ಚಿನ್ನ ಖರೀದಿ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ, ಚಿನ್ನ ಕೊಳ್ಳುವ ತಿಳಿದುಕೊಳ್ಳಿ.

ಬಂಗಾರ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಬಂಗಾರ ಕೊಳ್ಳುವವರ ಸಂಖ್ಯೆ ಸ್ವಲ್ಪ ಜಾಸ್ತಿ ಎಂದು ಹೇಳಬಹುದು. ಹೌದು ಹಬ್ಬ ಮತ್ತು ಒಳ್ಳೆಯ ದಿನಗಳು ಬಂದರೆ ಜನರು ಸಾಲು ಸಾಲಾಗಿ ಬಂದು ಚಿನ್ನದ ಮಳಿಗೆಗಳಲ್ಲಿ ಚಿನ್ನವನ್ನ ಖರೀದಿ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರಿದ್ದು ಚಿನ್ನವನ್ನ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿಲ್ಲ ಎಂದು ಹೇಳಬಹುದು. ಇನ್ನು ಸರ್ಕಾರದ ಕೆಲವು ನಿಯಮಗಳ ಕಾರಣ ಕೂಡ ಜನರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನ ಖರೀದಿ ಮಾಡುತ್ತಿಲ್ಲ ಎಂದು ಹೇಳಬಹುದು.

ಇನ್ನು ಈಗ ವಿಷಯಕ್ಕೆ ಬರುವುದಾದರೆ ಸರ್ಕಾರ ಚಿನವನ್ನ ಖರೀದಿ ಮಾಡುವವರಿಗೆ ಮತ್ತೆ ಹೊಸ ನಿಯಮವನ್ನ ಜಾರಿಗೆ ತಂದಿದ್ದು ಜನರು ಚಿನ್ನವನ್ನ ಖರೀದಿ ಮಾಡುವ ಮುನ್ನ ಈ ನಿಯಮವನ್ನ ಗಮನದಲ್ಲಿ ಅತ್ಯವಶ್ಯಕವಾಗಿ ಇರಿಸಿಕೊಳ್ಳಬೇಕು ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಸರ್ಕಾರದ ಈ ಹೊಸ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Halmarks for gold

ಹೌದು ಸ್ನೇಹಿತರೆ ಮುಂದಿನ ಜೂನ್ ಮೊದಲನೆಯ ವಾರದಿಂದ ಚಿನ್ನಾಭರಣಗಳಿಗೆ ಹಾಲ್ಮಾರ್ಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ ಮತ್ತು ಚಿನ್ನಾಭರಣ ವರ್ತಕರು ಭಾರತೀಯ ಮಾನಕ ಸಂಸ್ಥೆ(ಬಿಐಎಸ್) ನೊಂದಿಗೆ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. 14, 18, ಮತ್ತು 22 ಕ್ಯಾರೆಟ್ ನ ಆಭರಣ ಮತ್ತು ಕರಕುಶಲ ವಸ್ತುಗಳಿಗೆ ಹಾಲ್ಮಾರ್ಕ್ ಕಡ್ಡಾಯವಾಗಲಿದೆ ಎಂದು ತಿಳಿಸಲಾಗಿದೆ ಮತ್ತು ಹಾಲ್ಮಾರ್ಕ್ ಹೊಂದಿರುವ ಚಿನ್ನವನ್ನ ಮಾತ್ರ ಮಾರಾಟ ಮಾಡುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ಜೂನ್ 1 ರಿಂದ ಚಿನ್ನಾಭರಣ ವರ್ತಕರು ಹಾಲ್ಮಾರ್ಕ್ ಹೊಂದಿದ ಆಭರಣ ಮಾಡುವುದು ಕಡ್ಡಾಯವಾಗಿದ್ದು ಬಿಐಎಸ್ ನಲ್ಲಿ ನೋಂದಾಯಿಸಿಕೊಂಡು ನೋಂದಣಿ ಸಂಖ್ಯೆ ಪಡೆಯಬೇಕಿದೆ ಮತ್ತು ಇದರಿಂದ ಗ್ರಾಹಕರು ಮತ್ತು ವರ್ತಕರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ. ಈ ಕುರಿತಂತೆ ಪ್ರಕಟಣೆ ಹೊರಡಿಸಿರುವಂತ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್), ಜೂನ್ 1 2021 ನಿಂದ ಚಿನ್ನದ ಆಭರಣಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಎಲ್ಲಾ ಆಭರಣವ್ಯಾಪಾರಿಗಳು ಕಡ್ಡಾಯವಾಗಿ ಬಿಐಎಸ್ ನಲ್ಲಿ ನೋಂದಣಿ ಮಾಡಿಕೊಳ್ಳುವುದು.

Join Nadunudi News WhatsApp Group

Halmarks for gold

ಕೇವಲ 14, 18 ಮತ್ತು 22 ಕ್ಯಾರೆಟ್ ಚಿನ್ನದ ಮೂರು ದರ್ಜೆಗಳಲ್ಲಿ ಕೇವಲ ಹಾಲ್ ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಮತ್ತು ಆರ್ಟಿಫಿಕೇಷನ್ ಗಳನ್ನು ಮಾತ್ರ ಮಾರಾಟ ಮಾಡುವುದು ಕಡ್ಡಾಯ ಎಂದು ತಿಳಿಸಿದೆ. ಇದು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೈಗೊಂಡಿರುವಂತ ಕ್ರಮವಾಗಿದೆ. ಇದರಿಂದ ಆಭರಣ ತಯಾರಕರಿಗೆ ಲಾಭದಾಯಕವಾಗಲಿದೆ, ಏಕೆಂದರೆ ಇದು ಪೂರೈಕೆದಾರರ ಗುಣಮಟ್ಟ ಮತ್ತು ಪ್ರಾಜೆಕ್ಟ್ ಗಳ ಗುಣಮಟ್ಟವನ್ನು ಜ್ಯುವೆಲ್ಲರ್ ಆಗಿ ಇಡಲು ಸಹಾಯ ಮಾಡುತ್ತದೆ ಎಂದು ಅದು ಹೇಳಿದೆ. ಸ್ನೇಹಿತರೆ ಈ ನಿಯಮದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group