ಸೂರ್ಯವಂಶ ಚಿತ್ರದ ನಟಿ ಇಶಾ ಕೊಪ್ಪಿಕರ್ ನಿಜಜೀವನದಲ್ಲಿ ಏನಾಗಿದ್ದಾರೆ ಗೊತ್ತಾ…ನೋಡಿ

ಬಾಲಿವುಡ್ ಚಿತ್ರರಂಗ ಸೇರಿದಂತೆ ಕನ್ನಡ , ತೆಲುಗು, ತಮಿಳು, ಮರಾಠಿ ಚಿತ್ರಗಳಲ್ಲಿ ಮಿಂಚಿದ ಪಂಚ ಭಾಷಾ ನಟಿ ಎಂದರೆ ಇಶಾ ಕೊಪ್ಪಿಕರ್ ಅವರು. 1976 ರಲ್ಲಿ ಮುಂಬೈನಲ್ಲಿ ಜನಿಸಿದ ಈ ನಟಿ ಮೊದ ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ನಂತರ 1998 ರಲ್ಲಿ ಚಂದ್ರಲೇಖ ಎಂಬ ತೆಲುಗು ಸಿನಿಮಾ ಮೂಲಕ ತಮ್ಮ ಬಣ್ಣದ ಬದುಕನ್ನು ಪ್ರಾರಂಭಿಸುತ್ತಾರೆ. ಇನ್ನು ಸೂರ್ಯವಂಶ ಎಂಬ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸಿದ ಇಶಾ, ಪಂಚ ಭಾಷೆಯಲ್ಲಿ ಸುಮಾರು ೫೦ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸೂರ್ಯವಂಶ ಚಿತ್ರದ ಇವರ ಪಾತ್ರವನ್ನು ಇಂದಿಗೂ ಯಾರು ಮರೆಯಲು ಸಾಧ್ಯವಿಲ್ಲ.
ಸಾಮಾನ್ಯ ನನ್ನ ಮದುವೆಯಾಗಿ ನಂತ್ರ ಊರಿನ ಜಿಲಾಧಿಕಾರಿಯಾಗುವ ಈಕೆಯ ಆ ನಟನೆಗೆ ಹಲವಾರು ಜನ ಪ್ರಶಂಸೆ ವ್ಯಕ್ತಮಾಡಿದ್ದರು ಈ ಮುದ್ದು ಮುಖದ ಸುಂದರಿ ಕನ್ನಡದಲ್ಲಿ ನಾಲ್ಕು ಸಿನಿಮಾದಲ್ಲಿ ಅಭಿನಯಿಸಿ ತನ್ನದೇ ಆದ ಛಾಪು ಮೂಡಿಸಿದ್ದು, ಭಾರತದ ಮೋಸ್ಟ್ ಗ್ಲಾಮರಸ್ ಹೀರೋಯಿನ್ ಅಂತಾನೆ ಕರೆಸಿಕೊಳ್ಳುವ ಈಶಾ ಕೊಪ್ಪಿಕರ್ ಇದೀಗ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.

Isha Koppikar on Twitter: "Playing Sub inspector Jayanti Javadekar on  Fixerr has been a really exciting experience. I got to play the character  of a police officer once again and got to

ಸಾಕಷ್ಟು ವರುಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಇಶಾ ಕೊಪ್ಪಿಕರ್ ಮತ್ತೆ ಚಿತ್ರರಂಗಕ್ಕೆ ಹಿಂತಿರುಗಿದ್ದು, ಎರಡು ವರುಷದ ಹಿಂದೆಯಷ್ಟೆ ತೆರೆಕಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕವಚ ಚಿತ್ರದ ಮೂಲಕ ಮತ್ತೊಮ್ಮೆ ಕಮ್ ಬ್ಯಾಕ್ ಮಾಡಿದ್ದರು. ಇದೀಗ ಬಾಲಿವುಡ್ ನಲ್ಲಿಯೂ ಕೂಡ ಅಭಿನಯಿಸುತ್ತಿರುವ ಇವರು ಸುಮಾರು ೨೧ ವರ್ಷಗಳಿಂದ ಚಿತ್ರರಂಗದಲ್ಲಿ ಉಳಿದಿದ್ದಾರೆ ಹಾಗೂ ಕಾಸ್ಟಿಂಗ್ ಕೌಚ್ ವಿರುದ್ಧ ಕೂಡ ಧ್ವನಿ ಎತ್ತಿದ್ದು ಒಂದು ಸಂದರ್ಶನದಲ್ಲಿ ಕಿಡಿಕಾರಿದ್ದರು .

 

Join Nadunudi News WhatsApp Group

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇರುವ ಕಾರಣ ಅವರಿಗೆ ಬಂದ ಎಷ್ಟೋ ಆಫರ್ ಗಳು ಕೈತಪ್ಪಿ ಬೇರೆಯವರ ಪಾಲಾಗಿದೆ ಎಂದು ಇಶಾ ಹೇಳಿಕೆ ನೀಡಿದ್ದಾರೆ ಮತ್ತು ಸ್ಟಾರ್ ನಟನ ಮೇಲೆ ಗಂಭೀರವಾಗಿ ಅರೋಪ ಮಾಡಿದ್ದರು.2009 ರಲ್ಲಿ ಖ್ಯಾತ ಉದ್ಯಮಿ ಟಿಮ್ಮಿ ನಾರಂಗ್ ಎಂಬುವವರನ್ನು ವಿವಾಹವಾದ ಇಶಾ, 2014 ರಲ್ಲಿ ರಿಯಾನ ಎಂಬ ಮುದ್ದಾದ ಹೆಣ್ಣು ಮಗಳಿಗೆ ಜನುಮ ನೀಡುತ್ತಾರೆ. Suryavamsha - ಸೂರ್ಯವಂಶ Kannada Full Movie | Vishnuvardhan | Isha Koppikar |  Lakshmi | TVNXT - YouTubeಪ್ರಸ್ತುತ ಈ ದಂಪತಿಗಳು ಮುಂಬೈನಲ್ಲಿ ನೆಲೆಸಿದ್ದು, ಸುಖ ಸಂಸಾರ ನಡೆಸುತ್ತಿದ್ದಾರೆ. ಈಗಲೂ ಕೂಡ ಕೆಲವು ಹಿಂದಿ ಹಾಗೂ ತೆಲುಗು ಚಿತ್ರರಂಗದಲ್ಲಿ ಇಶಾ ನಟಿಸುತ್ತಿದ್ದ ಅವಕಾಶ ಸಿಗುವ ತನಕ ಅಭಿನಯಿಸುತ್ತಲೇ ಇರುತ್ತೇನೆ ಎಂದು ಹೇಳಿದ್ದಾರೆ.

Join Nadunudi News WhatsApp Group