ರೈಲಿನಲ್ಲಿ ಇದ್ದ ಎರಡು ಸಾವಿರ ಜನರನ್ನ ಕಾಪಾಡಲು ಈ ತಂದೆ ಮಗಳು ಮಾಡಿದ ಕೆಲಸ ಏನು ಗೊತ್ತಾ, ಪ್ರಪಂಚವೇ ಶಾಕ್ ಆಗಿದೆ.

ಕೆಲವು ಸಮಯದಲ್ಲಿ ದೇವರು ಮಾನವನ ರೂಪದಲ್ಲಿ ಬಂದು ಜನರ ರಕ್ಷಣೆ ಮಾಡುತ್ತಾನೆ ಅನ್ನುವುದು ನಾವು ಕೇಳಿರುತ್ತೇವೆ, ಆದರೆ ಈ ಘಟನೆಯನ್ನ ಕೇಳಿದರೆ ಅದೂ ನಿಜ ಅನಿಸುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ. ಒಬ್ಬ ಮನುಷ್ಯ ತಾನು ಮಾಡುವ ಕೆಲವು ಕೆಲಸದಿಂದ ಸಮಾಜದ ಜನರಿಗೆ ರಾಕ್ಷಸ ಅಥವಾ ದೇವರು ಎನಿಸಿಕೊಳ್ಳುತ್ತಾನೆ, ತನ್ನ ಸೂಕ್ಷ್ಮ ಬುದ್ದಿ ಮತ್ತು ಒಂದೇ ಒಂದು ಉಪಾಯದಿಂದ ಈ ಬಡ ಅಪ್ಪ ಮಗಳು ಎರಡು ಸಾವಿರ ಜನರ ಪ್ರಾಣವನ್ನ ಕಾಪಾಡಿದ್ದಾರೆ. ಅಲ್ಲಿ ನಡೆದಿದ್ದು ಏನು ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಈ ಅಪ್ಪ ಮಗಳು ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಅಪ್ಪ ಮಗಳ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ನಾವು ಹೇಳುತ್ತಿರುವ ಈ ಪುರುಷನ ಹೆಸರು ಸ್ವಪನ್, ತ್ರಿಪುರ ರಾಜ್ಯದ ದಾಂಚಾರ ಅನ್ನುವ ಅರಣ್ಯ ಪ್ರದೇಶದ ಬುಡಕಟ್ಟು ಹಳ್ಳಿಯಲ್ಲಿ ಈತ ತನ್ನ ಕುಟುಂಬದ ಜೊತೆ ವಾಸ ಮಾಡುತ್ತಿದ್ದಾನೆ. ಒಂದು ದಿನ ಸ್ವಪನ್ ತನ್ನ ಮಗಳ ಜೊತೆ ಕೆಲಸದ ಸಲುವಾಗಿ ಬೇರೆ ಹಳ್ಳಿಗೆ ಹೋಗುವ ಸಲುವಾಗಿ ಬೆಟ್ಟದಿಂದ ಇಳಿದು ನಡೆದುಕೊಂಡು ಹೋಗುವಾಗ ರೈಲು ಹಳಿಯನ್ನ ದಾಟಿ ಹೋಗುತ್ತಿದ್ದರು ಮತ್ತು ಈ ಸಮಯದಲ್ಲಿ ಬಲಗಡೆ ತಿರುಗಿ ನೋಡಿದ ಸ್ವಪನ್ ಬೆಚ್ಚಿ ಬೀಳುತ್ತಾನೆ. ಸತತವಾಗಿ ಕೆಲವು ದಿನಗಳಿಂದ ಮಳೆಗೆ ಭೂಕುಸಿತ ಉಂಟಾಗಿ ಸುಮಾರು ಒಂದು ಕಿಲೋ ಮೀಟರ್ ನಷ್ಟು ರೈಲು ಹಳಿ ಮುರಿದು ಬಿದ್ದಿತ್ತು ಮತ್ತು ಇದನ್ನ ನೋಡಿದ ಸ್ವಪನ್ ಗೆ ಕೆಲವೇ ಕ್ಷಣದಲ್ಲಿ ರೈಲು ಬರುತ್ತಿರುವ ಶಬ್ದ ಕೇಳಿಸುತ್ತದೆ.

