ವಿಶ್ವದ ಅತೀ ದುಬಾರಿ ತರಕಾರಿ ಇದು, ವಿಶ್ವದ ದೊಡ್ಡ ಶ್ರೀಮಂತರೇ ಇದನ್ನ ಖರೀದಿಸುವುದಿಲ್ಲ, ಬೆಲೆ ಎಷ್ಟು ಗೊತ್ತಾ.

ಸಾಮಾನ್ಯವಾಗಿ ಈ ಭೂಮಿಯ ಮೇಲೆ ಎಲ್ಲರೂ ಕೂಡ ತರಕಾರಿ ಸೇವನೆ ಮಾಡುತ್ತಾರೆ ಎಂದು ಹೇಳಬಹುದು. ತರಕಾರಿಗಳಲ್ಲಿ ಮಾನವನ ದೇಹಕ್ಕೆ ಬೇಕಾಗುವಂತಹ ಕೆಲವು ಪೋಷಕಾಂಶಗಳು ಇದ್ದು ಜನರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನ ಸೇವನೆ ಮಾಡಿದರೆ ಆತನ ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು ಎಂದು ಹೇಳಬಹುದು. ಇನ್ನು ಮಾಂಸದ ಬೆಲೆಗಳಿಗೆ ಹೋಲಿಕೆ ಮಾಡಿದರೆ ತರಕಾರಿಗಳ ಬೆಲೆ ತುಂಬಾ ಕಡಿಮೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಭೂಮಿಯ ಮೇಲೆ ನಾನಾರೀತಿಯ ತರಕಾರಿಗಳು ಇದ್ದು ಕೆಲವು ತರಕಾರಿಗಳ ಬೆಲೆ ಸ್ವಲ್ಪ ಜಾಸ್ತಿಯಾದರೆ ಇನ್ನೂ ಕೆಲವು ತರಕಾರಿಗಳ ಬೆಲೆ ತೀರಾ ಕಡಿಮೆ ಎಂದು ಹೇಳಬಹುದು.

ಇನ್ನು ಈಗ ವಿಷಯಕ್ಕೆ ಬರುವುದಾದರೆ, ಸ್ನೇಹಿತರೆ ನಾವು ಹೇಳುವ ಈ ತರಕಾರಿಯ ಬೆಲೆ ಇಡೀ ಪ್ರಪಂಚದಲ್ಲೇ ಬಹಳ ದುಬಾರಿಯಾಗಿದ್ದು ಈ ತರಕಾರಿಯನ್ನ ಕೊಳ್ಳಲು ವಿಶ್ವದ ದೊಡ್ಡ ದೊಡ್ಡ ಶ್ರೀಮಂತರೇ ಹಿಂದೆಮುಂದೆ ನೋಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಈ ತರಕಾರಿ ಯಾವುದು ಮತ್ತು ಈ ತರಕಾರಿಯ ಬೆಲೆ ಯಾಕೆ ಇಷ್ಟು ಜಾಸ್ತಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ 50 ರಿಂದ 60 ರೂಪಾಯಿಯ ತನಕ ಇರುತ್ತದೆ ಮತ್ತು ದೊಡ್ಡ ದೊಡ್ಡ ಮಾಲ್ ಗಳಲ್ಲಿ 100 ರೂಪಾಯಿ ತನಕ ಇರುತ್ತದೆ.

