ರಾಮ ಮಂದಿರದ ನಿರ್ಮಾಣಕ್ಕೆ ಸಂಗ್ರಹವಾದ ದೇಣಿಗೆ ಎಷ್ಟು ಕೋಟಿ ಗೊತ್ತಾ, ಇದು ನೋಡಿ ರಾಮನ ಮಹಿಮೆ.

ಹಿಂದೂಗಳ ಅದೆಷ್ಟೋ ವರ್ಷಗಳ ಕನಸು ಅಂದರೆ ಅದೂ ರಾಮನ ಜನ್ಮ ಭೂಮಿಯಾದ ಅಯ್ಯೋದ್ಯೆಯಲ್ಲಿ ರಾಮ ಮಂದಿರವನ್ನ ನಿರ್ಮಾಣ ಮಾಡುವುದು ಆಗಿದೆ ಎಂದು ಹೇಳಬಹುದು. ಈಗ ಜನರ ಆಸೆ ಈಡೇರುವಂತೆ ಅಯ್ಯೋದ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಆಗುತ್ತಿದ್ದು ದೇಶ ವಿದೇಶದಿಂದ ಜನರು ಅಪಾರ ಮೊತ್ತದ ಹಣವನ್ನ ದೇಣಿಗೆಯ ರೂಪದಲ್ಲಿ ನೀಡುತ್ತಿದ್ದಾರೆ ಎಂದು ಹೇಳಬಹುದು. ಹೌದು ಜನರು ಜಾತಿ, ಬೇಧ ಮತ್ತು ಧಾರ್ಮ ಅನ್ನದೆ ತಮ್ಮ ಕೈಯಲ್ಲಿ ಆದಷ್ಟು ಹಣವನ್ನ ದೇಣಿಗೆಯ ರೂಪದಲ್ಲಿ ನೀಡುತ್ತಿದ್ದು ಇನ್ನೇನು ಕೆಲವೇ ತಿಂಗಳುಗಳಲ್ಲಿ ನಾವು ರಾಮ ಮಂದಿರದಲ್ಲಿ ರಾಮನನ್ನ ನೋಡಬಹುದಾಗಿದೆ ಎಂದು ಹೇಳಬಹುದು.

ಇನ್ನು ದೇಣಿಗೆ ಸಂಗ್ರಹದ ಕಾರ್ಯ ಈಗ ಮುಗಿದಿದ್ದು ಇನ್ನು ದೇವಸ್ಥಾನದ ನಿರ್ಮಾಣದ ಕಾರ್ಯ ಮಾತ್ರ ಭಾಕಿ ಉಳಿದುಕೊಂಡಿದೆ ಎಂದು ಹೇಳಬಹುದು. ಇನ್ನು ನೀವು ಇಲ್ಲಿಯ ತನಕ ರಾಮ ಮಂದಿರದ ನಿರ್ಮಾಣಕ್ಕೆ ಸಂಗ್ರಹ ಆದ ಒಟ್ಟು ದೇಣಿಗೆ ಎಷ್ಟು ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹಾಗಾದರೆ ರಾಮ ಮಂದಿರದ ನಿರ್ಮಾಣಕ್ಕೆ ಸಂಗ್ರಹ ಆದ ಒಟ್ಟು ದೇಣಿಗೆ ಹಣ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ರಾಮ ಮಂದಿರಕ್ಕೆ ನೀವು ಎಷ್ಟು ದೇಣಿಗೆಯನ್ನ ನೀಡಿದ್ದೀರಿ ಮತ್ತು ರಾಮ ಮಂದಿರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

