ಕೊನೆಗೂ ಮೌನ ಮುರಿದ ಡಿ ಬಾಸ್ ದರ್ಶನ್, ದರ್ಶನ್ ಜಗ್ಗೇಶ್ ಅವರ ಬಗ್ಗೆ ಹೇಳಿದ್ದೇನು ನೋಡಿ, ಇದು ಆತ್ಮೀಯತೆ ಅಂದರೆ.

ಸದ್ಯ ಕಳೆದ ಎರಡು ದಿನಗಳಿಂದ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ಆಗಿ ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಅದೂ ಜಗ್ಗೇಶ್ ಅವರ ವಿಷಯ ಏನು ಹೇಳಿದರೆ ತಪ್ಪಾಗಲ್ಲ. ಹೌದು ಜಗ್ಗೇಶ್ ಆರು ಫೋನ್ ಸಂಭಾಷಣೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಅವಮಾನ ಮಾಡಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ನವರಸ ನಾಯಕ ಜಗ್ಗೇಶ್ ಅವರ ಕೋಪ ಮಾಡಿಕೊಂಡು ಅವರ ಶೂಟಿಂಗ್ ಸೆಟ್ ಗೆ ಮುತ್ತಿಗೆ ಹಾಕಿ ಅವರಿಂದ ಕ್ಷಮೆ ಕೇಳಿಸಿದ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ಹರಿದೈದ್ದು ನಿಮಗೆಲ್ಲ ತಿಳಿದಿರುವ ವಿಚಾರ ಏನು ಹೇಳಿದರೆ ತಪ್ಪಾಗಲ್ಲ.

ಹೌದು ಜಗ್ಗೇಶ್ ಅವರ ಶೂಟಿಂಗ್ ಸ್ಪಾಟ್ ಗೆ ದಿಡೀರ್ ಎಂದು ಬಂದ ದರ್ಶನ್ ಅವರ ಅಭಿಮಾನಿಗಳು ಜಗ್ಗೇಶ್ ಅವರ ತರಾಟೆಗೆ ತೆಗೆದುಕೊಂಡಿದ್ದು ಅವರ ಬಾಯಿಯಲ್ಲಿ ಕ್ಷಮೆ ಕೇಳಿಸಿದ ಘಟನೆ ಮೊನ್ನೆ ನಡೆದಿದ್ದು ಇದು ಜಗ್ಗೇಶ್ ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಕೆಲವರು ದರ್ಶನ್ ಅವರ ಅಭಿಮಾನಿಗಳು ಮಾಡಿದ್ದು ಸರಿ ಎಂದು ಮಾತನಾಡಿಕೊಂಡರೆ ಇನ್ನು ಕೆಲವರು ಅವರ ಮಾಡಿದ್ದು ತಪ್ಪು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ವಿಷಯ ಸದ್ಯ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಕದನವನ್ನೇ ಉಂಟುಮಾಡಿದ್ದು ಸದ್ಯ ಇಡೀ ರಾಜ್ಯದ ಜನರು ಈ ಘಟನೆಗೆ ಸಂಬಂಧಿಸಿದಂತೆ ದರ್ಶನ್ ಅವರು ಏನು ಹೇಳುತ್ತಿದ್ದಾರೆ ಅನ್ನುವುದನ್ನ ನೋಡಲು ಜನರು ಕಾದು ಕುಳಿತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

