Minor Driving Rule: ಎಲ್ಲಾ ಪೋಷಕರಿಗೆ 25 ಸಾವಿರ ರೂ ದಂಡ, ಕೇಂದ್ರ ಸರ್ಕಾರದ ಅಧಿಕೃತ ಆದೇಶ
ನಿಮ್ಮ ಮಕ್ಕಳಿಗೆ ಬೈಕ್ ಕೊಟ್ರೆ ಕಟ್ಟಬೇಕು 25 ಸಾವಿರ
High Court Verdict On Minor Driving: ದೇಶದಲ್ಲಿ ವಾಹನ ಸವಾರರ ಸುರಕ್ಷೆತೆಗಾಗಿ ಹಾಗೂ ರಸ್ತೆಗಳಲ್ಲಿ ಉಂಟಾಗುವ ಅಪಾಯವನ್ನು ತಡೆಯುವ ಉದ್ದೇಶದಿಂದ ಸರ್ಕಾರ ಸಂಚಾರ ನಿಯಮವನ್ನು ಕಠಿಣಗೊಳಿಸುತ್ತದೆ. ರಸ್ತೆಗಳಲ್ಲಿ ವಾಹನ ಚಲಾಯಿಸುವ ಪ್ರತಿಯೊಬ್ಬರೂ ಕೂಡ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟವರಿಗೆ ವಾಹನ ಪವಾರವಾನಗಿಯನ್ನು ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರು ವಾಹನವನ್ನು ಚಲಾಯಿಸಲು ಅರ್ಹರಾಗಿರುತ್ತಾರೆ. ಸದ್ಯ ಕರ್ನಾಟಕಾ ಹೈಕೋರ್ಟ್ ಅಪ್ರಾಪ್ತ ಮಕ್ಕಳ ವಾಹನ ಚಲನೆಗೆ ಸಂಬಂಧಿಸಿದಂತೆ ಮಹತ್ವದ ನಿಯಮವನ್ನು ಜಾರಿಗೆ ತಂದಿದೆ.
![High Court Verdict On Minor Driving](https://nadunudi.in/wp-content/uploads/2024/06/High-Court-Verdict-On-Minor-Driving-1.png)
ಅಪ್ರಾಪ್ತ ವಯಸ್ಸಿನ ಮಕ್ಕಳಿರುವ ಎಲ್ಲಾ ಪೋಷಕರಿಗೆ ಹೊಸ ನಿಯಮ
ಇನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನವನ್ನು ಚಲಾಯಿಸುವುದು ಕಾನೂನು ಬಾಹಿರವಾಗಿದೆ. ಈ ಕಾನೂನಿನ ನಿಯಮವನ್ನು ಉಲ್ಲಂಘಿಸಿ ಕೆಲ ಪೋಷಕರು ತಮ್ಮ ಮಕ್ಕಳಿಗೆ ವಾಹನವನ್ನು ಚಲಾಯಿಸಲು ಕೊಡುತ್ತಾರೆ. ಇದನ್ನು ಗಮನಿಸಿದ ಸಂಚಾರ ಇಲಾಖೆ ಸಾಕಷ್ಯು ಹೊಸ ನಿಯಮವನ್ನು ಜಾರಿಗೊಳಿಸಿದೆ. ಇದರ ಬೆನ್ನಲ್ಲೇ ಇದೀಗ ಅಪ್ರಾಪ್ತ ಮಕ್ಕಳು ವಾಹನ ಚಲಿಸಿದಾಗ ಕೈಗೊಳ್ಳಬೇಕಾದ ನಿಯಮದ ಬಗ್ಗೆ ಮಹತ್ವದ ಆದೇಶವನ್ನು ಹೊರಡಿಸಿದೆ.
ವಾಹನ ಚಲಾಯಿಸಲು ನಿಗದಿತ ವಯೋಮಿತಿಯನ್ನು ಇರಿಸಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸುವುದು ಅಪರಾಧವಾಗಿದೆ. ಇನ್ನು ದ್ವಿಚಕ್ರವಾಹನದಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ಪೋಷಕರು ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡುವ ಮುನ್ನ ಈ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
![Minor Driving Rules Update](https://nadunudi.in/wp-content/uploads/2024/06/Minor-Driving-Rules-Update-1.png)
ನಿಮ್ಮ ಮಕ್ಕಳಿಗೆ ಬೈಕ್ ಕೊಟ್ರೆ ಕಟ್ಟಬೇಕು 25 ಸಾವಿರ
ಜೂನ್ 19 ರಂದು ತೀರ್ಥಹಳ್ಳಿ ಪಟ್ಟಣದ ದೊಡ್ಮನೆ ಕೇರಿ ಬಳಿ ತೀರ್ಥಹಳ್ಳಿ ಪೊಲೀಸರು ಬೈಕ್ ತಪಾಸಣೆ ನಡೆಸುತ್ತಿದ್ದಾಗ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ಬೈಕ್ ಚಲಾಯಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದ. ಈ ಸಂಬಂಧ ಪೊಲೀಸರು ಬೈಕ್ ಮಾಲೀಕನ ತಂದೆ ಮಹಮ್ಮದ್ ಹಯಾನ್ ವಿರುದ್ಧ ತೀರ್ಥಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರು ತೀರ್ಥಹಳ್ಳಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ತೀರ್ಥಹಳ್ಳಿಯ ಜೆಎಂಎಫ್ ಸಿ ನ್ಯಾಯಾಧೀಶರು ಜೂ.21 ರಂದು ದ್ವಿಚಕ್ರ ವಾಹನದ ಮಾಲೀಕ ಬಾಲಕನ ತಂದೆಗೆ 25 ಸಾವಿರ ರೂ. ದಂಡ ವಿಧಿಸಿದೆ. ಅಪ್ರಾಪ್ತರು ವಾಹನದೊಂದಿಗೆ ರಸ್ತೆಗಿಳಿದರೆ 25 ಸಾವಿರ ಪೋಷಕರು 25 ಸಾವಿರ ಕಟ್ಟುವುದು ಕಡ್ಡಾಯ.
![Minor Driving Latest News](https://nadunudi.in/wp-content/uploads/2024/06/Minor-Driving-Latest-News.png)