Great swapan in Tripur

ಈ ಸಮಯದಲ್ಲಿ ಏನು ಮಾಡಬೇಕು ಎಂದು ತೋಚದ ಸ್ವಪನ್ ಹೇಗಾದರೂ ಮಾಡಿ ರೈಲನ್ನ ನಿಲ್ಲಿಸಬೇಕು ಅಂದುಕೊಳ್ಳುತ್ತಾನೆ ಮತ್ತು ಆಗುವ ದೊಡ್ಡ ಅಪಘಾತವನ್ನ ತಡೆಯಬೇಕು ಎಂದು ಸ್ವಲ್ಪ ಯೋಚನೆ ಮಾಡುತ್ತಾನೆ. ಈ ಸಮಯದಲ್ಲಿ ಒಂದು ದೊಡ್ಡ ಉಪಾಯ ಮಾಡಿದ ಸ್ವಪನ್ ತಕ್ಷಣ ತನ್ನ ಬಟ್ಟೆ ಬಿಚ್ಚಿ ಆ ಬಟ್ಟೆಯಲ್ಲಿ ಕೈಯಲ್ಲಿ ಹಿಡಿದುಕೊಂಡು ರೈಲನ್ನ ನಿಲ್ಲಿಸಿ ಎಂದು ಹೇಳುತ್ತಾ ರೈಲಿನ ಎದುರಿಗೆ ಓದಿದ್ದಾನೆ. ಈ ಸಮಯದಲ್ಲಿ ತಂದೆಯ ಜೊತೆ ಮಗಳು ಕೂಡ ಜೈ ಜೋಡಿಸುತ್ತಾಳೆ. ದೂರದಿಂದಲೇ ತಂದೆ ಮತ್ತು ಮಗಳನ್ನ ನೋಡಿದ ರೈಲು ಚಾಲಕರು ಏನೋ ಅನಾಹುತ ಆಗಿದೆ ಎಂದು ತಿಳಿದು ಹಂತ ಹಂತವಾಗಿ ಬ್ರೇಕ್ ಹಾಕಿ ರೈಲನ್ನ ನಿಲ್ಲಿಸಿ ಬಂದು ನೋಡಿ ಅಲ್ಲಿನ ದೃಶ್ಯ ಕಂಡು ಒಂದು ಕ್ಷಣ ಬೆಚ್ಚಿ ಬಿದ್ದರು.

ಆ ರೈಲಿನಲ್ಲಿ ಸುಮಾರು ಎರಡು ಸಾವಿರ ಜನರು ಪ್ರಯಾಣ ಮಾಡುತ್ತಿದ್ದರು ಮತ್ತು ಸ್ವಪನ್ ಅವರ ಒಂದು ಉಪಾಯ ಎರಡು ಸಾವಿರ ಜನರ ಪ್ರಾಣವನ್ನ ಕಾಪಾಡಿತು. ತಂದೆ ಮಗಳ ದೈರ್ಯವನ್ನ ಕಂಡು ಖುಷಿಪಟ್ಟ ತ್ರಿಪುರ ರಾಜ್ಯದ ಮಂತ್ರಿ ಸ್ವಪನ್ ಹಾಗು ಅವರ ಮಗಳನ್ನ ಮನೆಗೆ ಕರೆದು ಅವರ ಜೊತೆ ಊಟವನ್ನ ಮಾಡಿದರು ಮತ್ತು ಅಷ್ಟೇ ಅಲ್ಲದೆ ಕಡು ಬಡತನದಲ್ಲಿ ಇರುವ ಸ್ವಪನ್ ಗೆ ಬದುಕಲು ಒಂದು ದಾರಿ, ಮನೆ ಹಾಗು ನಗದು ಬಹುಮಾನವನ್ನ ಕೂಡ ಕೊಡಲಾಯಿತು. ಸ್ನೇಹಿತರೆ ಈ ತಂದೆ ಮಗಳ ಧೈರ್ಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Great swapan in Tripur

Join Nadunudi News WhatsApp Group