Gruha Jyothi: ಗೃಹ ಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಉಚಿತ ಕರೆಂಟ್ ಪಡೆಯಲು ಹೊಸ ಷರತ್ತುಗಳು ಅನ್ವಯ

ಗೃಹ ಜ್ಯೋತಿ ಯೋಜನೆಯ ಎಕ್ಸ್ಟ್ರಾ 10 ಯೂನಿಟ್ ಗೆ ಷರತ್ತು ವಿಧಿಸಿದ ಸರ್ಕಾರ

Gruha Jyothi  Extra 10 Unit Free: ಸದ್ಯ ರಾಜ್ಯದಲ್ಲಿ ರಾಜ್ಯ ಸರ್ಕಾರ Gruha Jyothi ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಅನ್ನು ನೀಡುತ್ತಿರುವುದು ಎಲ್ಲರಿಗು ತಿಳಿದೇ ಇದೆ. ತಿಂಗಳ ಸರಾಸರಿ ಲೆಕ್ಕಾಚಾರದ ಮೇಲೆ ಫಲಾನುಭವಿಗಳು ಉಚಿತ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ.

ಇದೀಗ ಗೃಹಜ್ಯೋತಿ ಉಚಿತ ಕರೆಂಟ್ ಬಳಸುತ್ತಿರುವವರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಉಚಿತ ವಿದ್ಯುತ್ ಫಲಾನುಭವಿಗಳಿಗೆ ಹೊಸ ನಿಯಮ ಜಾರಿಯಾಗಲಿದೆ. ಇನ್ನುಮುಂದೆ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬಹುದು.

Gruha Jyothi Extra 10 Unit Free
Image Credit: newindianexpress

ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ 10 ಯೂನಿಟ್ ಎಕ್ಸ್ಟ್ರಾ
ತಿಂಗಳ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಅನ್ನು ನೀಡಲಾಗುತ್ತಿದೆ. ನಿಗದಿತ ಯೂನಿಟ್ ಗಿಂತ ಹೆಚ್ಚಾಗಿ ವಿದ್ಯುತ್ ಅನ್ನು ಬಳಕೆ ಮಾಡುತ್ತಿದ್ದರೆ ಅಂತವರು ಹೆಚ್ಚುವರಿ ಕರೆಂಟ್ ಬಿಲ್ ಅನ್ನು ಪಾವತಿಸಬೇಕಾಗುತ್ತದೆ.

ಗೃಹ ಜ್ಯೋತಿ ಯೋಜನೆಯಡಿ ಈ ಹಿಂದೆ ಬಳಸಲಾಗಿದ್ದ ಸರಾಸರಿ ಘಟಕಕ್ಕಿಂತ ಶೇ. ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಉಚಿತವಾಗಿ ನೀಡಲಾಗಿತ್ತು. ಈಗ ಶೇಕಡಾವಾರು ಬದಲು ಸರಾಸರಿಗಿಂತ 10 ಯೂನಿಟ್ ಹೆಚ್ಚು ನೀಡಲು ಸರಕಾರ ನಿರ್ಧರಿಸಿದೆ. ಆದರೆ ಈ 10 ಯುನಿಟ್ ಎಕ್ಸ್ಟ್ರಾ ವಿದ್ಯುತ್ ಅನ್ನು ಪಡೆಯಲು ಷರತ್ತುಗಳು ಅನ್ವಯಾಗಲಿದೆ.

10 ಯೂನಿಟ್ ಎಕ್ಸ್ಟ್ರಾ ವಿದ್ಯುತ್ ಪಡೆಯಲು ಷರತ್ತುಗಳು ಅನ್ವಯ
ಗೃಹ ಜ್ಯೋತಿ ಯೋಜನೆಯಡಿ, ತಿಂಗಳಿಗೆ 48 ಯೂನಿಟ್‌ ಗಿಂತ ಕಡಿಮೆ ವಿದ್ಯುತ್ ಬಳಸುವ 70 ಲಕ್ಷ ಗ್ರಾಹಕರಿಗೆ ತಿಂಗಳಿಗೆ 10% ಹೆಚ್ಚುವರಿ ವಿದ್ಯುತ್ ಬದಲಿಗೆ 10 ಯೂನಿಟ್ ಹೆಚ್ಚುವರಿ ಉಚಿತ ವಿದ್ಯುತ್ ನೀಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Gruha Jyothi scheme New Update
Image Credit: currentaffairs

ಯಾರು ತಿಂಗಳಿನಲ್ಲಿ 48 ಯುನಿಟ್ ಗಿಂತ ಕಡಿಮೆ ವಿದ್ಯುತ್ ಅನ್ನು ಬಳಸುತ್ತಾರೋ ಅಂತವರು ಇನ್ನುಮುಂದೆ ಹೆಚ್ಚುವರಿಯಾಗಿ 10 ಯುನಿಟ್ ಅನ್ನು ಅಂದರೆ ಒಟ್ಟಾಗಿ 58 ಯುನಿಟ್ ಗಳನ್ನೂ ವಿದ್ಯುತ್ ಅನ್ನು ಉಚಿತ ಆಗಿ ಪಡೆಯಬಹುದು. ಈ ಸೌಲಭ್ಯ ಜಾರಿಯಾದರೆ ಸರ್ಕಾರ ಬೊಕ್ಕಸಕ್ಕೆ ವಾರ್ಷಿಕವಾಗಿ 398 ಕೋಟಿ ಹೊರೆಯಾಗಲಿದೆ. ಇನ್ನು ಗೃಹ ಜ್ಯೋತಿ ಯೋಜನೆಯಲ್ಲಿನ ಬದಲಾವಣೆಯು ಫೆ.1 ರಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರವು ಆದೇಶ ಹೊರಡಿಸಿದೆ.

Join Nadunudi News WhatsApp Group