ಈ ಬಡ ವೃದ್ಧನ ಮನೆಯ ಒಂದು ತಿಂಗಳ ಕರೆಂಟ್ ಬಿಲ್ ಎಷ್ಟು ಗೊತ್ತಾ, ಇಡೀ ಪ್ರಪಂಚವೇ ಶಾಕ್ ಆಗಿದೆ ನೋಡಿ.

ಸಾಮಾನ್ಯವಾಗಿ ವಿದ್ಯುತ್ ಬಳಕೆ ಮಾಡುವ ಎಲ್ಲ ಮನೆಗಳಇಗೆ ಪ್ರತಿ ತಿಂಗಳು ಕರೆಂಟ್ ಬಿಲ್ ಬರುತ್ತದೆ. ನಾವು ಪ್ರತಿ ತಿಂಗಳು ಎಷ್ಟು ವಿದ್ಯುತ್ ಬಳಕೆ ಮಾಡಿರುತ್ತೇವೆ ಅದರ ಆಧಾರದ ಮೇಲೆ ಪ್ರತಿ ತಿಂಗಳು ನಮಗೆ ಕರೆಂಟ್ ಬಿಲ್ ಬರುತ್ತದೆ. ಇನ್ನು ಸಾಮಾನ್ಯವಾಗಿ ಒಬ್ಬ ಮಧ್ಯಮ ವರ್ಗದ ಕುಟುಂಬದವರ ಮನೆಯ ಕರೆಂಟ್ ಬಿಲ್ಲ ತಿಂಗಳಿಗೆ ಹೆಚ್ಚು ಅಂದರೆ 500 ರಿಂದ 800 ರೂಪಾಯಿಯ ತನಕ ಬರುತ್ತದೆ ಮತ್ತು ಬಡ ಜನರ ಮನೆಯ ಕರೆಂಟ್ ಬಿಲ್ ಹೆಚ್ಚು ಅಂದರೆ 250 ರೂಪಾಯಿಯಿಂದ 300 ರೂಪಾಯಿಯ ತನಕ ಬರುತ್ತದೆ.

ಇನ್ನು ಇತ್ತೀಚಿನ ಕೆಲವು ದಿನಗಳಿಂದ ಮನೆಯ ಕರೆಂಟ್ ಬಿಲ್ ಏಕಾಏಕಿ ಹೆಚ್ಚು ಬರುತ್ತಿರುವುದನ್ನ ಗಮನಿಸಿದ್ದೇವೆ ಮತ್ತು ಇದು ಜನರ ಆಕ್ರೋಶಕ್ಕೆ ಕೂಡ ಕಾರಣವಾಗಿದ್ದು ಸಾರ್ವಜನಿಕರ ಗಮನಕ್ಕೆ ಬಂದಿದೆ ಎಂದು ಹೇಳಬಹುದು. ಈಗ ವಿಷಯಕ್ಕೆ ಬರುವುದಾದರೆ ಇಲ್ಲೊಬ್ಬ ಬಡ ವೃದ್ಧನ ಮನೆಯ ಕರೆಂಟ್ ನೋಡಿದರೆ ನೀವು ಒಂದು ಕ್ಷಣ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಸದ್ಯ ಈತನ ಮನೆಯ ಕರೆಂಟ್ ಬಿಲ್ ಎಲ್ಲಾ ಸಾಮಾಜಿಕ ಮಾದ್ಯಮದಲ್ಲಿ ಸಕತ್ ವೈರಲ್ ಆಗಿದ್ದು ಸದ್ಯ ಈ ಸುದ್ದಿ ನೋಡಿ ಜನರು ಶಾಕ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

