

ಇನ್ನು ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪನವರು ಲಾಕ್ ಡೌನ್ ಅವಧಿಯನ್ನ ಹೆಚ್ಚಳ ಮಾಡಿದ್ದು ಸೋಮವಾರದಿಂದ ಮುಂದಿನ 14 ದಿನಗಳ ಬಹಳ ಭಿಗಿ ಲಾಕ್ ಡೌನ್ ಮಾಡಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಈ ಲಾಕ್ ಡೌನ್ ಹೇಗಿರಲಿದೆ, ಜನರಿಗೆ ಈ ಅವಧಿಯಲ್ಲಿ ಏನೇನು ಸಿಗಲಿದೆ ಮತ್ತು ಏನೇನು ಸಿಗಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ರಾಜ್ಯದಲ್ಲಿ 10 ನೇ ತಾರೀಕಿನಿಂದ 24 ನೇ ತಾರೀಕಿನ ತನಕ ಸಂಪೂರ್ಣ ಲಾಕ್ ಡೌನ್ ಜಾರಿಗೆ ತರಲಾಗಿದೆ ಎಂದು ರಾಜ್ಯದ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ತಿಳಿಸಿದ್ದಾರೆ. ಇನ್ನು ಈ ಲಾಕ್ ಡೌನ್ ಅವಧಿಯಲ್ಲಿ ತಳ್ಳುವ ಗಾಡಿಯಲ್ಲಿ ಮಾತ್ರ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದೆ ಮತ್ತು ಹಾಲಿನ ಅಂಗಡಿಯನ್ನ ತೆರೆಯಲು ಅವಕಾಶ ನೀಡಲಾಗಿದೆ.

Great lock down

ಕೈಗಾರಿಕೆ, ಹೋಟೆಲ್, ಪಬ್, ಬಾರ್ ಬಂದ್ ಮಾಡಲು ಆದೇಶವನ್ನ ಹೊರಡಿಸಲಿದೆ. ಇನ್ನು ಅಗತ್ಯ ವಸ್ತುಗಳನ್ನ ಖರೀದಿ ಮಾಡಲು ಬೆಳಿಗ್ಗೆ 6 ಘಂಟೆಯಿಂದ 10 ಘಂಟೆಯ ತನಕ ಅವಕಾಶವನ್ನ ನೀಡಲಾಗಿದೆ. ಇನ್ನು ಈಗಾಗಲೇ ತೆಗೆದುಕೊಂಡ ಲಾಕ್ ಡೌನ್ ನಿಂದ ಯಾವುದೇ ಫಲ ಸಿಗದ ಕಾರಣ ರಾಜ್ಯದಲ್ಲಿ ಮೇ 10 ನೇ ತಾರೀಕಿನಿಂದ 24 ನೇ ತಾರೀಕಿನ ತನಕ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಮುಖ್ಯ ಮಂತ್ರಿಗಳು ತಿಳಿಸಿದ್ದಾರೆ. ಇನ್ನು ಜನರು ಹಾಲು, ತರಕಾರಿ ಮತ್ತು ಇತರೆ ಅವಶ್ಯಕ ವಸ್ತುಗಳನ್ನ ಖರೀದಿ ಮಾಡಿ ತರಲು ಬೆಳಿಗ್ಗೆ 10 ಘಂಟೆಯ ತನಕ ಅವಕಾಶವನ್ನ ನೀಡಲಾಗಿದೆ. ಇನ್ನು ಹಾಲಿನ ಅಂಗಡಿಗಳು ಸಂಜೆ 6 ಗಂಟೆಯ ತನಕ ತೆರೆದಿಡಲು ಅವಕಾಶವನ್ನ ನೀಡಲಾಗಿದೆ.

ಇನ್ನು ಅನಾರೋಗ್ಯ ಕಾಣಿಸಿಕೊಂಡಲ್ಲಿ ಆಸ್ಪತ್ರೆಗೆ ಹೋಗಲು ಅವಕಾಶವನ್ನ ನೀಡಲಾಗಿದೆ. ಇನ್ನು ನಿಗದಿತ ಕಟ್ಟಡದ ಒಳಗೆ ಜನರನ್ನ ಬಳಸಿಕೊಂಡ ಕಟ್ಟಡ ಕೆಲಸ ಮಾಡಲು ಅವಕಾಶವನ್ನ ನೀಡಲಾಗಿದೆ. ಇನ್ನು ಯಾವುದೇ ಸಭೆ ಸಮಾರಂಭ ಈ ಸಮಯದಲ್ಲಿ ಮಾಡಲು ಅವಕಾಶ ಇರುವುದಿಲ್ಲ ಎಂದು ಹೇಳಬಹುದು. ನಾಳಿನ ಸೋಮವಾರದಿಂದ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಇರಲಿದ್ದು ಜನರು ಇದ್ದಕ್ಕೆ ಸಹಕರಿಸಬೇಕಾಗಿದೆ ಎಂದು ಹೇಳಬಹುದು. ಇನ್ನು ಸೋಮವಾರದಿಂದ ಜಿಲ್ಲೆಯಿಂದ ಜಿಲ್ಲೆಗೆ ಓಡಾಟವನ್ನ ನಿಷೇಧ ಮಾಡಲಾಗಿದೆ.

Join Nadunudi News WhatsApp Group

Great lock down

ಇನ್ನು ಅಗತ್ಯ ವಸ್ತುಗಳನ್ನ ಖರೀದಿ ಮಾಡಲು ವಾಹನದಲ್ಲಿ ಹೋಗುವ ಹಾಗಿಲ್ಲ ಮತ್ತು ನಡೆದುಕೊಂಡು ಹೋಗಬೇಕು. ಇನ್ನು ಶೇಕಡಾ 50 ರ ಹಾಜರಾತಿಯಲ್ಲಿ ಸರ್ಕಾರೀ ಕಚೇರಿಗಳು ಕಾರ್ಯವನ್ನ ನಿರ್ವಹಿಸಲಿದೆ. ಇನ್ನು ಈ ಸಮಯದಲ್ಲಿ ಯಾವುದೇ ಬಸ್ ಸಂಚಾರ ಇರುವುದಿಲ್ಲ ಮತ್ತು ಸಾರಿಗೆ ಸಂಚಾರ 14 ದಿನಗಳ ಕಾಲ ಬಂದ್ ಆಗಲಿದೆ. ಜಿಮ್, ಈಜುಕೊಳ, ಆಡಿಟೋರಿಯಂ, ಗ್ರಂಥಾಲಯ, ಸಿನಿಮಾ ಮಾಲ್ ಎಲ್ಲವು ಬಂದ್ ಇರಲಿದೆ. ಸ್ನೇಹಿತರೆ ಈ ಮಾಹಿತಿಯ ಪ್ರತಿಯೊಬ್ಬ ಸಾರ್ವಜನಿಕರಿಗೆ ತಲುಪಿಸಿ.

Join Nadunudi News WhatsApp Group