jaggesh and darshan

ನಿನ್ನೆ ಮೊನ್ನೆ ದರ್ಶನ್ ಅವರ ಅವರು ಮೌನವಾಗಿದ್ದು ಇಂದು ಈ ಘಟನೆಗೆ ಕುರಿತಂತೆ ಮೌನ ಮುರಿದಿದ್ದು ತಮ್ಮ ಅನಿಸಿಕೆಯನ್ನ ಹೇಳಿದ್ದಾರೆ. ಹಾಗಾದರೆ ದರ್ಶನ್ ಅವರು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ದರ್ಶನ್ ಅವರ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಮಾಧ್ಯಮದ ಮುಂದೆ ಮಾತನಾಡಿದ ನಟ ದರ್ಶನ್ ಅವರು “ಜಗ್ಗೇಶ್ ಅವರ ವಿಷಯ ಈಗ ಎಲ್ಲೆಲ್ಲಿಗೋ ಹೋಗುತ್ತಿದೆ ಮತ್ತು ಏನೇನೋ ಆಗುತ್ತಿದೆ” ಎಂದು ಹೇಳಿದ್ದಾರೆ. “ಜಗ್ಗೇಶ್ ಅವರು ನಮ್ಮ ಸೀನಿಯರ್ ಅವರು ಯಾವಾಗಲೂ ನಮ್ಮ ಮುಂದೆ ಇರಬೆಕು ಮತ್ತು ನಾವು ಅವರ ಹಿಂದೇನೆ ಇರಬೇಕು” ಎಂದು ಹೇಳಿದ್ದಾರೆ.

ನಿಜಕ್ಕೂ ನನಗೆ ಇಲ್ಲಿ ಏನಾಗುತ್ತಿದೆ ಅನ್ನುವುದೇ ಗೊತ್ತಿಲ್ಲ ಮತ್ತು ಇದರಲ್ಲಿ ನನ್ನ ಪಾತ್ರ ಏನು ಇಲ್ಲ ಮತ್ತು ಅಲ್ಲಿ ಏನೇನು ನಡೀತು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. “ಜಗ್ಗೇಶ್ ಸರ್ ನನಗೆ ತುಂಬಾ ಆತ್ಮೀಯರು ಮತ್ತು ಅವರು ನನ್ನ ಸೀನಿಯರ್, ನನ್ನ ಅಭಿಮಾನಿಗಳಿಂದ ಜಗ್ಗೇಶ್ ಅವರಿಗೆ ಏನೇ ಬೇಜಾರು ಆಗಿದ್ದರು ನಾನು ಇಲ್ಲಿಂದಲೇ ಅವರಿಗೆ ಸಾರೀ ಕೇಳುತ್ತೇನೆ” ಎಂದು ಮಾಧ್ಯಮದ ಮುಂದೆ ಮಾತನಾಡುವ ಸಮಯದಲ್ಲಿ ದರ್ಶನ್ ಅವರು ಹೇಳಿದ್ದಾರೆ.

Join Nadunudi News WhatsApp Group

jaggesh and darshan

ಅಭಿಮಾನಿಗಳ ಪರವಾಗಿ ದರ್ಶನ್ ಅವರು ಜಗ್ಗೇಶ್ ಅವರ ಬಳಿ ಕ್ಷಮೆಯನ್ನ ಕೇಳಿದ್ದಾರೆ, ಸೀನಿಯರ್ ಗಳು ಏನಾದರು ಮಾತನಾಡಿದರೆ ಅದೂ ನಮ್ಮ ಬಗ್ಗೆ ತಾನೇ ಬೇರೆ ಯಾರ ಬಗ್ಗೆನೂ ಮಾತನಾಡಲು ಸಾಧ್ಯವಿಲ್ಲ ಎಂದು ದರ್ಶನ್ ಅವರು ಸಮಾಧಾನವಾಗಿ ಎಲ್ಲವನ್ನ ವಿವರಿಸಿ ಮಾಧ್ಯಮದ ಮುಂದೆ ಹೇಳಿದ್ದಾರೆ. ದರ್ಶನ್ ಅವರ ಈ ನಡೆಗೆ ಇಡೀ ಚಿತ್ರರಂಗವೇ ಮೆಚ್ಚುಗೆಯನ್ನ ವ್ಯಕ್ತಪಡಿಸಿದೆ ಎಂದು ಹೇಳಬಹುದು. ಸ್ನೇಹಿತರೆ ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group