Half shoots

ಸ್ನೇಹಿತರೆ ನಾವು ಹೇಳುವ ಈ ತರಕಾರಿ ಮಾತ್ರ ವಿಶ್ವದಲ್ಲೇ ಅತೀ ದುಬಾರಿಯಾದ ತರಕಾರಿಯಾಗಿದ್ದು ಈ ತರಕಾರಿಯನ್ನ ಖರೀದಿ ಮಾಡಲು ವಿಶ್ವದ ದೊಡ್ಡ ದೊಡ್ಡ ಶ್ರೀಮಂತರೇ ಹಿಂದೇಟು ಹಾಕುತ್ತಾರೆ ಎಂದು ಹೇಳಬಹುದು. ಸ್ನೇಹಿತರೆ ನಾವು ಹೇಳುವ ಈ ತರಕಾರಿಯ ಬೆಲೆ 1000 ಯುರೋ, ಭಾರತೀಯ ರೂಪಾಯಿಗೆ ಹೋಲಿಕೆ ಮಾಡಿದರೆ ಇದರ ಬೆಲೆ ಸುಮಾರು 80000 ಸಾವಿರ ರೂಪಾಯಿ. ಸ್ನೇಹಿತರೆ ಇಷ್ಟು ದುಬಾರಿಯ ಈ ತರಕಾರಿಯ ಹೆಸರು ಹಾಪ್ ಶೂಟ್ಸ್ (hop shoots). ಸ್ನೇಹಿತರೆ ಈ ತರಕಾರಿಯಲ್ಲಿ ಇರುವ ಹೂವನ್ನ ಹಾಫ್ ಕೊನ್ಸ್ ಎಂದು ಕರೆಯಲಾಗುತ್ತದೆ ಮತ್ತು ಇದರಲ್ಲಿ ಇರುವ ಹೂವನ್ನ ಬಿಯರ್ ತಯಾರಿಸಲು ಬಳಕೆ ಮಾಡಲಾಗುತ್ತದೆ ಮತ್ತು ಕೊಂಬೆಗಳನ್ನ ಆಹಾರವಾಗಿ ಬಳಕೆ ಮಾಡಲಾಗುತ್ತದೆ.

ಇನ್ನು ಈ ಹಾಪ್ ಶೂಟ್ಸ್ ತರಕಾರಿಯಲ್ಲಿ ಔಷಧೀಯ ಗುಣ ಹೇರಳ ಪ್ರಮಾಣದಲ್ಲಿ ಇದೆ ಮತ್ತು ಈ ಇದರ ಗಿಡಗಳನ್ನ ಗಿಡಮೂಲಿಕೆಗಾಗಿ ಬಳಕೆ ಮಾಡಲಾಗುತ್ತದೆ. ಈ ತರಕಾರಿ ಹಲ್ಲು ನೋವಿಗೆ ಬಹಳ ಪರಿಣಾಮಕಾರಿಯಂತೆ. ಕ್ಷಯ ರೋಗಕ್ಕೆ ಚಿಕಿತ್ಸೆ ನೀಡಲು ಇದರ ಗಿಡವನ್ನ ಬಳಕೆ ಮಾಡಲಾಗುತ್ತದೆ ಮತ್ತು ಅಷ್ಟೇ ರೋಗ ನಿರೋಧಕ ಗುಣಗಳನ್ನ ಈ ತರಕಾರಿ ಹೇರಳ ಪ್ರಮಾಣದಲ್ಲಿ ಹೊಂದಿದೆ ಎಂದು ಹೇಳಬಹುದು. ಜನರು ಹಾಪ್ ಶೂಟ್ಸ್ ಅನ್ನು ಹಸಿಯಾಗಿಯೂ ತಿನ್ನುತ್ತಾರೆ, ಇದು ಸ್ವಲ್ಪ ಕಹಿಯಾಗಿದೆ. ಇದರ ಕೊಂಬೆಗಳನ್ನು ಸಲಾಡ್ ನಲ್ಲಿ ಬಳಸುತ್ತಾರೆ. ಇದರಿಂದ ಉಪ್ಪಿನಕಾಯಿ ಸಹ ಮಾಡುತ್ತಾರೆ. ಇದು ತುಂಬಾ ರುಚಿಕರ ಮತ್ತು ತಿನ್ನಲು ಪ್ರಯೋಜನಕಾರಿಯಾಗಿದೆ. ಹಾಪ್ ಶೂಟ್ಸ್ ನಲ್ಲಿ ಔಷಧೀಯ ಗುಣಗಳನ್ನು 100 ಶತಮಾನದ ಹಿಂದೆ ಗುರುತಿಸಲಾಯಿತು ಮತ್ತು ಹಿಂದಿನ ಜನ ಇದನ್ನು ಬಿಯರ್ ಜತೆ ಬೆರೆಸಿ ಕುಡಿಯುತ್ತಿದ್ದರು. ಸ್ನೇಹಿತರೆ ಈ ತರಕಾರಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Half shoots

Join Nadunudi News WhatsApp Group