great rama mandira

ಹೌದು ಸ್ನೇಹಿತರೆ ರಾಮ ಮಂದಿರದ ನಿರ್ಮಾಣಕ್ಕೆ ಈಗಾಗಲೇ ಹಣವನ್ನ ದೇಣಿಗೆಯ ರೂಪದಲ್ಲಿ ಸಂಗ್ರಹ ಮಾಡಲಾಗಿದ್ದು ಜನರು ರಾಮ ಮಂದಿರದ ನಿರ್ಮಾಣಕ್ಕೆ ತಮ್ಮ ಕೈಯಲ್ಲಿ ಆದಷ್ಟು ಹಣವನ್ನ ದೇಣಿಗೆಯ ರೂಪದಲ್ಲಿ ನೀಡಿದ್ದಾರೆ. ಸುಮಾರು 44 ದಿನಗಳಿಂದ ರಾಮ ಮಂದಿರದ ನಿರ್ಮಾಣಕ್ಕೆ ದೇಣಿಗೆಯನ್ನ ಸಂಗ್ರಹ ಮಾಡಲಾಗುತ್ತಿದ್ದು ನಿನ್ನೆಗೆ ದೇಣಿಗೆ ಸಂಗ್ರಹ ಕಾರ್ಯ ಪೂರ್ಣವಾಗಿದೆ ಎಂದು ಹೇಳಬಹುದು. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ್ ಗಿರಿ ಅವರು ದೇಶ್ಯಾದ್ಯಂತ ನಡೆದ ಅಭಿಯಾನ ಇಂದಿಗೆ ಸಂಪನ್ನಗೊಂಡಿದೆ ಎಂದು ಹೇಳಿದ್ದಾರೆ.

ಇನ್ನು ದೇಶ ಮಾತ್ರವಲ್ಲದೆ ವಿದೇಶದಿಂದ ದೇಣಿಗೆಯ ಹಣ ಸಂಗ್ರಹ ಆಗಿದ್ದು ಇದುವರೆಗೆ ಮಂದಿರ ನಿರ್ಮಾಣಕ್ಕೆ ಸಂಗ್ರಹಗೊಂಡ 1900 ಕೋಟಿ ರೂಪಾಯಿಗಳನ್ನು ಶ್ರೀ ರಾಮಲಲ್ಲಾ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಲಾಗಿದೆ. ಇನ್ನೂ ಕೆಲವೊಂದು ಚೆಕ್ ಗಳ ಬ್ಯಾಂಕ್ ಕ್ಲಿಯರೆನ್ಸ್ ಪ್ರಗತಿಯಲ್ಲಿರುವುದರಿಂದ ಒಟ್ಟು ಮೊತ್ತ 2000 ಕೋಟಿ ದಾಟಬಹುದು ಎಂದಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಸದಸ್ಯ ಡಾ.ಅನಿಲ್ ಮಿಶ್ರಾ ಮಾತನಾಡಿ ದೇಣಿಗೆ ಸಂಗ್ರಹದ ಒಟ್ಟು ಮೊತ್ತ 2500 ಕೋಟಿ ದಾಟಬಹುದು ಎಂದು ಅಂದಾಜಿಸಿದ್ದಾರೆ ಮತ್ತು ಅಭಿಯಾನ ತಡವಾಗಿ ಶುರುವಾದ ಕೆಲವೊಂದು ರಾಜ್ಯಗಳಲ್ಲಿ ಇನ್ನೂ ದೇಣಿಗೆ ಸಂಗ್ರಹವಾಗಬಹುದು ಎಂದಿದ್ದಾರೆ.

Join Nadunudi News WhatsApp Group

great rama mandira

ರಾಮನ ಮಂದಿರ ನಿರ್ಮಾಣಕ್ಕೆ ಧರ್ಮ,ಜಾತಿ, ಪಂಗಡಗಳ ಮೀರಿ ಜನ ದೇಣಿಗೆ ನೀಡಿದ್ದಾರೆ, ಇದು ರಾಮನ ಮೇಲೆ ದೇಶದ ಜನರಿಗಿರುವ ಭಕ್ತಿ, ನಂಬಿಕೆ ಎಂದು ಮಿಶ್ರಾ ಹೇಳಿದ್ದಾರೆ. ಇನ್ನು ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 250 ಕೋಟಿ ರೂಪಾಯಿ ಅನುದಾನ ನೀಡಿದೆ. ಸ್ನೇಹಿತರೆ ರಾಮ ಮಂದಿರದ ನಿರ್ಮಾಣಕ್ಕೆ ಎಷ್ಟು ಹಣ ಸಂಗ್ರಹ ಆಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group