Gruha Jyothi: ಬಾಡಿಗೆ ಮನೆಯಲ್ಲಿ ಇರುವವರಿಗೆ ಗುಡ್ ನ್ಯೂಸ್, ಗೃಹಜ್ಯೋತಿ ಯೋಜನೆಯ ಇನ್ನೊಂದು ಘೋಷಣೆ.

ಗೃಹಜ್ಯೋತಿ ಯೋಜನೆಯ ಕುರಿತು ಇನ್ನೊಂದು ಘೋಷಣೆ

Gruha Jyothi D- Link Facility: ರಾಜ್ಯದಲ್ಲಿ ಜುಲೈನಿಂದ ಅರ್ಹ ಫಲಾನುಭವಿಗಳು Gruha Jyothi ಯೋಜನೆಯಡಿ ಉಚಿತ ವಿದ್ಯುತ್ ನ ಲಾಭವನ್ನು ಪಡೆಯುತ್ತಿದ್ದಾರೆ. ಸರಿಸುಮಾರು 7 ತಿಂಗಳುಗಳಿಂದ ಹಣ ಪಾವತಿಸದೇ ಜನರು ವಿದ್ಯುತ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ತಿಂಗಳ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ಉಚಿತ ವಿದ್ಯುತ್ ಅನ್ನು ನೀಡಲಾಗುತ್ತಿದೆ.

ನಿಗದಿತ ಯೂನಿಟ್ ಗಿಂತ ಹೆಚ್ಚಾಗಿ ವಿದ್ಯುತ್ ಅನ್ನು ಬಳಕೆ ಮಾಡುತ್ತಿದ್ದರೆ ಅಂತವರು ಹೆಚ್ಚುವರಿ ಕರೆಂಟ್ ಬಿಲ್ ಅನ್ನು ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ ಬಳಕೆ ಮಾಡಿರುವ ವಿದ್ಯುತ್ ಗೆ ಇಲಾಖೆ ಕರೆಂಟ್ ಬಿಲ್ ಅನ್ನು ನೀಡುತ್ತಿದೆ. ಸದ್ಯ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯ ಕುರಿತು ಇನ್ನೊಂದು ಘೋಷಣೆ ಹೊರಡಿಸಿದೆ.

Gruha Jyothi Scheme Latest
Image Credit: Oneindia

ಗೃಹಜ್ಯೋತಿ ಯೋಜನೆಯ ಇನ್ನೊಂದು ಘೋಷಣೆ
ಸದ್ಯ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯ ಇನ್ನೊಂದು ಘೋಷಣೆ ಹೊರಡಿಸಿದೆ. ಈ ಬಗ್ಗೆ ಇಂಧನ ಇಲಾಖಾ ಕಾರ್ಯದರ್ಶಿ ಅಪರ್ಣ ಅವರು ಮಾಹಿತಿ ನೀಡಿದ್ದಾರೆ. ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಸೇವಾ ತಂತ್ರಾಂಶದಲ್ಲಿ D- Link ಸೌಲಭ್ಯ ಕಲ್ಪಿಸಲಾಗಿದೆ. ಈ ಮೂಲಕ ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ ನೀಡಿದೆ.

ಅಷ್ಟಕ್ಕೂ D- Link ಪ್ರಕ್ರಿಯೆ ಎಂದರೇನು..?
ಯಾವುದೇ ವ್ಯಕ್ತಿ ಬಾಡಿಗೆ ಮನೆಯಲ್ಲಿದ್ದು ಗೃಹ ಜ್ಯೋತಿ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ, ಹಾಗೂ ಆ ಮನೆಯನ್ನು ಬದಲಾಯಿಸಿದರೆ ಹಳೆಯ ಯೋಜನೆಯ ನೋಂದಣಿಯನ್ನು ರದ್ದುಪಡಿಸಿಕೊಂಡು ಮತ್ತೆ ಹೊಸ ಮನೆಯ ನಂಬರ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕೆ D-Link ಪ್ರಕ್ರಿಯೆ ಎನ್ನಲಾಗುತ್ತದೆ. ನೀವು ಆನ್ಲೈನ್ ನಲ್ಲಿ ಕೂಡ ಡಿ ಲಿಂಕ್ ಪ್ರಕ್ರಿಯೆಯಿಂನು ಪೂರ್ಣಗೊಳಿಸಿಕೊಳ್ಳಬಹುದು.

Gruha Jyothi D- Link Facility
Image Credit: News9live

ಗೃಹ ಜ್ಯೋತಿ ಫಲಾನುಭವಿಗಳಿಗೆ ಇನ್ನುಮುಂದೆ 10 ಯೂನಿಟ್ ಉಚಿತ ವಿದ್ಯುತ್
ಗೃಹ ಜ್ಯೋತಿ ಯೋಜನೆಯಡಿ, ತಿಂಗಳಿಗೆ 48 ಯೂನಿಟ್‌ ಗಿಂತ ಕಡಿಮೆ ವಿದ್ಯುತ್ ಬಳಸುವ 70 ಲಕ್ಷ ಗ್ರಾಹಕರಿಗೆ ತಿಂಗಳಿಗೆ 10% ಹೆಚ್ಚುವರಿ ವಿದ್ಯುತ್ ಬದಲಿಗೆ 10 ಯೂನಿಟ್ ಹೆಚ್ಚುವರಿ ಉಚಿತ ವಿದ್ಯುತ್ ನೀಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಯಾರು ತಿಂಗಳಿನಲ್ಲಿ 48 ಯುನಿಟ್ ಗಿಂತ ಕಡಿಮೆ ವಿದ್ಯುತ್ ಅನ್ನು ಬಳಸುತ್ತಾರೋ ಅಂತವರು ಇನ್ನುಮುಂದೆ ಹೆಚ್ಚುವರಿಯಾಗಿ 10 ಯುನಿಟ್ ಅನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group