great power bill

ಹಾಗಾದರೆ ಈತನ ಮನೆಯ ಒಂದು ತಿಂಗಳ ಕರೆಂಟ್ ಬಿಲ್ ಎಷ್ಟು ಮತ್ತು ಈ ಬಿಲ್ ನೋಡಿ ಈತ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಕರೆಂಟ್ ಬಿಲ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ನಾವು ಹೇಳುತ್ತಿರುವ 80 ವರ್ಷದ ಈ ವೃದ್ಧನ ಹೆಸರು ಗಂಪತ್ ನಾಯ್ಕ್, ಬಡ ಕುಟುಂಬದ ಈ ವೃದ್ಧ ಹೇಗೆ ತನ್ನ ಕೈಯಲ್ಲಿ ಆದಷ್ಟು ಹಣವನ್ನ ಸಂಪಾಧನೆ ಮಾಡಿ ಜೀವನವನ್ನ ಮಾಡುತ್ತಿದ್ದಾನೆ. ಇನ್ನು ಈತನ ಮನೆಗೆ ಕರೆಂಟ್ ಇದ್ದು ಪ್ರತಿ ತಿಂಗಳು 200 ರಿಂದ 300 ರೂಪಾಯಿ ಕರೆಂಟ್ ಬಿಲ್ ಬರುತ್ತದೆ, ಆದರೆ ಈ ತಿಂಗಳು ಈತನ ಮನೆಗೆ ಬರೋಬ್ಬರಿ 80 ಕೋಟಿ ರೂಪಾಯಿ ಕರೆಂಟ್ ಬಿಲ್ ಬಂದಿದ್ದು ಈ ಕರೆಂಟ್ ಬಿಲ್ ಈ ವೃದ್ಧ ಆಸ್ಪತ್ರೆಯನ್ನ ಸೇರಿದ್ದಾನೆ.

ಹೌದು 80 ಕೋಟಿ ರೂಪಾಯಿಯ ವಿದ್ಯುತ್ ಬಿಲ್ ಪಡೆದ ಮನೆಯ ಯಜಮಾನನ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಸೇರಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಬಿಲ್ ನೋಡಿ ವೃದ್ಧನ ರಕ್ತದ ಒತ್ತಡ ಹೆಚ್ಚಾದ ಕಾರಣ ಮನೆಯವರು ವೃದ್ಧನನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆ ಕುರಿತು ಮಾತಾಡಿರುವ ಗಂಪತ್ ನಾಯ್ಕ್ ಅವರ ಮೊಮ್ಮಗ ನೀರಜ್, ಮೊದಲು ಇಡೀ ಗ್ರಾಮದ ಕರೆಂಟ್ ಬಿಲ್ ಇರಬಹುದು ಎಂದುಕೊಂಡಿದ್ದೇವು. ಆದರೆ ಕ್ರಾಸ್ ಚೆಕ್ ಮಾಡಿದ ಮೇಲೆ ಅದು ಕೇವಲ ನಮ್ಮ ಮನೆಯ ಬಿಲ್ ಎಂದು ಗೊತ್ತಾಗಿ ಆಘಾತವಾಯಿತು ಮತ್ತು ಕೂಡಲೇ ಅಧಿಕಾರಿಗಳ ಗಮನಕ್ಕೆ ತರಲಾಯಿತು ಎಂದರು.

Join Nadunudi News WhatsApp Group

great power bill

ಇನ್ನು ತಮ್ಮ ತಪ್ಪು ಒಪ್ಪಿಕೊಂಡಿರುವ ಮಹಾರಾಷ್ಟ್ರ ವಿದ್ಯುತ್ ಸರಬರಾಜು ಕಂಪನಿ ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಹೇಳಿ ಸರಿಯಾದ ವಿದ್ಯುತ್ ಬಿಲ್ ಅನ್ನು ವಿತರಿಸಿದ್ದಾರೆ ಮತ್ತು ಇದರ ಕುರಿತು ತನಿಖೆಯನ್ನ ಕೂಡ ಮಾಡುತ್ತಿದ್ದಾರೆ. ಸ್ನೇಹಿತರೆ ಈ ವಿದ್ಯುತ್ ಬಿಲ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group