Gruha Lakshmi: ಗೃಹ ಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದವರಿಗೆ ಬಿಗ್ ಅಪ್ಡೇಟ್, ಈ ದಿನ ಖಾತೆಗೆ ಜಮಾ ಆಗಲಿದೆ ಎರಡು ಕಂತುಗಳ ಹಣ.

ಈ ದಿನ ಖಾತೆಗೆ ಜಮಾ ಆಗಲಿದೆ ಎರಡು ಕಂತುಗಳ ಹಣ

Gruha Lakshmi Amount Latest Update: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಸಮಬಂಧಿಸಿದ ಸಮಸ್ಯೆ ಇನ್ನು ದೂರವಾಗಿಲ್ಲ ಎನ್ನಬಹುದು. ಗೃಹ ಲಕ್ಷ್ಮಿ ಮಹಿಳೆಯರು ಹಣಕ್ಕಾಗಿ ಕಾಯುತ್ತಿದ್ದಾರೆ. ಜೂನ್ ಮತ್ತು ಜುಲೈ ತಿಂಗಳ ಹಣ ಅದೆಷ್ಟೋ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಹಣ ಜಮಾ ಆಗುವುದಾಗಿ ಸರ್ಕಾರ ಹೇಳಿಕೆ ನೀಡುತ್ತಿದ್ದರು ಹಣ ಖಾತೆಗೆ ಜಮಾ ಆಗುತ್ತಿಲ್ಲ.

ಈ ಬಗ್ಗೆ ಗೃಹಿಣಿಯರು ರಾಜ್ಯ ಸರ್ಕಾರವನ್ನು ದೋರುತ್ತಿದ್ದಾರೆ. ಗೃಹ ಲಕ್ಷ್ಮಿ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಬಗ್ಗೆ ಗೃಹಿಣಿಯರು ಚಿಂತಿಸುತ್ತಿದ್ದಾರೆ ಎನ್ನಬಹುದು. ಸದ್ಯ ಈ ಬಗ್ಗೆ ಚಿಂತೆಯಲ್ಲಿರುವವರಿಗೆ ರಾಜ್ಯ ಸರ್ಕಾರ ಇದೀಗ ಬಿಗ್ ರಿಲೀಫ್ ನೀಡಿದೆ ಎನ್ನಬಹುದು.

Gruha Lakshmi Amount Latest Update
Image Credit: Hindustantimes

ಗೃಹ ಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದವರಿಗೆ ಬಿಗ್ ಅಪ್ಡೇಟ್
ಜೂನ್ ಮತ್ತು ಜುಲೈ ಕಂತಿನ ಹಣ ಜಮಾ ಮಾಡುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದ ಖಾತರಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಒಟ್ಟು ಶೇ.98 ರಷ್ಟು ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದು, ಇಲ್ಲಿಯವರೆಗೆ ಪ್ರತಿ ತಿಂಗಳು ಹಣ ಜಮೆಯಾಗುತ್ತಿದೆ.

ಜೂನ್ ಮತ್ತು ಜುಲೈ ತಿಂಗಳ ಹಣ ಒಂದು ವಾರದೊಳಗೆ ಅವರ ಖಾತೆಗೆ ಜಮಾ ಆಗಲಿದೆ. ಈ ತಿಂಗಳಲ್ಲಿ ಎರಡು ಕಂತುಗಳ ಹಣವನ್ನು ಜಮಾ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದರು. ಗೃಹ ಲಕ್ಷ್ಮಿ ಯೋಜನೆಯ 2 ತಿಂಗಳ ಬಾಕಿ ಹಣ 10 ದಿನಗಳ ಒಳಗಾಗಿ ಫಲಾನುಭವಿಗಳ ಖಾತೆಗೆ ಹಾಕಲುತ್ತದೆ ಎಂದಿದ್ದಾರೆ. ಇದರಂತೆ ಒಂದಿಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ. ಇನ್ನು ಬಾಕಿ ಇರುವ ಫಲಾನುಭವಿಗಳ ಖಾತೆಗೆ ಆಗಸ್ಟ್ ಈ ವಾರದಲ್ಲಿ ಹಣ ಜಮಾ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

Gruha Lakshmi Amount New Update
Image Credit: Karnatakatimes

ಈ ದಿನ ಖಾತೆಗೆ ಜಮಾ ಆಗಲಿದೆ ಎರಡು ಕಂತುಗಳ ಹಣ
ಮೇ ತಿಂಗಳಿನಲ್ಲಿಯೇ ಖಾತೆಗೆ ಹಣ ಹಾಕಿದ್ದೇವೆ. ತಾಂತ್ರಿಕ ದೋಷದಿಂದ ಜೂನ್ ಮತ್ತು ಜುಲೈ ತಿಂಗಳ ಹಣ ಬಾಕಿ ಉಳಿದಿದೆ. ಈಗಾಗಲೇ BDT ತಾಂತ್ರಿಕ ಕಾರ್ಯಗಳು ನಡೆಯುತ್ತಿದೆ. ಇನ್ನು 8 ರಿಂದ 10 ದಿನಗಳಲ್ಲಿ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಅರ್ಹರ ಖಾತೆಗೆ ಜಮಾ ಮಾಡಲಾಗುತ್ತದೆ. ಆಗಸ್ಟ್ ಈ ವಾರದೊಳಗೆ ಎಲ್ಲ ಫಲಾನುಭವಿಗಳ ಖಾತೆಗೆ ಎಲ್ಲ ಬಾಕಿ ಇರುವ ಕಂತುಗಳ ಹಣ ಜಮಾ ಆಗುತ್ತದೆ. ಫಲಾನುಭವಿಗಳ ಖಾತೆಗೆ ಆದಷ್ಟು ಬೇಗ 4000 ಹಣ ಜಮಾ ಆಗಲಿದೆ ಎಂದುಲಕ್ಷ್ಮಿ ಹೆಬ್ಬಾಳ್ಕರ್ ಅಧಿಕೃತ ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

Gruha Lakshmi Scheme latest News
Image Credit: Original Source

Join Nadunudi News WhatsApp Group