ರಾಬರ್ಟ್ ಹಾಡಿನ ಮೂಲಕ ವೈರಲ್ ಆಗಿರುವ ಮಂಗ್ಲಿ ನಿಜಕ್ಕೂ ಯಾರು ಗೊತ್ತಾ, ಈಕೆಯ ಬಗ್ಗೆ ನಿಮಗೆ ಗೊತ್ತಾ.

ಕೆಲವು ದಿನಗಳಿಂದ ನಿಮಗೆಲ್ಲ ತಿಳಿದಿರುವ ಹಾಗೆ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗುತ್ತಿರುವ ಒಂದೇ ಒಂದು ವಿಷಯ ಏನು ಅಂದರೆ ಅದು ರಾಬರ್ಟ್ ಚಿತ್ರದ ವಿಷಯ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಇದೆ ತಿಂಗಳಲ್ಲಿ ಬಿಡುಗಡೆಯಾಗಲಿದ್ದು ಜನರು ಚಿತ್ರವನ್ನ ನೋಡಲು ಬಹಳ ಕಾತುರದಿಂದ ಕಾದು ಕುಳಿತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ರಾಬರ್ಟ್ ಚಿತ್ರ ಬರಿ ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳಿನಲ್ಲಿ ಕೂಡ ಬಿಡುಗಡೆಯಾಗುತ್ತಿದ್ದು ಚಿತ್ರವನ್ನ ನೋಡಲು ಇಡೀ ದೇಶದ ಜನರು ಕಾದು ಕುಳಿತ್ತಿದ್ದಾರೆ ಎಂದು ಹೇಳಬಹುದು.

ಇನ್ನು ಚಿತ್ರದ ಹಾಡು, ಟೀಸರ್ ಗಳು ಯು ಟ್ಯೂಬ್ ನಲ್ಲಿ ಸಕತ್ ಸದ್ದು ಮಾಡಿದ್ದು ಸಕತ್ ಟ್ರೆಂಡಿಂಗ್ ಆಗಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಸದ್ಯ ಕೆಲವು ದಿನಗಳಿಂದ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್ ಚಿತ್ರದ ಹಾಡು ಸಕತ್ ಸದ್ದು ಮಾಡುತ್ತಿರುವುದು ನೀವೆಲ್ಲ ನೋಡಿದ್ದೀರಿ ಎಂದು ಹೇಳಬಹುದು. ಹೌದು ರಾಬರ್ಟ್ ಚಿತ್ರದ ಪ್ರಮೋಷನ್ ನಲ್ಲಿ ಖ್ಯಾತ ಗಾಯಕಿ ಮಂಗ್ಲಿ ತೆಲುಗಿನಲ್ಲಿ ರಾಬರ್ಟ್ ಚಿತ್ರದ ಹಾಡಿದ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡಿದೆ ಎಂದು ಹೇಳಬಹುದು.

Great mangli

ಸದ್ಯ ಈ ಹಾಯಕಿಯ ಹಾಡು ಸಕತ್ ವೈರಲ್ ಆಗುತ್ತಿದ್ದು ಜನರು ಈಕೆಯ ಕಂಠಕ್ಕೆ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಹಾಗಾದರೆ ಈ ಮಂಗ್ಲಿ ಯಾರು ಮತ್ತು ಈಕೆ ಇಷ್ಟು ವೈರಲ್ ಆಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್ ಚಿತ್ರ ಕಣ್ಣೇ ಅದಿರಿಂದೆ ಅನ್ನುವ ಹಾಡು ಕೇಳಿಬರುತ್ತಿದೆ ಎಂದು ಹೇಳಬಹುದು. ಇನ್ನು ಕನ್ನಡದಲ್ಲಿ ಈ ಹಾಡನ್ನ ಶ್ರೇಯ ಘೋಷಾಲ್ ಅವರು ಹಾಡಿದರೆ ತೆಲುಗಿನಲ್ಲಿ ಮಂಗ್ಲಿ ಅವರು ಹಾಡಿದ್ದಾರೆ, ಆದರೆ ಈ ಹಾಡು ಕನ್ನಡಕ್ಕಿಂತ ತೆಲುಗಿನಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು.

ಇನ್ನು ಕನ್ನಡಿಗರಿಗೆ ಮಂಗ್ಲಿ ಧ್ವನಿ ಸಿಕ್ಕಾಪಟ್ಟೆ ಇಷ್ಟವಾಗಿದೆ ಎಂದು ಹೇಳಬಹುದು. ಸ್ನೇಹಿತರೆ ಮಂಗ್ಲಿ ಅವರು ಆಂಧ್ರ ಪ್ರದೇಶದ ಜಾನಪದ ಗಾಯಕಿ, ಇನ್ನು ಮಂಗ್ಲಿ ಅವರು ಬರಿ ಹಾಡುಗಾರ್ತಿ ಅಲ್ಲದೆ ನಿರೂಪಕಿ, ಡ್ಯಾನ್ಸರ್, ರಿಪೋರ್ಟರ್ ಹಾಗು ನಟಿ ಕೂಡ ಹೌದು. ಇನ್ನು ಮಂಗ್ಲಿ ಅವರ ನಿಜವಾದ ಹೆಸರು ಸತ್ಯವತಿ ರಾತೋಡ್, ಇನ್ನು ಈ ಸತ್ಯವತಿ ಅವರು ಒಂದು ಸೀರಿಯಲ್ ನಲ್ಲಿ ಮಾಟಗಾತಿಯ ಪಾತ್ರವನ್ನ ಮಾಡಿದ್ದರು ಮತ್ತು ಅದರಲ್ಲಿ ಈಕೆಯ ಹೆಸರು ಮಾಟಗಾತಿ ಮಂಗ್ಲಿ ಅಂತ ಮತ್ತು ಆ ಧಾರಾವಾಹಿ ಸಕತ್ ಹಿಟ್ ಆದಕಾರಣ ಈಕೆಗೆ ಜನರು ಮಂಗ್ಲಿ ಅಂತ ಮರುನಾಮಕರಣ ಮಾಡಿದರು.

Join Nadunudi News WhatsApp Group

Great mangli

ಸ್ನೇಹಿತರೆ ಮಂಗ್ಲಿ ಅವರಿಗೆ ಈಗ 36 ವರ್ಷ, ಇನ್ನು ಮಂಗ್ಲಿ ಅವರು ಬೇರೆ ಬೇರೆ ಶೈಲಿಯ ಹಾಡುಗಳನ್ನ ಹಾಡುವುದರಲ್ಲಿ ಎತ್ತಿದ ಕೈ ಎಂದು ಹೇಳಬಹುದು. 2018 ರಿಂದ ಸಿನಿಮಾಗಳ ಹಾಡುಗಳನ್ನ ಹಾಡಲು ಶುರು ಮಾಡಿದರು ಮಂಗ್ಲಿ ಅವರು ಮತ್ತು ಈಕೆ ಹಾಡಿದ ಬಹುತೇಕ ಹಾಡುಗಳು ಸೂಪರ್ ಹಿಟ್ ಎಂದು ಹೇಳಬಹುದು. ಸ್ನೇಹಿತರೆ ಮಂಗ್ಲಿ ಅವರ ಹಾಡಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group